Top

ಭಜರಂಗಿ 2 ಪೋಸ್ಟರ್ ನೋಡಿ ಥ್ರಿಲ್ ಆದ ಫ್ಯಾನ್ಸ್

ರೌದ್ರತೆಯ ಪ್ರತಿರೂಪ ಭಜರಂಗಿ 2 ಮೋಶನ್ ಪೋಸ್ಟರ್

ಭಜರಂಗಿ 2 ಪೋಸ್ಟರ್ ನೋಡಿ ಥ್ರಿಲ್ ಆದ ಫ್ಯಾನ್ಸ್
X

ಬೆಂಗಳೂರು: ಸ್ಯಾಂಡಲ್​ವುಡ್​ ಮೋಸ್ಟ್ ಅವೇಯ್ಡೆಡ್​ ಸಿನಿಮಾ ಭಜರಂಗಿ 2 ಸ್ಯಾಂಪಲ್​ಗಳ ಮೂಲಕ ಕೂತೂಹಲವನ್ನ ಹೆಚ್ಚು ಮಾಡ್ತಾನೇ ಇದೆ. ಫಸ್ಟ್ ಲುಕ್​ ಪೋಸ್ಟರ್ , ಟೀಸರ್ ಆದ್ಮೇಲೆ ಇದೀಗ ಮೋಶನ್ ಪೋಸ್ಟರ್ ರಿಲೀಸ್​ ಆಗಿದ್ದು, ಈ ಸ್ಯಾಂಪಲ್​ ನೋಡಿ ಶಿವಣ್ಣ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

ಭಜರಂಗಿ 2. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಮತ್ತು ಎ .ಹರ್ಷ ಕಾಂಬಿನೇಷನ್​ನ ಬಹುನಿರೀಕ್ಷಿತ ಸಿನಿಮಾ. ಈ ಹಿಂದೆ ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಟೀಸರ್​ ರಿಲೀಸ್​ ಮಾಡಿತ್ತು ಚಿತ್ರತಂಡ. ಟೀಸರ್ ನೋಡಿ ಅಭಿಮಾನಿಗಳಂತೂ ಸಖತ್​ ಥ್ರಿಲ್​ ಆಗಿದರು. ಟೀಸರ್ನಲ್ಲಿ ಶಿವಣ್ಣನ ಲುಕ್, ಸಿನಿಮಾದ ಅದ್ದೂರಿ ಸೆಟ್, ಹಿರಿಯ ನಟಿ ಶ್ರುತಿ, ಭಾವನಾರ ಲುಕ್​,ರಾ ಮೇಕಿಂಗ್ ಎಲ್ಲದರ ಝಲಕ್​ ನೋಡೋಕ್ಕೆ ಸಿಕ್ಕಿತ್ತು.

ಇದೀಗ ಭಜರಂಗಿ 2 ಮೋಶನ್​ ಪೋಸ್ಟರ್ ರಿಲೀಸ್​ ಆಗಿದೆ. ಮೋಶನ್​ ಪೋಸ್ಟರ್ ಟೀಸರ್​ಗಿಂತಲೂ ಹೆಚ್ಚಿನ ರೌದ್ರತೆಯಿಂದ ಕೂಡಿದೆ. ರಕ್ತ ಪಿಪಾಸು ಕಾಡು ಜನರು, ರುಂಡಗಳೇ ತುಂಬಿರುವ ಗುಹೆ, ಕಾಳಿ ಮಾತೆ ಮೇಲೆ ಚಿಮ್ಮುವ ರಕ್ತದ ದೃಶ್ಯ, ರೋಷಸಿಕ್ತ ಮಹಾ ಮಾಂತ್ರಿಕ ಇವರೆಲ್ಲರುಗಳ ನಡುವೆ ಶಿವಣ್ಣನ ಆ ಹಸಿರು ಕಣ್ಣುಗಳು ಸಖತ್​ ಹೈಲೈಟ್ ಆಗಿದೆ.

ಇನ್ನು ಈ ಮೋಶನ್​ ಪೋಸ್ಟರ್​ನಲ್ಲಿ ಮತ್ತೊಂದು ಹೈಲೈಟ್ ಸೌರವ್​ ಲೋಕೇಶ್​ ಲುಕ್. ಭಜರಂಗಿ ಸಿನಿಮಾದಲ್ಲೂ ಕೂಡ ಬಹಳ ವಿಭೀನ್ನ ಪಾತ್ರ ಮತ್ತು ಡಿಫ್ರೆಂಟ್ ಲುಕ್​ನಲ್ಲಿ ಮಿಂಚಿದ್ದ ಲೋಕೇಶ್​. ಭಜರಂಗಿ 2 ನಲ್ಲಿ ಮತ್ತಷ್ಟು ಭಯಾನಕವಾಗಿ ಕಾಣಿಸಿದ್ದಾರೆ.

2013ರಲ್ಲಿ ತೆರೆಕಂಡಿದ್ದ ಭಜರಂಗಿ ಸಿನಿಮಾ ಸೂಪರ್​ ಹಿಟ್ ಲಿಸ್ಟ್ ಸೇರಿತ್ತು. ಅದರ ಸೀಕ್ವೆಲ್​ ಅನೌನ್ಸ್​ ಆಗಿದ್ದೇ ತಡ ಸಿನಿಮಾ ಬಗ್ಗೆ ಸಖತ್​ ಎಕ್ಸೈಟ್ ಆಗಿದ್ರು ಸಿನಿಪ್ರಿಯರು. ಇದೀಗ ಭಜರಂಗಿ 2 ಸ್ಯಾಂಪಲ್ಸ್​ ನೋಡಿ, ಸಿನಿಮಾ ನೋಡೋಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಶಿವಣ್ಣನ ಅಭಿಮಾನಿಗಳು.

Next Story

RELATED STORIES