Top

ನಿನ್ನ ಸನಿಹಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಫಿದಾ

ಟ್ರೇಲರ್ಗೂ, ಸಿನಿಮಾ ರಿಲೀಸ್​ಗೂ ಡೇಟ್ ಫಿಕ್ಸ್

ನಿನ್ನ ಸನಿಹಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಫಿದಾ
X

'ನಿನ್ನ ಸನಿಹಕೆ' ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿವರೆಗೂ ಸೌಂಡ್ ಜೋರಾಗೇ ಇದೆ. ರೀಸೆಂಟಾಗಿ ಹಾಡುಗಳಿಂದ ಸಿನಿಪ್ರಿಯರ ಗಮನ ಸೆಳೆದಿದ್ದ ನಿನ್ನ ಸನಿಹಕೆ, ಸಿನಿಮಾ ಮೂಲಕ ಸೆನ್ಸಾರ್ ಮಂಡಳಿಯ ಗಮನ ಕೂಡ ಸೆಳೆದಿದೆ. ಈ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು, ರಿಲೀಸ್​ ಡೇಟ್ ಕೂಡ ಅನೌನ್ಸ್​ ಆಗಿದೆ.

'ನಿನ್ನ ಸನಿಹಕೆ' ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಅಂತೂ ಇದ್ದೇ ಇತ್ತು. ಚಿತ್ರದ ಪೋಸ್ಟರ್ ನೋಡ್ತಿದ್ರೇನೆ ಇದೊಂದು ಫೀಲ್​ ಗುಡ್ ಸಿನಿಮಾ ಆಗಬಹುದು ಅಂದುಕೊಂಡಿದರು ಸಿನಪ್ರಿಯರು. ಇದೀಗ ಚಿತ್ರದ ಸಾಂಗ್ಸ್​ ನೋಡಿದ್ಮೇಲಂತೂ ಇದೊಂದು ಕ್ಯೂಟ್ ಅಂಡ್ ಬ್ಯೂಟಿಫುಲ್​ ಲವ್​ ಸ್ಟೊರಿ ಅನ್ನೋದು ಕನ್ಫರ್ಮ್​ ಆಗಿದೆ.

'ನಿನ್ನ ಸನಿಹಕೆ' ಈಗಾಗಲೇ ರಿಲೀಸ್​ ಮಾಡಿರುವ ಎಲ್ಲಾ ಹಾಡುಗಳು ಸೋಶಿಯಲ್​ ಮೀಡಿಯಾದಲ್ಲಿ ಮಿಲಿಯನ್​ ವೀವ್ಸ್​ ಹಾಗೂ ಲೈಕ್ಸ್ ಪಡೆದುಕೊಂಡಿದೆ. ಇದೀಗ ನಿನ್ನ ಸನಿಹಕೆ ಸೆನ್ಸಾರ್ ಮಂಡಳಿಯಿಂದಲೂ ಶಹಬ್ಬಾಸ್​ ಅನ್ನಿಕೊಂಡಿದೆ. ಇಡೀ ಚಿತ್ರದಲ್ಲಿ ಒಂದು ಕಟ್ , ಒಂದೂ ಮ್ಯೂಟ್ ಇಲ್ಲದೇ, ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಅಷ್ಟೇಅಲ್ಲ ಸಿನಿಮಾ ರಿಲೀಸ್​ ಡೇಟ್ ಕೂಡ ಫಿಕ್ಸ್​ ಆಗಿದ್ದು, ಏಪ್ರಿಲ್​ 16ಕ್ಕೆ ನಿನ್ನ ಸನಿಹಕೆ ತೆರೆಗೆ ಬರೋದು ಕನ್ಫರ್ಮ್​ ಆಗಿದೆ.

ಇನ್ನು ಏಪ್ರಿಲ್​ 16ಕ್ಕೆ ಸಿನಿಮಾ ರಿಲೀಸ್​ಗೂ ಮುನ್ನ ಏಪ್ರಿಲ್​ 6 ರಂದು ಚಿತ್ರದ ಟ್ರೆಲರ್​ ಬಿಡುಗಡೆಯಾಗಲಿದೆ. ಟ್ರೆಲರ್​​ನ್ನ ಸ್ಯಾಂಡಲ್​ವುಡ್​ ಸ್ಟಾರ್ ನಟರೊಬ್ಬರು ರಿಲೀಸ್​ ಮಾಡಲಿದ್ದಾರೆ.

ಮೊದಲ ಬಾರಿಗೆ ಸೂರಜ್​ ಗೌಡ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಸೂರಜ್​ ಮತ್ತು ಧನ್ಯಾ ರಾಮ್​ಕುಮಾರ್ ಲೀಡ್​ ರೋಲ್ನಲ್ಲಿ ಮಿಂಚಿದ್ದಾರೆ. ಸಿನಿಮಾದ ಸ್ಯಾಂಪಲ್ಸ್​ ನೋಡುತ್ತಿದ್ರೆ, ಸಿನಿಮಾ ಅದ್ದುರಿಯಾಗಿ ಮೂಡಿ ಬಂದಿರೋದರಲ್ಲಿ ನೋ ಡೌಟ್. ಏಪ್ರಿಲ್​ 16ರಂದು ಸಿನಿಮಾ ಕುತೂಹಲಕ್ಕೆ ತೆರೆಬೀಳಲಿದೆ.

Next Story

RELATED STORIES