Top

ಚಿತ್ರರಂಗದಲ್ಲಿ 35 ವರ್ಷ ಪೂರೈಸಿದ ಶಿವರಾಜ್‌ಕುಮಾರ್

ತಮ್ಮ 35 ವರ್ಷಗಳ ಕರಿಯರ್ನಲ್ಲಿ ಶಿವಣ್ಣ 120ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ.

ಚಿತ್ರರಂಗದಲ್ಲಿ 35 ವರ್ಷ ಪೂರೈಸಿದ ಶಿವರಾಜ್‌ಕುಮಾರ್
X

35 ವರ್ಷದ ಸಿನಿ ಜರ್ನಿಯನ್ನ ಪೂರೈಸಿರೋ ಹ್ಯಾಟ್ರಿಕ್ ಹೀರೋ. ನೆಚ್ಚಿನ ನಟನ ಸಂಭ್ರಮವನ್ನ ಡಬಲ್​ ಮಾಡಿದ ಅಭಿಮಾನಿಗಳು. 35 ವರ್ಷಕ್ಕೆ 35 ಕೆಜಿ ಕೇಕ್​ ಕಟ್ ಮಾಡಿಸಿದ ಫ್ಯಾನ್ಸ್​.

ಶಿವರಾಜ್​ ಕುಮಾರ್​ ಈ ಹೆಸರು ಕೇಳಿದ ಕೂಡಲೇ ಅದೇನೂ ಗೌರವಭಾವ ಮನಸ್ಸಿನಲ್ಲಿ ಮೂಡುತ್ತೆ. ಶಿವಣ್ಣ ಇದೊಂದು ಕೇವಲ ಹೆಸರಲ್ಲ ಅದೊಂದು ಭಾವನೆ. ಚಂದನವನದ ಹೆಮ್ಮೆ ಇವರು. ಸ್ಯಾಂಡಲ್​​ವುಡ್​ ಲೀಡರ್​, ಹ್ಯಾಟ್ರಿಕ್​ ಹೀರೋ. ಸೆಂಚುರಿ ಸ್ಟಾರ್ಶಿವಣ್ಣ ಕನ್ನಡ ಚಿತ್ರರಂಗದ ಕೀರ್ತಿ ಕಳಶ. ಸ್ಯಾಂಡಲ್​ವುಡ್​ ಮೇರುಪರ್ವತ ಇದಕ್ಕೆ ಅನ್ಸುತ್ತೆ. ಇಡೀ ಕರ್ನಾಟಕವೇ ಇವರನ್ನ ಪ್ರೀತಿಯಿಂದ ಶಿವಣ್ಣ ಅಂತ ಕರೆಯುತ್ತೆ. ಇಂತಹ ಶಿವರಾಜ್​ ಕುಮಾರ್​ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷ ತುಂಬಿದೆ.

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಚಿತ್ರರಂಗಕ್ಕೆ ಕಾಲಿಟ್ಟು ಮೂವತೈದು ವರ್ಷಗಳು ಕಳೆದಿವೆ. ಚಿತ್ರರಂಗದಲ್ಲಿ 35 ವರ್ಷ ಪೂರೈಸಿದ ಸೆಂಚುರಿ ಸ್ಟಾರ್​ಗೆ ಅಭಿಮಾನಿಗಳು ಸನ್ಮಾನ ಮಾಡಿದ್ದಾರೆ. ಶಿವರಾಜ್ಕುಮಾರ್ಮನೆಯಲ್ಲಿ 35 ಕೆ.ಜಿ. ತೂಕದ ಕೇಕ್​ ಮೂಲಕ ಸಂಭ್ರಮಿಸಿದ್ದಾರೆ.

