Top

ಕೆಜಿಎಫ್​ 2ಗೆ ಸಂಜಯ್​ ದತ್​ ರೆಡಿ ಅಂತೆಕಂತೆಗಳಿಗೆ ತೆರೆ ಎಳೆದ ಅಧೀರ

ನವೆಂಬರ್​ಗೆ ಕೆಜಿಎಫ್​ ಶೂಟಿಂಗ್​ನಲ್ಲಿ ಭಾಗಿಯಾಗುತ್ತೀನಿ ಎಂದು ಬಾಲಿವುಡ್​ನಟ ಸಂಜಯ್​ ದತ್​ ಅವರು ಹೇಳಿದ್ದಾರೆ

ಕೆಜಿಎಫ್​ 2ಗೆ ಸಂಜಯ್​ ದತ್​ ರೆಡಿ ಅಂತೆಕಂತೆಗಳಿಗೆ ತೆರೆ ಎಳೆದ ಅಧೀರ
X

ಕೆಜಿಎಫ್​ ಚಾಪ್ಟರ್ 2ನಲ್ಲಿ ಅಧೀರನಾಗಿ ಅಬ್ಬರಿಸಲಿರೋ ಸಂಜುಬಾಬಾ, ಕ್ಯಾನ್ಸರ್​ ಮಹಾಮಾರಿಯಿಂದ ಚೇತರಿಸಿಕೊಳಿಯುತ್ತಿದ್ದಾರೆ. ಆದರೆ, ಈ ಮಧ್ಯೆ ಕೆಜಿಎಫ್​ 2 ಕಥೆ ಏನು(?) ಬಾಕಿ ಉಳಿದಿರೋ ಚಿತ್ರೀಕರಣವನ್ನ ಅಧೀರ ಕಂಪ್ಲೀಟ್ ಮಾಡ್ತಾರಾ ಇಲ್ವಾ(?) ಚಿತ್ರತಂಡ ಏನಾದ್ರೂ ಬದಲಾವಣೆ ಮಾಡಿಕೊಂಡಿದ್ಯಾ(?) ಹೀಗೆ ಪ್ರಶ್ನೆಗಳ ಜೊತೆಗೆ ಊಹಾಪೋಹಗಳು ಎದ್ದಿತ್ತು. ಆದರೆ, ಈ ಎಲ್ಲಾ ಅಂತೆಕಂತೆಗಳಿಗೆ ಸ್ವತಃ ಸಂಜಯ್​ದತ್ ತೆರೆ ಎಳೆದಿದ್ದು, ನವೆಂಬರ್​ಗೆ ಕೆಜಿಎಫ್​ ಶೂಟಿಂಗ್​ನಲ್ಲಿ ಭಾಗಿಯಾಗುತ್ತೀನಿ ಅಂತ ಹೇಳಿದ್ದಾರೆ.

ನಾನು ಗುಣಮುಖನಾಗಿ ಬಂದೇ ಬರ್ತೇನೆ. ಆದಷ್ಟು ಬೇಗ ಮೊದಲಿನಂತಾಗುತ್ತೇನೆ. ಕಾನ್ಸರ್ ಅನ್ನು ಸೋಲಿಸಿ ಗೆದ್ದು ಬರ್ತೀನಿ. ಇದು ಅಧೀರನ ಆಶಾದಾಯಕ ಮಾತುಗಳು. ತಮ್ಮ ಜೀವನದಲ್ಲಿ ಸೋತು, ಬಿದ್ದು, ಹೋರಾಟ ಮಾಡಿ ಗೆದ್ದು ಬಂದ ಸಂಜಯ್ ದತ್​​, ಇದೀಗ ಕಾನ್ಸರ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದೇ ಹೋರಾಟದಲ್ಲಿ ನಾನು ಗೆದ್ದು ಬಂದೇ ಬರ್ತಿನಿ ಅಂತ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ ಕೆಜಿಎಫ್ ಅಧೀರ. ಈ ಮೂಲಕ ಎರಡು ತಿಂಗಳ ಬಳಿಕ ಸಂಜು ಬಾಬಾ ಅಭಿಮಾನಿಗಳಿಗೆ ಅಧೀರನ ಲುಕ್​ನಲ್ಲಿ ದರ್ಶನ ನೀಡಿದ್ದಾರೆ.

