Top

ನೀರ್​ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸತೀಶ್​ ನೀನಾಸಂ ಹೊಸ ಸಿನಿಮಾ

ಹೊಸ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಆಗಿದ್ದು, ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ

ನೀರ್​ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸತೀಶ್​ ನೀನಾಸಂ ಹೊಸ ಸಿನಿಮಾ
X

ಅಭಿನಯ ಚತುರ ನೀನಾಸಂ ಸತೀಶ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ. ಆ ಸಿನಿಮಾಗಳ ಲಿಸ್ಟ್​ನಲ್ಲಿ ನಿರ್ದೇಶಕ ವಿಜಯ ಪ್ರಸಾದ್​ ಮತ್ತು ಸತೀಶ್​ ಕಾಂಬಿನೇಷನ್​ನ ಸಿನಿಮಾ ಕೂಡ ಒಂದು. ಸದ್ಯ ಆ ಹೊಸ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಆಗಿದ್ದು, ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ.

ನೀನಾಸಂ ಸತೀಶ್ ಕೈಯ್ಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲೊಂದು ನೀರ್​ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ. ಬಹುದಿನಗಳಿಂದ ಈ ಸಿನಿಮಾ ಬಗ್ಗೆ ಟಾಕ್​ ಕೇಳಿಬರ್ತಿದ್ದೂ, ಇದೀಗ ಚಿತ್ರಕ್ಕೆ ಟೈಟಲ್​ ಕೂಡ ಫಿಕ್ಸ್​ ಆಗಿದ್ದು, ಶೂಟಿಂಗ್​ ಅಖಾಡಕ್ಕೆ ಇಳಿಯೋ ಪ್ಲಾನ್​ನಲ್ಲಿದೆ ಚಿತ್ರತಂಡ.

ಚಿತ್ರಕ್ಕೆ ಪೆಟ್ರೋಮ್ಯಾಕ್ಸ್​ ಅಂತ ಟೈಟಲ್​ ಇಟ್ಟಿದ್ದು, ಇದೇ ತಿಂಗಳು 19ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ರೀಸೆಂಟಾಗಿ ಇಡೀ ಚಿತ್ರತಂಡವನ್ನ ಒಂದೆಡೆ ಸೇರಿಸಿ, ನಿರ್ದೇಶಕ ವಿಜಯಪ್ರಸಾದ್ ಸ್ಕ್ರಿಪ್ಟ್​ ರೀಡಿಂಗ್​ ಕೊಟ್ಟಿದರು. ಅಂದ್ಹಾಗೇ ಈ ವಿಡಿಯೋನ ಸ್ವತಃ ನೀನಾಸಂ ಸತೀಶ್ ಶೇರ್ ಮಾಡಿದ್ದು, ಇದೀಗ ಶೂಟಿಂಗ್​ ಡೇಟ್​ನ್ನ ಅನೌನ್ಸ್​ ಮಾಡಿದ್ದಾರೆ.

ಅಂದ್ಹಾಗೇ ಇವರಿಬ್ಬರ ಕಾಂಬಿನೇಷನ್​ನಲ್ಲಿ ಈ ಹಿಂದೆ ಪರಿಮಳ ಲಾಡ್ಜ್ ಸಿನಿಮಾ ಸೆಟ್ಟೆರಿದ್ದು, ಟೀಸರ್ ಕೂಡ ರಿಲೀಸ್ ಆಗಿತ್ತು..ಆದ್ರೀಗ ಆ ಚಿತ್ರವನ್ನ ಸದ್ಯ ಪಕ್ಕಕ್ಕಿಟ್ಟು, ಪೆಟ್ರೋಮ್ಯಾಕ್ಸ್​ನ್ನ ಕೈಗೆತ್ತಿಕೊಂಡಿದ್ದಾರೆ.

ಲಾಕ್​ಡೌನ್​ ನಂತರ ಒಂದೊಂದೇ ಹೊಸ ಚಿತ್ರಗಳು ಸೆಟ್ಟೇರ್ತಿದ್ದು, ಸಿನಿಮಾ ಸ್ಟಾರ್​ಗಳು ಕೂಡ ಒಬ್ಬೊರಾಗಿಯೇ ಶೂಟಿಂಗ್​ ಅಖಾಡಕ್ಕೆ ಇಳಿತಿದ್ದಾರೆ.

Next Story

RELATED STORIES