Top

ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್

ವಿಶೇಷ ಅಂದ್ರೆ ತುಂಬು ಗರ್ಭಿಣಿ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್
X

ಸ್ಯಾಂಡಲ್​ವುಡ್​ನ ಸ್ಟಾರ್ ಡೈರೆಕ್ಟರ್​ ಪವನ್​ ಒಡೆಯರ್​ ಮನೆಗೆ ಅತಿಥಿಯೊಬ್ಬರು ಆಗಮಿಸ್ತಾ ಇದ್ದಾರೆ. ಈ ಅಥಿತಿಯ ಆಗಮನಕ್ಕೆ ಹಾಡೊಂದನ್ನ ರೆಡಿ ಮಾಡುತ್ತಿರೋ ಪವನ್​ ಒಡೆಯರ್​ , ಅದ್ದೂರಿಯಾಗೇ ಅವರನ್ನ ವೆಲ್ಕಂ ಮಾಡಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ತಾರಾ ದಂಪತಿ ಪವನ್​ ಒಡೆಯರ್​ ಮತ್ತು ಅಪೇಕ್ಷಾ ಪುರೋಹಿತ್. 2018ರಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಅಂದ್ಹಾಗೇ ಕೇವಲ ಫೋಟೋಶೂಟ್ ಮಾತ್ರವಲ್ದೆ, ಚೊಚ್ಚನ ಕಂದನ ನಿರೀಕ್ಷೆಯಲ್ಲಿರೋ ಈ ಜೋಡಿ, ಹಾಡಿನ ಮೂಲಕ ಈ ಖುಷಿಯ ಸಮಾಚಾರವನ್ನ ಹಂಚಿಕೊಳ್ಳಲಿದ್ದಾರಂತೆ. ಪವನ್ ಒಡೆಯರ್ ಖುದ್ದು ಸಾಹಿತ್ಯ ಬರೆದು, ದನಿಯಾಗಿರೋ ಈ ಹಾಡಿಗೆ ಪ್ರವೀಣ್ ಆಲಿವರ್ ಮ್ಯೂಸಿಕ್ ಮಾಡಿದ್ದಾರೆ.

ವಿಶೇಷ ಅಂದ್ರೆ ತುಂಬು ಗರ್ಭಿಣಿ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಛಾಯಾಗ್ರಾಹಕ ಪವನ್ ಶರ್ಮಾ ಅದ್ಧೂರಿಯಾಗಿ ಚಿತ್ರಿಸಿರೋ ಈ ವಿಡಿಯೋ ಸಾಂಗ್​ನ್ನ ಅಕ್ಟೋಬರ್ 11ರ ಸಂಜೆ 5 ಗಂಟೆಗೆ ಪವರ್ ಒಡೆಯರ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗುತ್ತಂತೆ. ಸ್ವತಃ ಈ ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಟ್ವಿಟ್ ಮಾಡಿದ್ದಾರೆ.

Next Story

RELATED STORIES