Top

ದುನಿಯಾ ವಿಜಯ್ ಅಭಿಮಾನಿಗಳಿಂದ ಸಲಗ ಕಪ್

ವಿಜಿ ಅಭಿಮಾನಿಗಳು ರಾಜ್ಯಾದ್ಯಂತ ಸಲಗ ಕಪ್​ ಕ್ರಿಕೆಟ್ ಟೂರ್ನಿಯನ್ನ ನಡೆಸುತ್ತಿದ್ದಾರೆ

ದುನಿಯಾ ವಿಜಯ್ ಅಭಿಮಾನಿಗಳಿಂದ ಸಲಗ ಕಪ್
X

ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾದ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಅಭಿಮಾನಿಗಳಂತೂ ಸಲಗ ಟ್ಯಾಟೂ ಹಾಕಿಸಿಕೊಂಡಿದ್ದು ಆಯ್ತು. ಸಲಗ ಶಾಸನ ರಚಿಸಿದ್ದು ಆಯ್ತು. ಇದೀಗ ವಿಜಿ ಅಭಿಮಾನಿಗಳು ರಾಜ್ಯಾದ್ಯಂತ ಸಲಗ ಕಪ್​ ಕ್ರಿಕೆಟ್ ಟೂರ್ನಿಯನ್ನ ನಡೆಸ್ತಿದ್ದಾರೆ. ಮೊದಲ ಕ್ರಿಕೆಟ್ ಟೂರ್ನಿ ಮಾಲೂರಿನಲ್ಲಿ ನಡೆದಿದೆ.

ದುನಿಯಾ ವಿಜಯ್​ ನಟನೆ ನಿರ್ದೇಶನದ ಸಲಗ ಸಿನಿಮಾ ದೊಡ್ಡಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈಗಾಗಲೇ ಟ್ರೆಲರ್, ಹೀರೋ ಇಂಟ್ರೋಡಕ್ಷನ್​ ಸಾಂಗ್, ಸೂರಿ ಅಣ್ಣ ಸಾಂಗ್​, ಹೀಗೆ ಚಿತ್ರದ ಎಲ್ಲಾ ಸ್ಯಾಂಪಲ್​ಗಳು, ಸಲಗ ಚಿತ್ರವನ್ನ ನೆಕ್ಸ್​​ ಲೆವೆಲ್​ಗೆ ತೊಗೊಂಡ್​ ಹೋಗ್ತಾಯಿದೆ.

ಸಲಗ ಚಿತ್ರದ ಕ್ರೇಜ್​ ಎಷ್ಟಿದೆ ಅಂದ್ರೆ ಈಗಾಗಲೇ ದುನಿಯಾ ವಿಜಯ್​ ಅಭಿಮಾನಿಗಳು, ಸಲಗ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಷ್ಟೇಅಲ್ಲ ಅಭಿಮಾನಿಯೊಬ್ಬ ಸಲಗ ಶಾಸನವೊಂದನ್ನ ರಚಿಸಿದ್ದು ಆಗಿದೆ. ಇದೀಗ ರಾಜ್ಯಾದ್ಯಂತ ದುನಿಯಾ ವಿಜಯ್​ ಅಭಿಮಾನಿಗಳು ಸಲಗ ಕಪ್​ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ಏರ್ಪಡಿಸಿದ್ದಾರೆ. ಸದ್ಯ ಮೊದಲ ಕ್ರಿಕೆಟ್ ಪಂದ್ಯ ಮಾಲೂರಿನಲ್ಲಿ ನಡೆದಿದೆ.

ಮಾಲೂರಿನಲ್ಲಿ ನಡೆದ ಮೊದಲ ಸಲಗ ಕಪ್​ ನೋಡಲು, ಕೋಲಾರ ಜಿಲ್ಲೆಯ ವಿವಿಧೆಡೆಯಿಂದ ಅಭಿಮಾನಿಗಳ ದಂಡೇ ಆಗಮಿಸಿತ್ತು. ಸಾಕಷ್ಟು ತಂಡಗಳು ಈ ಸಲಗ ಕಪ್​ನಲ್ಲಿ ಭಾಗವಹಿಸಿದರು. ವಿಶೇಷ ಅಂದ್ರೆ ಸಲಗ ಚಿತ್ರತಂಡ ಕೂಡ ಒಂದು ಟೀಂ ಕಟ್ಟಿಕೊಂಡು, ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸಿದರು. ಅಭಿಮಾನಿಗಳನ್ನ ಪ್ರೊತ್ಸಾಹಿಸಲು ಪ್ರದರ್ಶನ ಪಂದ್ಯವನ್ನಾಡಿದರು.

ಇನ್ನು ಮಾಲೂರಿಗೆ ಬೇಟಿ ಕೊಟ್ಟಿದ್ದ ದುನಿಯಾ ವಿಜಯ್​, ಅಲ್ಲಿರುವ ಡಾ.ರಾಜ್​ಕುಮಾರ್ ಮತ್ತು ಡಾ.ವಿಷ್ಣುವರ್ಧನ್​ರವರ ಪುತ್ತಳಿಗೆ ಹೂಮಾಲೆ ಅರ್ಪಿಸಿ, ಆಶೀರ್ವಾದ ಪಡೆದರು.

ದುನಿಯಾ ವಿಜಯ್​ ಮಾಲೂರಿಗೆ ಭೇಟಿ ನೀಡಿದ್ದು ,ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಅಂದ್ಹಾಗೇ ಮುಂದಿನ ದಿನಗಳಲ್ಲಿ ಆಯಾ ಊರುಗಳಲ್ಲಿ ವಿಜಿ ಅಭಿಮಾನಿಗಳು ಸಲಗ ಕಪ್​ ಏರ್ಪಡಿಸಲಿದ್ದಾರೆ. ಈಗಾಗಲೇ ಮೈಸೂರು, ಚಿತ್ರದುರ್ಗ, ಹೊಸಪೇಟೆ ಮುಂತಾದ ಕಡೆ ಸಲಗ ಕಪ್​ಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ.

Next Story

RELATED STORIES