Top

ಮೇ 28 ಕ್ಕೆ ಥಿಯೇಟರ್ ಅಂಗಳಕ್ಕೆ ಅವತಾರಪುರುಷನ ಎಂಟ್ರಿ

ವತಾರಪುರುಷ ಫನ್​ ಎಂಟರ್ಟೈನರ್​ ಸಿನಿಮಾ ಆಗಿದ್ದು, ಸಾಲು ಸಾಲು ಬಿಗ್​ ಸ್ಟಾರ್ಸ್​ ಸಿನಿಮಾಗಳ ನಂತರ ಅವತಾರಪುರುಷ ತೆರೆಗೆ ಬರ್ಲಿದೆ

ಮೇ 28 ಕ್ಕೆ ಥಿಯೇಟರ್ ಅಂಗಳಕ್ಕೆ ಅವತಾರಪುರುಷನ ಎಂಟ್ರಿ
X

ಬೆಂಗಳೂರು: ವಿಕ್ಟರಿ ಸ್ಟಾರ್​ ಶರಣ್​ ಮೊನ್ನೆಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಶರಣ್​ ಬರ್ತ್​ಡೇ ಸ್ಪೆಷಲ್ಲಾಗಿ ರಿಲೀಸ್​ ಆದ ಅವತಾರ ಪುರುಷ ಟೀಸರ್ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್ ಮಾಡುತ್ತಿದೆ.

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಡಡ್​ ಅವತಾರ ಪುರುಷ ಸಿನಿಮಾ ತನ್ನ ಸ್ಯಾಂಪಲ್​ಗಳ ಮೂಲಕ ಸಖತ್​ ಸುದ್ದಿ ಮಾಡುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಶರಣ್​ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಟೀಸರ್​ವೊಂದು ಸದ್ಯ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಟೈಟಲ್​​ಗೆ ತಕ್ಕಂತೆ ಈ ಟೀಸರ್​ನಲ್ಲಿ ಶರಣ್​ರ ಡಿಫ್ರೆಂಟ್​ ಡಿಫ್ರೆಂಟ್ ಅವತಾರಗಳು ರಿವೀಲ್ ಆಗಿವೆ.

ಅವತಾರ ಪುರುಷ ಟೀಸರ್​ನಲ್ಲಿ ಮಂತ್ರವಾದಿ, ಪೂಜಾರಿ, ಡಾಕ್ಟರ್,ಇನೋಸೆಂಟ್ ಹಾಗೂ ಪೌರಾಣಿಕ ಪಾತ್ರವೊಂದರಲ್ಲೂ ಮಿಂಚಿದ್ದಾರೆ. ಇದರ ಜೊತೆಗೆ ಇದೇ ಟೀಸರ್ನಲ್ಲಿ ಸಿನಿಮಾ ರಿಲೀಸ್​ ಡೇಟ್ ಕೂಡ ರಿವೀಲ್​ ಆಗಿದೆ. ಮೇ 28 ರಂದು ಸಿನಿಮಾ ಥಿಯೇಟರ್ ಅಂಗಳಕ್ಕೆ ಬರೋದಾಗಿ ಡೇಟ್ ಅನೌನ್ಸ್​​ ಮಾಡಿದೆ ಚಿತ್ರತಂಡ.

ಅವತಾರ ಪುರುಷ ಸಿನಿಮಾ ಶುರುವಾದಾಗಿನಿಂದ್ಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಮಾಡ್ತಾನೇ ಇದೆ. ಮೊದಲ ಪೋಸ್ಟರ್ ಮತ್ತು ಮೊದಲ ಟೀಸರ್ ಅದರ ಜೊತೆಗೆ ಚಿತ್ರದ ಕಾಮಿಡಿ ಸೀಕ್ವೆನ್ಸ್​​ವೊಂದು ಈ ಹಿಂದೆ ರಿವೀಲ್​ ಆಗಿತ್ತು. ಇಷ್ಟು ಸ್ಯಾಂಪಲ್​ಗಳು ಕೂಡ ಸಿನಿಮಾ ಮೇಲೆ ಕುತೂಹಲ ಹೆಚ್ಚಿಸುತ್ತಿದೆ.

ಇನ್ನು ಚಿತ್ರದಲ್ಲಿ ಶರಣ್​ಗೆ ಜೋಡಿಯಾಗಿ 2ನೇ ಬಾರಿಗೆ ಆಶಿಕಾ ರಂಗನಾಥ್​ ಮಿಂಚುತ್ತಿದ್ದು, ಸಿಂಪಲ್​ ಸುನಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸಿನಿಮಾದಲ್ಲಿ ಹಿರಿಯ ನಟಿ ಸುಧಾರಾಣಿ, ಭವ್ಯ, ಸಾಯಿಕುಮಾರ್, ಸಾಧು ಕೋಕಿಲಾ, ಶ್ರೀನಗರ ಕಿಟ್ಟಿ, ಬಿ.ಸುರೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಸದ್ಯ ಅವತಾರಪುರುಷ ಫನ್​ ಎಂಟರ್ಟೈನರ್​ ಸಿನಿಮಾ ಆಗಿದ್ದು, ಸಾಲು ಸಾಲು ಬಿಗ್​ ಸ್ಟಾರ್ಸ್​ ಸಿನಿಮಾಗಳ ನಂತರ ಅವತಾರಪುರುಷ ತೆರೆಗೆ ಬರ್ಲಿದೆ.

Next Story

RELATED STORIES