Top

'ಅಪ್ಪು' ಫ್ಯಾನ್ಸ್​​ಗೆ ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಗುಡ್​​ ನ್ಯೂಸ್​

ಬೆಂಗಳೂರಿನ ಕಂಠೀರವ ಸ್ಟುಡಿಯೋ ಅದ್ದೂರಿ ಸೆಟ್​ನಲ್ಲಿ ಸಾಂಗ್​ ಶೂಟಿಂಗ್​ ಮುಗಿಸುವ ಮೂಲಕ ಯುವರತ್ನ ಚಿತ್ರಿಕರಣಕ್ಕೆ ಶುಭಂ

ಅಪ್ಪು ಫ್ಯಾನ್ಸ್​​ಗೆ ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಗುಡ್​​ ನ್ಯೂಸ್​
X

ಬರೋಬ್ಬರಿ 7 ತಿಂಗಳ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಶೂಟಿಂಗ್​ ಅಖಾಡಕ್ಕ ಇಳಿದಿದ್ದೇ ತಡ ನಾನ್​ಸ್ಟಾಪ್​ ಶೂಟಿಂಗ್​ನಲ್ಲಿ ಭಾಗವಹಿಸ್ತಿದ್ದಾರೆ. ಇತ್ತ ಯುವರತ್ನ ಶೂಟಿಂಗ್​​ ಕಂಪ್ಲೀಟ್ ಮಾಡಿದ್ದೇ ತಡ, ಅದಾಗಲೇ ಜೇಮ್ಸ್​ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೇಮ್ಸ್​ ಚಿತ್ರ ತಂಡದಿಂದ ಲೇಟೇಸ್ಟ್ ಅಪ್​ಡೇಟ್​ ಕೂಡ ಸಿಕ್ಕಿದೆ.

ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಯುವರತ್ನ ಶೂಟಿಂಗ್ ಕಂಪ್ಲೀಟ್ ಆಗಿದೆ. ನಿರ್ದೇಶಕ ಸಂತೋಷ್​ ಆನಂದ್​ರಾಮ್ ಅವರು ಶೂಟಿಂಗ್​ ಮುಗಿಸಿ ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದಾರೆ​. ಬೆಂಗಳೂರಿನ ಕಂಠೀರವ ಸ್ಟುಡಿಯೋ ಅದ್ದೂರಿ ಸೆಟ್​ನಲ್ಲಿ ಸಾಂಗ್​ ಶೂಟಿಂಗ್​ ಮುಗಿಸುವ ಮೂಲಕ ಯುವರತ್ನ ಚಿತ್ರಿಕರಣಕ್ಕೆ ಶುಭಂ ಹೇಳಿದ್ದಾರೆ.


ಲಾಕ್‌ಡೌನ್‌ಗೂ ಮೊದಲು ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಕೊನೆ ಹಂತದ ಶೂಟಿಂಗ್​ ಬಾಕಿ ಉಳಿಸಿಕೊಂಡಿತ್ತು. ಅಷ್ಟರಲ್ಲಿ ಕೊರೊನಾ ರಣಕೇಕೆ ಹಾಕಲು ಶುರು ಮಾಡಿತ್ತು. ಲಾಕ್​ಡೌನ್​ನಿಂದ ಯುವರತ್ನ ಟೀಮ್ ಅಂದುಕೊಂಡ ಕೆಲಸಗಳು ನಡೆಯಲಿಲ್ಲ. ಅನ್​​​ಲಾಕ್ ಜಾರಿಯಾದ ಬಳಿಕ ಕೊನೆಯ ಹಂತದ ಶೂಟಿಂಗ್​ಅನ್ನು ಚಿತ್ರತಂಡ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. ವಿದೇಶದಲ್ಲಿ ಹಾಡುಗಳ ಶೂಟಿಂಗ್ ಮಾಡಬೇಕು ಅಂತ ಅಂದುಕೊಂಡಿದ್ದ ಯುವರತ್ನ ಟೀಮ್ ಸದ್ಯ ಬೆಂಗಳೂರಿನಲ್ಲೇ ಚಿತ್ರಿಕರಣ ಮುಗಿಸಿದೆ.

ಶೂಟಿಂಗ್ ಮುಗಿಸಿದ ಖುಷಿಯಲ್ಲಿ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಶೂಟಿಂಗ್ ಮುಗಿಸಿರುವ ಯುವರತ್ನ ಟೀಮ್ ಪೋಸ್ಟ್​ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿದೆ. ಈ ನಡುವೆ ಯುವರತ್ನ ಯಾವಾಗ ರಿಲೀಸ್​ ಆಗುತ್ತೆ ಅನ್ನೋ ಕುತೂಹಲ ಕೂಡ ಹೆಚ್ಚಾಗುತ್ತಿದೆ. ಅಕ್ಟೋಬರ್​ 15ರಿಂದ ಥಿಯೇಟರ್ ಬಾಗಿಲು ತೆರೆಯುತ್ತಿರೋದರಿಂದ ಸಹಜವಾಗಿಯೇ ಅಪ್ಪು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಆದರೆ, ಈ ವರ್ಷ ಯುವರತ್ನ ಸಿನಿಮಾ ರಿಲೀಸ್ ಆಗೋದು ಅನುಮಾನ. ಥಿಯೇಟರ್​ ಓಪನ್ ಆದ ಕೂಡಲೇ ಜನರ ರೆಸ್ಪಾನ್ಸ್​ ಹೇಗಿರುತ್ತೆ ಅನ್ನೋದನ್ನ ನೋಡಿ ಬಿಡುಗಡೆಗೆ ಡೇಟ್​ ಫಿಕ್ಸ್​ ಮಾಡುವ ಯೋಚನೆಯಲ್ಲಿದೆ ಯುವರತ್ನ ಟೀಮ್.


