ಶ್ರುತಿ ಹಾಸನ್ ಹುಟ್ಟುಹಬ್ಬಕ್ಕೆ ಸಲಾರ್ ಸರ್ಪ್ರೈಸ್
ಡಾರ್ಲಿಂಗ್ ಪ್ರಭಾಸ್ ನೆಕ್ಸ್ಟ್ ವೆಂಚರ್ ಸಲಾರ್

ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಸಿನಿಮಾ ಅನೌನ್ಸ್ ಆದಾಗಿನಿಂದಲೇ ನಿರೀಕ್ಷೆ ಮಟ್ಟ ಎವರೆಸ್ಟ್ ಎತ್ತರಕ್ಕೆ ಏರಿದೆ.ಈಗಾಗ್ಲೇ ಸಲಾರ್ ಗೆ ಅಧೀಕೃತ ಚಾಲನೆ ಸಿಕ್ಕಿದ್ದು, ಈಗ ಪ್ರಭಾಸ್ ಜೊತೆ ಹೆಜ್ಜೆ ಹಾಕೋಕ್ಕೆ ನಾಯಕಿಯೂ ಫಿಕ್ಸ್ ಆಗಿದ್ದಾತಾಯ್ತು.
ಸಲಾರ್.. ಸಲಾರ್.. ಸಲಾರ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರ್ತಿರೋ ಸಿನಿಮಾ ಹೆಸರು. ಚಿತ್ರದ ಟೈಟಲ್, ಹೀರೋ ಅನೌನ್ಸ್ ಆದಾಗಿನಿಂದ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗ್ತಾನೇ ಇದೆ. ಚಿತ್ರತಂಡದಿಂದ ಬರೋ ಪ್ರತಿ ಅಪ್ಡೇಟ್ಸ್ಗಾಗಿ ಕಾದು ಕುಳಿತಿದ್ದಾರೆ ಸಿನಿಪ್ರಿಯರು.
ಇದೀಗ ಸಲಾರ್ ಟೀಂನಿಂದ ಬಿಗ್ ಅಪ್ಡೇಟ್ವೊಂದು ಬಂದಿದೆ. ಇಷ್ಟು ದಿನ ಪ್ರಭಾಸ್ ಜೊತೆ ಸ್ಕ್ರೀನ್ ಶೇರ್ ಮಾಡೋ ನಾಯಕಿ ಯಾರು ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ಬಹುಭಾಷಾ ನಟಿ ಶ್ರುತಿ ಹಾಸನ್ ಸಲಾರ್ ನಾಯಕಿ ಅನ್ನೋದು ಅಫೀಶೀಯಲ್ ಆಗಿ ಅನೌನ್ಸ್ ಆಗಿದೆ. ಜನವರಿ 28 ರಂದು ಶ್ರುತಿ ಹಾಸನ್ ಹುಟ್ಟುಹಬ್ಬವಾದ್ರಿಂದ, ಅದೇ ದಿನ ಈ ಸರ್ಪ್ರೈಸ್ ಕೊಟ್ಟಿದ್ದಾರೆ ಚಿತ್ರತಂಡ.
ಸಲಾರ್ ಸುಂದರಿ ಶ್ರತಿ ಹಾಸನ್ ಅನ್ನೋ ವಿಚಾರವನ್ನ ಸ್ವತಃ ಹೊಂಬಾಳೆ ಫಿಲ್ಮ್ ಅನೌನ್ಸ್ ಮಾಡಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಶ್ರತಿ ಹಾಸನ್ಗೆ ವಿಶ್ ಮಾಡೋದರ ಜೊತೆಗೆ ಸಲಾರ್ ಕುಟುಂಬಕ್ಕೆ ವೆಲ್ಕಂ ಮಾಡಿದ್ದಾರೆ.
ಸಲಾರ್ಗೆ ನಾಯಕಿಯಾಗಿ ಶ್ರುತಿ ಹಾಸನ್ ಕನ್ಫರ್ಮ್ ಆದರೆ, ಮತ್ತೊಂದ್ಕಡೆ ಸಲಾರ್ ವಿಲನ್ ಯಾರಾಗ್ತಾರೆ ಅನ್ನೋ ಕುತೂಹಲ ಕೂಡ ಇದ್ದೇ ಇದೆ. ಕಾಲಿವುಡ್ನ ಡೇರಿಂಗ್ ವಿಲನ್ ವಿಜಯ್ ಸೇತುಪತಿ, ಪ್ರಭಾಸ್ ಎದುರು ಕಾಳಗಕ್ಕೆ ಇಳಿತಾರೆ ಅಂತ್ಲೂ ಸುದ್ದಿ ಕೇಳಿಬರ್ತಿದೆ. ಪಾತ್ರಕ್ಕಾಗಿ ಸೇತುಪತಿ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲೇ ಈ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.
ಕೆಲದಿನಗಳ ಹಿಂದಷ್ಟೇ ಹೈದ್ರಾಬಾದ್ನ ರಾಮನಾಯ್ಡು ಸ್ಟುಡಿಯೋದಲ್ಲಿ ಸಲಾರ್ ಚಿತ್ರಕ್ಕೆ ಅದ್ದೂರಿ ಮುಹೂರ್ತ ನೆರವೇರಿತ್ತು. ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿಸಲಾಗಿತ್ತು. ಮುಹೂರ್ತ ಕಾರ್ಯಕ್ರಮದಲ್ಲಿ ಪ್ರಭಾಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಡಿಸಿಎಂ ಅಶ್ವಥ್ನಾರಾಯಣ್ ಕೂಡ ಭಾಗವಹಿಸಿದರು.
ಅದೇನೆ ಇರ್ಲಿ ಈವರೆಗೂ ಸಲಾರ್ ಸಿನಿಮಾ ಬಗ್ಗೆ , ಕಥೆ ಬಗ್ಗೆ ಚಿತ್ರತಂಡ ಕೊಂಚವೂ ಮಾಹಿತಿ ಬಿಟ್ಟುಕೊಡದೇ, ಒಂದೊಂದೇ ಪಾತ್ರಗಳನ್ನ ರಿವೀಲ್ ಮಾಡ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಲಾರ್ ಟೀಂ ಏನೆಲ್ಲಾ ಸರ್ಪ್ರೈಸ್ ಕೊಡುತ್ತೆ ಕಾದು ನೋಡ್ಬೇಕು.