25 ವರ್ಷ ಎಷ್ಟು ಬೇಗ ಆಯ್ತು ಗೊತ್ತೇ ಆಗುತ್ತಿಲ್ಲ - ನಟ ಕಿಚ್ಚ ಸುದೀಪ್
ನಾಳೆಯಿಂದ 26 ನೇ ವರ್ಷಕ್ಕೆ ಕಾಲಿಡುತ್ತಾ ಇದ್ದೇನೆ.

ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನಲ್ಲಿ ಬೆಳ್ಳಿಹಬ್ಬ ಸಂಭ್ರಮ ಆಚರಣೆ ಮಾಡಿಕೊಳ್ಳಲಿದ್ದಾರೆ.
ಜೊತೆಗೆ ವಿಕ್ರಾಂತ್ ರೋಣ ಸಿನಿಮಾ ಟೈಟಲ್ ಟೀಸರ್ ಹಾಗೂ ಸುದೀಪ್ ಅವರ ಕಟೌಟ್ಅನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಅನಾವರಣ ಮಾಡಲು ಚಿತ್ರತಂಡ ಸಿದ್ಧವಾಗಿದೆ.
ನಾಳೆ(ಜ.31)ರಂದು ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ 180 ಕ್ಷಣಗಳ ಟೀಸರ್ ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್ ಮತ್ತು ಚಿತ್ರತಂಡ ಮೂರು ದಿನಗಳ ಹಿಂದೆಯೇ ದುಬೈ ತಲುಪಿದ್ದಾರೆ.
ಈ ಬಗ್ಗೆ ದುಬೈನಿಂದಲೇ ಡಿಜಿಟಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, ನಾಳೆಯಿಂದ 26 ನೇ ವರ್ಷಕ್ಕೆ ಕಾಲಿಡುತ್ತಾ ಇದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬಂದು 25 ವರ್ಷ ಆಯ್ತು. 26ನೇ ವರ್ಷಕ್ಕೆ ಕಾಲಿಡುವ ಮುನ್ನ ಇಂದು ಮಾತನಾಡುತ್ತಾ ಇದೀನಿ. ಇಷ್ಟು ವರ್ಷ ಎಷ್ಟು ಬೇಗ ಆಯ್ತು ಗೊತ್ತೇ ಆಗುತ್ತಿಲ್ಲ ಎಂದಿದ್ದಾರೆ.
ಮೊದಲು ನನ್ನ ಸಿನಿಮಾ ನೋಡೋಕೆ ಥಿಯೇಟರ್ನಲ್ಲಿ ಐದು ಜನ ಇರಲಿಲ್ಲ, ಗೋವರ್ಧನ್ ಚಿತ್ರಮಂದಿರದಲ್ಲಿ ಸಿನಿಮಾ ಥಿಯೇಟರ್ನಲ್ಲಿ ಐದು ಇದ್ದರು. ಮೇನಕಾ ಸಿನಿಮಾದಲ್ಲಿ ಎಂಟು ಮಂದಿ ಇದ್ದರು ಎಂದು ತಮ್ಮ ಸಿನಿಮಾ ಜರ್ನಿ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಸದ್ಯ ನಾನು ಸಿನಿಮಾಗೆ ಡೈರೆಕ್ಟರ್ ಆಗಲು ಬಂದವನು. ಮೈ ಆಟೋಗ್ರಾಫ್ ಸಿನಿಮಾ ಸಕ್ಸಸ್ಗೆ ನಮ್ಮ ಕುಟುಂಬದ ಸಪೋರ್ಟ್ ಜಾಸ್ತಿ ಇತ್ತು. ಸಾಲ ಮಾಡಿ ಸಿನಿಮಾ ಮಾಡಿದೆ ಎಂದು ಸುದೀಪ್ ಅವರು ಹೇಳಿದ್ದಾರೆ.