ಶ್ವಾಸಕೋಶದ ಕಾನ್ಸರ್​​ನಿಂದ ಬಳುತ್ತಿದ್ದ ಸಂಜಯ್ ದತ್​, ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಪ್ರಸಿದ್ಧ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರ ಸಲೂನ್​ನಲ್ಲಿ ಹೇರ್​ಕಟ್ ಮಾಡಿಸಿಕೊಳ್ಳುತ್ತಿರೋ ವಿಡಿಯೋವನ್ನು ಸಂಜಯ್​ ದತ್ ಪೋಸ್ಟ್​ ಮಾಡಿದ್ದಾರೆ. ಹೇರ್​ಕಟ್ ಮಾಡಿಸಿಕೊಂಡ ಬಳಿಕ ಸಂಜಯ್​ ದತ್​ ಎಂದಿನಂತೆ ಸಖತ್ ಜೋಶ್​ನಲ್ಲೇ ಮಾತನಾಡಿದ್ದಾರೆ.

ಕೆಜಿಎಫ್​ ಚಾಪ್ಟರ್​​ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತಿಚೀಗೆ ಉಡುಪಿಯ ಕಡಲ ತೀರದಲ್ಲಿ ಭರ್ಜರಿಯಾಗಿ ಶೂಟಿಂಗ್ ಕೂಡ ನಡೆದಿತ್ತು. ಅನ್​​​ಲಾಕ್​ ಆರಂಭವಾದಗಿನಿಂದ ಕೆಜಿಎಫ್​ ಟೀಮ್​​​​​ ಬಿಡುವಿಲ್ಲದೆ ಚಿತ್ರಿಕರಣ ಮಾಡುತ್ತಿದೆ. ಈ ನಡುವೆ ಕಾನ್ಸರ್​​ನಿಂದ ಬಳಲುತ್ತಿರುವ ಸಂಜಯ್​ ದತ್​ ಚಿತ್ರೀಕರಣದಲ್ಲಿ ಭಾಗಿಯಾಗ್ತಾರಾ ಅನ್ನೋ ಪ್ರಶ್ನೆ ಕಾಡಿತ್ತು. ಈ ಬಗ್ಗೆ ಹಲವು ಊಹಪೋಹಗಳು ಕೂಡ ಕೇಳಿಬಂದಿತ್ತು. ಸಂಜಯ್​ ದತ್​ ಮತ್ತೆ ಚಿತ್ರಿಕರಣದಲ್ಲಿ ಪಾಲ್ಗೊಳ್ಳೋದಿಲ್ಲ. ಚಿತ್ರತಂಡ ಸಂಜಯ್ ದತ್​​​ಗಾಗಿ ಕೆಲವೊಂದು ಕಾಂಪ್ರಮೈಸ್​ ಮಾಡಿಕೊಳ್ಳುತ್ತೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಸಂಜಯ್ ದತ್ ಉತ್ತರ ನೀಡಿದ್ದಾರೆ.