'ಶಿವರಾಜ್​​ಕುಮಾರ್​ ಚಿತ್ರರಂಗಕ್ಕೆ ಕಾಲಿಟಿದ್ದು ಆನಂದ್​ ಸಿನಿಮಾದ ಮೂಲಕ. ಶಿವಣ್ಣ ಹೀರೋ ಆಗಿ ನಟಿಸಿದ್ದ 'ಆನಂದ್' ತೆರೆಕಂಡಿದ್ದು 1986ರ ಜೂನ್ 19ರಂದು. ಇಂದು ಆನಂದ್​ ಸಿನಿಮಾಗಾಗಿ ಶಿವಣ್ಣ ಮುಖಕ್ಕೆ ಮೇಕಪ್​ ಹಚ್ಚಿದ ದಿನ. ಇಂಟ್ರೆಸ್ಟಿಂಗ್​ ಸಂಗತಿ ಅಂದ್ರೆ ಶಿವರಾಜ್ ಕುಮಾರ್​ ಆರಂಭದಲ್ಲಿ ನಟಿಸಿದ ಮೂರು ಚಿತ್ರಗಳು ಕೂಡ ಸೂಪರ್ಹಿಟ್ ಆಗಿದ್ವು. ನೂರು ದಿನಗಳನ್ನು ಪೂರೈಸಿದ್ವು. ಇದೇ ಕಾರಣಕ್ಕೆ ಅವರಿಗೆ ಹ್ಯಾಟ್ರಿಕ್​ ಹೀರೋ ಅನ್ನೋ ಬಿರುದು ಬಂದಿದ್ದು.

ಶಿವರಾಜ್​ಕುಮಾರ್​ ಚಿತ್ರರಂಗಕ್ಕೆ 35 ವರ್ಷವಾಗಿದ್ರೂ. ಕಣ್ಣಿನಲ್ಲಿ ಅದೇ ಬೆಂಕಿ ಇದೆ. ದೇಹದಲ್ಲಿ ಆನಂದ್​ ಚಿತ್ರದ ಅದೇ ಟುವ್ವಿ ಟುವ್ವಿ ಎನರ್ಜಿ ಇದೆ. ಎಜ್ಈಸ್ಜಸ್ಟ್ ಎ ನಂಬರ್​ ಅಂತರಲ್ಲಾ ಹಾಗೇ. ಡ್ಯಾನ್ಸ್​​ ಮಾಡಲು ನಿಂತ್ರು ಅಂದ್ರೆ 16ರ ಯುವಕರು ಕೂಡ ನಾಚುವಂತೆ ಸ್ಟೇಪ್​ ಹಾಕ್ತಾರೆ.

ಇನ್ನು 35 ವರ್ಷ ಪೂರೈಸಿದ ಕುರಿತು ಮಾತನಾಡಿದ ಶಿವರಾಜ್ಕುಮಾರ್ ಚಿತ್ರರಂಗದಲ್ಲಿ ಕೈಹಿಡಿದು ನಡೆಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಕೆಲವು ಸಿನಿಮಾಗಳು ಗೆದ್ದಿವೆ, ಕೆಲವು ಸೋತಿವೆ. ಈ ಹೆಸರು, ಸ್ಟಾರ್ ಡಮ್ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದ್ದು ಅಂತ ಹೇಳಿದ್ದಾರೆ.

ತಮ್ಮ 35 ವರ್ಷಗಳ ಕರಿಯರ್ನಲ್ಲಿ ಶಿವಣ್ಣ 120ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ. ಪೋಸ್ಟ್​ ಎಕ್ಸ್​ಪೇಕ್ಟೆಡ್​ ಸಿನಿಮಾ ಭಜರಂಗಿ 2 ಈಗಾಗಲೇ ತೆರೆಗೆ ಬರಲು ಸಿದ್ಧವಾಗಿದೆ. ಆದಾದ ಮೇಲೆ 'ಆರ್ಡಿಎಕ್ಸ್', 'ಭೈರತಿ ರಣಗಲ್' ಸೇರಿದಂತೆ ಒಂದಷ್ಟು ಹೊಸ ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ.

ತಮ್ಮ 56ನೇ ವರ್ಷದಲ್ಲೂ ಶಿವಣ್ಣ ಬಿಝಿ ನಟ. ಹೊಸಬರಿಗೆ ಸ್ಫೂರ್ತಿಯಾಗಿ, ಹಳಬರ ಜತೆಗೆ ಆರೋಗ್ಯಕರವಾದ ಪೈಪೋಟಿ ಇಟ್ಟುಕೊಂಡು ಶಿವಣ್ಣ ತಮ್ಮದೇ ಆದ ದಾರಿಯಲ್ಲಿ ಸ್ಯಾಂಡಲ್​ವುಡ್​ನಲ್ಲಿ ಮುನ್ನುಗ್ಗುತ್ತಿದ್ದಾರೆ. ಅದೇನೆ ಇರ್ಲಿ ಶಿವಣ್ಣನಿಗೆ ಶಿವಣ್ಣನೇ ಸರಿಸಾಟಿ.

Next Story

RELATED STORIES