Top

ಸಪ್ತಸಾಗರದಾಚೆಯಲ್ಲಿ ಸಿಂಪಲ್ ಸ್ಟಾರ್ ವರ್ಕ್ ಶಾಪ್

ಏಪ್ರಿಲ್ ಮೊದಲ ವಾರದಿಂದ ಶೂಟಿಂಗ್ ಶುರು

ಸಪ್ತಸಾಗರದಾಚೆಯಲ್ಲಿ ಸಿಂಪಲ್ ಸ್ಟಾರ್ ವರ್ಕ್ ಶಾಪ್
X

ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಸಪ್ತಸಾಗರದಾಚೆ ಎಲ್ಲೋ ರೀಸೆಂಟಾಗಿ ಮುಹೂರ್ತ ಮುಗಿಸಿ, ಸಿನಿಮಾಗೆ ಚಾಲನೆ ಕೊಟ್ಟಿದರು. ಇದೀಗ ಶೂಟಿಂಗ್​​ ಅಖಾಡಕ್ಕೆ ಇಳಿಯೋಕ್ಕು ಮೊದಲು ರಕ್ಷಿತ್​ ಶೆಟ್ಟಿ ವರ್ಕ್​ಶಾಪ್​ ಮಾಡುತ್ತಿದ್ದಾರೆ. ಈ ವರ್ಕ್ ಶಾಪ್​ ಒಂಥರಾ ಡಿಫ್ರೆಂಟಾಗಿದೆ.

ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಫಸ್ಟ್ ಟೈಮ್​ ಜೋಡಿಯಾಗಿ ನಟಿಸ್ತಿರೋ ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಹೇಮಂತ್​ರಾವ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ರೀಸೆಂಟಾಗಿ ಸಿನಿಮಾದ ಅದ್ದೂರಿ ಮುಹೂರ್ತ ಮಾಡಿದ ಚಿತ್ರತಂಡ ಏಪ್ರಿಲ್​ ಮೊದಲ ವಾರದಲ್ಲಿ ಶೂಟಿಂಗ್​ ಶುರುಮಾಡೋ ಪ್ಲಾನ್​ನಲ್ಲಿದೆ.

ಈಗಾಗ್ಲೇ ಗೊತ್ತಿರೋ ಹಾಗೇ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಔಟ್ ಅಂಡ್ ಔಟ್ ಲವ್​ ಸ್ಟೋರಿಯಾಗಿದ್ದು, ಚಿತ್ರದಲ್ಲಿ ಸಖತ್​ ಯಂಗ್​ ಅಂಡ್ ಡಿಫ್ರೆಂಟ್ ಲುಕ್​ನಲ್ಲಿ ಮಿಂಚ್ತಿದ್ದಾರೆ ಸಿಂಪಲ್​ ಸ್ಟಾರ್. ಸಿನಿಮಾದ ಕಥಾಹಂದರ ಕಂಪ್ಲೀಟ್ ಆಗಿ ನಾಯಕ ನಾಯಕಿಯ ಸುತ್ತಲೇ ಸುತ್ತುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಬಹಳ ಮುಖ್ಯವಾಗುತ್ತಂತೆ. ಅದರ ಜೊತೆಗೆ ಇಬ್ಬರು ತಮ್ಮ ಪಾತ್ರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋ ಸಲುವಾಗಿ, ಶೂಟಿಂಗ್​ಗೂ ಮೊದಲು ವರ್ಕ್ ಶಾಪ್​ ಶುರುಮಾಡಲಾಗಿದೆ.

ನಿರ್ದೇಶಕ ಹೇಮಂತ್​ರಾಮ್​ ಇವರಿಬ್ಬರೂ ಡಿಫ್ರೆಂಟಾಗಿ ವರ್ಕ್ ಶಾಪ್​ ಮಾಡಿಸಿದ್ದು, ಇಬ್ಬರೂ ಒಟ್ಟಾಗಿ ಅಡುಗೆ ಮಾಡುವುದು, ವ್ಯಾಯಾಮ ಮಾಡೋದು, ಒಂದೇ ಥರದ ಮ್ಯೂಸಿಕ್​ ಕೇಳುವುದು, ಕಣ್ಣಾಮುಚ್ಚಾಲೆ ಆಡೋದು, ಗೇಮ್​ ಆಡುವುದು, ಈ ರೀತಿಯಾದ ವರ್ಕ್​ಶಾಪ್​ ನಡೀತಿದೆ. ಈ ಫೋಟೋಗಳನ್ ಸ್ವತಃ ರಕ್ಷಿತ್ ಶೆಟ್ಟಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯಾವುದೇ ಪಾತ್ರವಾದರು ಅದರ ಪರಕಾಯ ಪ್ರವೇಶ ಮಾಡಿಬಿಡ್ತಾರೆ. ಈಗಾಗಲೇ ಹೇಮಂತ್ ಮತ್ತು ರಕ್ಷಿತ್ ಕಾಂಬೋ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ವರ್ಕೌಟ್ ಆಗಿತ್ತು. ಈಗ ಮತ್ತದೇ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಿರೋ ಈ ಚಿತ್ರದ ಬಗ್ಗೆ ಸಹಜವಾಗೇ ನಿರೀಕ್ಷೆ ಹೆಚ್ಚಿದೆ. ರಕ್ಷಿತ್ ಕೂಡ ಪಾತ್ರಕ್ಕೆ ಬೇಕಾದಂತ ಸಿದ್ದತೆ ಗಳನ್ನ ಮಾಡ್ಕೊಳ್ತಿದ್ದಾರೆ.

ಸಪ್ತಸಾಗರದಾಚೆ ಎಲ್ಲೋ ಚಿತ್ರ ಟೈಟಲ್​ನಿಂದ್ಲೇ ಹೆಚ್ಚು ಕುತೂಹಲ ಮೂಡಿಸಿತ್ತು ನಂತರ ಸಿಂಪಲ್​ ಸ್ಟಾರ್​ ಲುಕ್​ , ಕುತೂಹಲವನ್ನ ಮತ್ತಷ್ಟು ಹೆಚ್ಚು ಮಾಡಿತ್ತು. ಇದೀಗ ವರ್ಕ್​ಶಾಪ್​ ನಡೀತಿದ್ದು, ಮುಂದಿನವಾರ ಶೂಟಿಂಗ್​ ಶುರುವಾಗಲಿದ್ಯಂತೆ.

Next Story

RELATED STORIES