ನಾನು ಕೆಜಿಎಫ್​ಗೋಸ್ಕರ ಗಡ್ಡ ಬಿಡುತ್ತಿದ್ದೇನೆ. ನವೆಂಬರ್​​ನಲ್ಲಿ ಕೆಜಿಎಫ್ ಸೆಟ್​ಗೆ ಮತ್ತೆ ಹೋಗುತ್ತಿದ್ದೀನಿ ಅಂತ ಸಂಜಯ್ ದತ್​ ಹೇಳಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಸಂಜಯ್ ದತ್ ತೆರೆ ಎಳೆದಿದ್ದಾರೆ. ಅಧೀರ ಮತ್ತೊಮ್ಮೆ ಶೂಟಿಂಗ್ ಅಖಾಡಕ್ಕಿಳಿಯೋದು ಕನ್ಪರ್ಮ್​ ಆಗಿದೆ. ಇದು ಕೆಜಿಎಫ್​ ಅಭಿಮಾನಿಗಳಲ್ಲಿ ಜೋಶ್​ ಹೆಚ್ಚಿಸಿದೆ. ಉಡುಪಿ ಶೂಟಿಂಗ್ ನೋಡಿ ಥ್ರಿಲ್ ಆಗಿದ್ದ ಕೆಜಿಎಫ್ ಫಾನ್ಸ್​ ಈ ಗುಡ್​​ ನ್ಯೂಸ್​ ನೋಡಿ ಫುಲ್ ಖುಷ್​ ಆಗಿದ್ದಾರೆ.

ಕೆಜಿಎಫ್​​ ಸ್ಯಾಂಡಲ್​ವುಡ್​ನ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಿನಿಮಾ. ಕೇವಲ ಸ್ಯಾಂಡಲ್​ವುಡ್ ​ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಕನ್ನಡದ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ್ದ ಚಿತ್ರ. ಕನ್ನಡಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದ ಮೊದಲ ಚಿತ್ರವೂ ಹೌದು. ಕೆಜಿಎಫ್​ ಮೊದಲ ಭಾಗದ ಯಶಸ್ಸಿನ ಅಲೆಯಲ್ಲಿರುವ ಚಿತ್ರತಂಡ ಈ ಚಿತ್ರದ ಎರಡನೇ ಸೀಕ್ವೆಲ್ ಭಾಗದ ಚಿತ್ರೀಕರಣವನ್ನು ಬಹುತೇಕ ಮುಗಿಸಿದೆ. ಸಂಜಯ್​ ದತ್​ ಪಾತ್ರದ ಕೆಲವೊಂದು ಶಾಟ್​​ಗಳು ಬಾಕಿ ಉಳಿದಿದ್ದು..ಅದು ನವೆಂಬರ್ ಶೂಟ್ ಆಗಲಿದೆ ಅಂತ ಸ್ವತಃ ಸಂಜಯ್ ದತ್​​ ಹೇಳಿಕೊಂಡಿದ್ದಾರೆ.

ಸಂಜಯ್ ದತ್​​ ಫಸ್ಟ್ ಲುಕ್​ ಬಿಡುಗಡೆಯಾದ ನಂತರ ಅಭಿಮಾನಿಗಳಲ್ಲಿ ಹೊಸ ವೈಬ್ರೇಷನ್ ಶುರುವಾಗಿತ್ತು. ಆದರೆ, ಎರಡನೇ ಶೆಡ್ಯೂಲ್​ನ ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಕೆಜಿಎಫ್ ಚಿತ್ರತಂಡಕ್ಕೆ ಬರಸಿಡಿಲೊಂದು ಬಡಿದಿತ್ತು. ಸಂಜಯ್​ ದತ್​ಗೆ ಕ್ಯಾನ್ಸರ್ ಇರೋದು ದೃಡಪಟ್ಟಿತ್ತು. ಹೀಗಾಗಿ ಸಂಜಯ್ ದತ್ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದರು. ಇದೀಗ ವಿದೇಶದಿಂದ ಹೊರಬಂದಿದ್ದು ಕೆಜಿಎಫ್​-2 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ ಅಂತ ಸಂಜು ಬಾಬಾ ಹೇಳಿದ್ದಾರೆ. ಅಲ್ಲಿಗೆ ಕೆಜಿಎಫ್​-2 ಚಿತ್ರಕ್ಕಿದ್ದ ಅಡ್ಡಿ ಆತಂಕಗಳು ದೂರವಾಗಿದೆ. ಇನ್ನೆನಿದ್ರೂ ಕೆಜಿಎಫ್​ ಜಾತ್ರೆ ಆರಂಭವಾಗೋದು ಮಾತ್ರ ಬಾಕಿ. ಅದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Next Story

RELATED STORIES