Top

2022ಕ್ಕೆ ತೆರೆಮೇಲೆ ಬರಲಿದೆ ಅವತಾರ್​ 2ನೇ ಅವತಾರ್​

ಮತ್ತೊಮ್ಮೆ ಮೋಡಿ ಮಾಡಲು ಅವತಾರ್​ ಅವತರಿಸಿ ಬರುತ್ತಿದೆ. 2022ಕ್ಕೆ ಅವತಾರ್​ನ ಎರಡನೇ ಅವತಾರ ತೆರಮೇಲೆ ಬರಲಿದೆ.

2022ಕ್ಕೆ ತೆರೆಮೇಲೆ ಬರಲಿದೆ ಅವತಾರ್​ 2ನೇ ಅವತಾರ್​
X

ಅವತಾರ್​ 2 ಸೆಟ್​ನಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೋನ್ (ಚಿತ್ರ : ಜಾನ್ ಲ್ಯಾಂಡೌ)

ಹಾಲಿವುಡ್​ ಸಿನಿಮಾ ಅವತಾರ್​ ಯಾರಿಗೆ ಗೊತ್ತಿಲ್ಲ. ಅವತಾರ್​ ಮೊದಲ ಭಾಗವನ್ನ ನೋಡಿ ಥ್ರಿಲ್​ ಆಗಿರೋ ಸಿನಿಪ್ರಿಯರು ಅವತಾರ್​-2ಗಾಗಿ ಕಾತುರದಿಂದ ಕಾಯ್ತಾ ಇದ್ದಾರೆ. ಆದರೆ ಈಗ ಅವತಾರ್​ ಚಿತ್ರದ 2ನೇ ಅವತಾರ ನೋಡೋದು ಯಾವಾಗ ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಅವತಾರ್ ಈ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಅವತಾರ್ ಸಿನಿಮಾ ಮಾಡಿದ ಮ್ಯಾಜಿಕ್​ಅನ್ನ ಸಿನಿಮಾ ಜಗತ್ತಿನಲ್ಲಿ ಮತ್ಯಾವ ಫಿಲ್ಂ ಕೂಡ ಮಾಡಲು ಸಾಧ್ಯವೇ ಇಲ್ಲ. ಅದೊಂದು ದಂತಕಥೆ. ಅವತಾರ್ ಬಿಡುಗಡೆಯಾಗಿ 10 ವರ್ಷಗಳು ಕಳೆದಿದರೂ ಇಂದಿಗೂ ಕೂಡ ಅದರ ಮೋಡಿ ಕಡಿಮೆ ಆಗಿಲ್ಲ. ಇದೀಗ ಮತ್ತೆ ಅವತಾರ್​ ಸದ್ದು ಮಾಡುತ್ತಿದೆ. ಮತ್ತೊಮ್ಮೆ ಮೋಡಿ ಮಾಡಲು ಅವತಾರ್​ ಅವತರಿಸಿ ಬರುತ್ತಿದೆ. 2022ಕ್ಕೆ ಅವತಾರ್​ನ ಎರಡನೇ ಅವತಾರ ತೆರಮೇಲೆ ಬರಲಿದೆ.

2009ರಲ್ಲಿ ಬಿಡುಗಡೆಯಾಗಿದ್ದ ಅವತಾರ್ ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿ. ಸಾವಿರಾರು ಕೋಟಿ ಬಾಚಿಕೊಂಡಿತ್ತು. ಜೇಮ್ಸ್​ ಕ್ಯಾಮರೂನ್ ನಿರ್ದೇಶನದ ಅವತಾರ್​ ಅದೆಂಥಾ ಕಲೆಕ್ಷನ್ ಮಾಡಿತ್ತು ಅಂದರೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನೇ ಅಲಂಕರಿಸಿತ್ತು. ಬೇರೆ ಯಾವ ಸಿನಿಮಾಗೂ ಅವತಾರ್ ಹತ್ತಿರಕ್ಕೂ ಬರಲು ಕೂಡ ಸಾಧ್ಯವಾಗಿರ್ಲಿಲ್ಲ. ಮಾರ್ವೆಲ್ ಸ್ಟುಡಿಯೋಸ್​ನ ಅವೆಂಜರ್ಸ್​ ಎಂಡ್​ಗೇಮ್​ ತೆರೆಕಂಡ ನಂತರ ಮೊದಲ ಸ್ಥಾನ ಈ ಚಿತ್ರ ತನ್ನದಾಗಿಸಿಕೊಂಡಿತು.

