Top

ಫ್ಯಾನ್ಸ್ ಉಡುಗೊರೆಗೆ ಫಿದಾ ಆದ ಸ್ಯಾಂಡಲ್​​ವುಡ್​ ಸ್ಟಾರ್ಸ್​

ಕೇವಲ ತಮ್ಮ ಮೊಣಕೈ ಬಳಸಿ ಅಪ್ಪು ಭಾವಚಿತ್ರವನ್ನ ಬಿಡಿಸಿದ್ದಾರೆ.

ಫ್ಯಾನ್ಸ್ ಉಡುಗೊರೆಗೆ ಫಿದಾ ಆದ ಸ್ಯಾಂಡಲ್​​ವುಡ್​ ಸ್ಟಾರ್ಸ್​
X

ಕಲೆಗೆ ಬೆಲೆ ಕಟ್ಟೋಕ್ಕೆ ಆಗಲ್ಲ. ಹಾಗೇ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋಕ್ಕೆ ಸಾಧ್ಯಾನೇ ಇಲ್ಲ. ತಮ್ಮ ಅಭಿಮಾನಿಗಳಿಂದ ಏನಾದ್ರೂ ಉಡುಗೊರೆ ಸಿಕ್ರೆ ಅದಕ್ಕಿಂತ ಬೇರೆ ಖುಷಿ ಇಲ್ಲ ನಮ್ಮ ಸ್ಟಾರ್​ಗಳಿಗೆ. ಸದ್ಯ ಪವರ್​ಸ್ಟಾರ್​ಗೆ ಮತ್ತು ಕೊಡಗಿನ ಕುವರಿ ರಶ್ಮಿಕಾ ಅವ್ರ ಅಭಿಮಾನಿಗಳಿಂದ ಅಂತದ್ದೊಂದು ಪ್ರೀತಿಯ ಉಡುಗೊರೆ ಸಿಕ್ಕಿದೆ. ಇಬ್ಬರೂ ಕೂಡ ತಮ್ಮ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಅಭಿಮಾನಿಗಳೇ ಹಾಗೇ. ನೆಚ್ಚಿನ ನಟನಟಿಯರ ಟ್ಯಾಟೂ ಹಾಕಿಸಿಕೊಳ್ಳೊದು. ವಿವಿಧ ರೀತಿಯಲ್ಲಿ ಅವರ ಭಾವಚಿತ್ರ ಬಿಡಿಸೋದು. ಉಡುಗೊರೆಗಳನ್ನ ಕೊಡೊದು. ಹೀಗೆ ಅವರನ್ನ ಆರಾಧಿಸ್ತಾ ಇರ್ತಾರೆ. ಸದ್ಯ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿಮಾನಿಯೊಬ್ಬ ಪ್ರೀತಿಯಿಂದ ಅಪ್ಪುಗೆ ಉಡುಗೊರೆಯೊಂದನ್ನ ನೀಡಿದ್ದಾರೆ. ಕೇವಲ ತಮ್ಮ ಮೊಣಕೈ ಬಳಸಿ ಅಪ್ಪು ಭಾವಚಿತ್ರವನ್ನ ಬಿಡಿಸಿದ್ದಾರೆ.

ವಿಶೇಷ ಅಂದ್ರೆ ಈ ವಿಡಿಯೋವನ್ನ ಸ್ವತಃ ಅಪ್ಪು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್ ಅಂತ ಟ್ವಿಟ್​ ಮಾಡಿದ್ದಾರೆ.

ಇನ್ನು ಮತ್ತೊಂದು ಕಡೆ ಇಂತದ್ದೇ ಗಿಫ್ಟ್​ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೂ ಸಿಕ್ಕಿದೆ. ಅಭಿಮಾನಿಯೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿಂಬದಿಯಿಂದ ರಶ್ಮಿಕಾ ಚಿತ್ರ ಬಿಡಿಸಿದ್ದಾರೆ. ಈ ವಿಡಿಯೋವನ್ನು ಖುದ್ದು ರಶ್ಮಿಕಾ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಜಸ್ಟ್ ವಾವ್ ಅಂತ ಕ್ಯಾಪ್ಶನ್​ ಕೊಟ್ಟಿದ್ದಾರೆ.

Next Story

RELATED STORIES