ಅತ್ತ ಯುವರತ್ನ ಚಿತ್ರದ ಶೂಟಿಂಗ್ ಕಂಪ್ಲೀಟ್​ ಆಗುತ್ತಿದ್ದಂತೆ ಪವರ್​​​​ ಸ್ಟಾರ್ ಪುನೀತ್ ರಾಜ್​ಕುಮಾರ್​​ ಜೇಮ್​ ಅಖಾಡಕ್ಕಿಳಿದ್ದಾರೆ. ಲಾಕ್​ಡೌನ್​ಗೆ ಮೊದಲು ಫಸ್ಟ್​ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಇದೀಗ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಆರಂಭಿಸಿದೆ. ಫೈಟಿಂಗ್ ಮೂಲಕವೇ ಚಿತ್ರೀಕರಣ ಆರಂಭವಾಗಿದೆ. ರಾಮ ಲಕ್ಷಣರ ಆ್ಯಕ್ಷನ್​ ಅಖಾಡದಲ್ಲಿ ಪವರ್​​ಸ್ಟಾರ್ ಪವರ್​ಫುಲ್ ಫೈಟಿಂಗ್ ಮಾಡಿದ್ದಾರೆ. ಜೇಮ್ಸ್ ಶೂಟಿಂಗ್​​ನ ಆರಂಭದಲ್ಲೂ ಫೈಟಿಂಗ್ ಸೀನ್ ಶೂಟ್​ ಮಾಡಲಾಗಿತ್ತು. ಇದೀಗ ಮತ್ತೆ ಫೈಟ್​ ಸೀನ್ ಮೂಲಕವೇ ಶೂಟಿಂಗ್ ಆರಂಭವಾಗಿದೆ. ಸೂಪರ್​​ ಹಿಟ್​ ಚಿತ್ರಗಳನ್ನು ಕೊಟ್ಟ ಚೇತನ್​ ಕುಮಾರ್ ಫುಲ್ ಜೋಶ್​ನಲ್ಲೇ ಶೂಟಿಂಗ್ ಶುರು ಮಾಡಿದ್ದಾರೆ. ಭರ್ಜರಿ, ಬಹುದ್ದೂರ್​, ಭರಾಟೆ ಬಳಿಕ ಜೇಮ್ಸ್​ಗೆ ಚೇತನ್​ಕುಮಾರ್​ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಈ ಮಧ್ಯೆ 'ಜೇಮ್ಸ್' ಬಳಗ ಒಂದು ಬ್ರೇಕಿಂಗ್ ನ್ಯೂಸ್ ನೀಡಿದೆ.

ಪವರ್ ಸ್ಟಾರ್ ಜೇಮ್ಸ್​ ಅಂಗಳಕ್ಕೆ ಟಾಲಿವುಡ್​ ಸ್ಟಾರ್ಸ್​ ಎಂಟ್ರಿಕೊಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಟರಾದ ಶ್ರೀಕಾಂತ್ ಹಾಗೂ ಆದಿತ್ಯ ಮೆನನ್ ಜೇಮ್ಸ್ ಬಳಗ ಸೇರಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ಹೀರೋ, ಪೋಷಕ ಪಾತ್ರ, ವಿಲನ್ ಹೀಗೆ ಬೇರೆ ಬೇರೆ ರೋಲ್‌ಗಳಲ್ಲಿ ನಟಿಸಿ, ಗಮನಸೆಳೆದಿರುವ ಶ್ರೀಕಾಂತ್ ಎಂಟ್ರಿ ಜೇಮ್ಸ್​ಗೆ ಮತ್ತಷ್ಟು ಪವರ್ ತುಂಬಿದೆ. ಶ್ರೀಕಾಂತ್ ಈ ಹಿಂದೆ ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ.'ಹೆಂಡ್ತಿ ಹೇಳಿದರೆ ಕೇಳಬೇಕು', 'ಯುಗಾದಿ', 'ದಿ ವಿಲನ್' ಚಿತ್ರಗಳಲ್ಲಿ ಶ್ರೀಕಾಂತ್ ಕಾಣಿಸಿಕೊಂಡಿದರು. ಈಗ ಅವರು 'ಜೇಮ್ಸ್‌' ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಮತ್ತೊಂದೆಡೆ ಆದಿತ್ಯ ಮೆನನ್ ಕೂಡ ಎಂಟ್ರಿ ಕೊಟ್ಟಿರೋದು ಕುತೂಹಲ ಮೂಡಿಸಿದೆ. ವಿಲನ್ ಪಾತ್ರಗಳಲ್ಲಿ ಮಿಂಚುವ ಆದಿತ್ಯ ಮೆನನ್ ಜೇಮ್ಸ್​ನಲ್ಲೂ ಖಳನಾಯಕನಾಗಿ ಅಬ್ಬರಿಸಲಿದ್ದಾರೆ ಅಂತ ಹೇಳಲಾಗುತ್ತಿದೆ.

ಇನ್ನು ಅನು ಪ್ರಭಾಕರ್ ಕೂಡ ಜೇಮ್ಸ್​ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಸದ್ಯ ಒಂದು ಕಡೆ ಯುವರತ್ನ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ ಮತ್ತೊಂದು ಕಡೆ ಜೇಮ್ಸ್ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಮುಂದಿನ ವರ್ಷ ಎರಡು ಚಿತ್ರಗಳು ತೆರೆ ಅಪ್ಪಳಿಸುವ ಸಾಧ್ಯತೆಗಳಿದೆ. ಈ ಡಬಲ್ ಧಮಾಕಕ್ಕಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Next Story

RELATED STORIES