ಅವತಾರ್​ 2ನ ಚಿತ್ರೀಕರಣ ಕಂಪ್ಲೀಟ್ ಆಗಿದೆಯಂತೆ ಕೊರೊನಾ ಲಾಕ್​ಡೌನ್​ ಸಡಿಲಗೊಂಡ ನಂತರ ಈ ಚಿತ್ರತಂಡ ಅವತಾರ್​ 2ನೇ ಸಿನಿಮಾದ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್​ ಸೇರಿಕೊಂಡಿತ್ತು. ನ್ಯೂಜಿಲೆಂಡ್​ನಲ್ಲಿ ಇದೀಗ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದಾರೆ ಜೇಮ್ಸ್ ಕ್ಯಾಮರೋನ್. ಈ ಬಗ್ಗೆ ಟ್ವಿಟರ್​ ಖಾತೆಯಲ್ಲೂ ಮಾಹಿತಿ ಶೇರ್ ಮಾಡಿದ್ದಾರೆ. ಅವತಾರ್​ನ ಸೀಕ್ವೆಲ್​ನಲ್ಲಿ ನೀವು ಜತ್ತಿನ ಹೊಸ ಭಾಗವನ್ನು ನೋಡಲಿದ್ದೀರಿ ಅಂತ ಬರೆದುಕೊಂಡಿದ್ದಾರೆ.

ಎಲ್ಲಾ ಸರಿ ಇದ್ದಿದ್ರೆ ಈ ವರ್ಷವೇ ಅವತಾರ್ 2 ಸಿನಿಮಾ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕೊರೊನಾ ಅಟ್ಟಹಾಸದಿಂದ ನಾಲ್ಕು ತಿಂಗಳು ವ್ಯರ್ಥವಾಗಿ ಹೋಗಿದೆ. ಹೀಗಾಗಿ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿದೆ. 2022ರ ಡಿಸೆಂಬರ್​ಗೆ ಈ ಸಿನಿಮಾ ರಿಲೀಸ್ ಆಗಲಿದೆ ಅಂತ ಕ್ಯಾಮರೂನ್​ ಟ್ವೀಟ್ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ ಅವತಾರ್ ಮೂರನೇ ಭಾಗದ ಚಿತ್ರೀಕರಣ ಕೂಡ ಬಹುತೇಕವಾಗಿ ಮುಗಿದಿದೆ. ಅವತಾರ್​ 3ರ ಚಿತ್ರೀಕರಣ ಶೇ 95ರಷ್ಟು ಮುಗಿದಿದೆ ಅಂತ ಕ್ಯಾಮರೂನ್ ಹೇಳಿಕೊಂಡಿದ್ದಾರೆ.

ಸದ್ಯ ಅವತಾರ್ ಅವತರಣಿಕೆಗೆ ಕಾದು ಕುಳಿತಿದ್ದ ಫಾನ್ಸ್​ಗೆ ಡಬಲ್ ಖುಷಿ ಸಿಕ್ಕಿದೆ. ಅವತಾರ್ 2ನೇ ಭಾಗದ ಜೊತೆಗೆ ಮೂರನೇ ಭಾಗ ಕೂಡ ಮುಂದೆ 2022ಕ್ಕೆ ತೆರೆಮೇಲೆ ಬರಲಿದೆ. ಅವತಾರ್​ -2 ಅದೆಂಥಾ ಮೋಡಿ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Next Story

RELATED STORIES