ಸಲಾರ್ಗೆ ವಿಲನ್ ತಮಿಳು-ತೆಲುಗು ನಟ ಅಲ್ಲ, ಕನ್ನಡದ ನಟ
ಪ್ರಭಾಸ್ ಎದುರು ತೊಡೆ ತಟ್ಟೋಕ್ಕೆ ರೆಡಿಯಾದ ಭಜರಂಗಿ ವಿಲನ್

ಪ್ಯಾನ್ ಇಂಡಿಯನ್ ಸಲಾರ್ ಸಿನಿಮಾಗೇ ನಾಯಕಿ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದೇ ತಡ. ವಿಲನ್ ಯಾರಾಗ್ತಾರೆ ಅನ್ನೋ ಪ್ರಶ್ನೆ ಶುರುವಾಗಿತ್ತು. ಟಾಲಿವುಡ್ ಕಾಲಿವುಡ್ನ ದೊಡ್ಡ ದೊಡ್ಡ ಹೆಸ್ರುಗಳು ಕೇಳಿ ಬಂದ್ವು. ಆದರೆ ಈಗ ಫೈನಲಿ ಆ ಕ್ಯೂರಿಯಾಸಿಟಿಗೂ ಬ್ರೇಕ್ ಬಿದ್ದಿದೆ.
ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಚಿತ್ರ ಅನೌನ್ಸ್ ಆದಾಗಿನಿಂದ ಪ್ರತಿದಿನ ಪ್ರತಿಕ್ಷಣ ನಿರೀಕ್ಷೆ ಹೆಚ್ಚಾಗ್ತಾನೇ ಇದೆ. ಸದ್ಯ ಎಲ್ಲರ ಕಣ್ಣು ಸಿನಿಮಾ ಸ್ಟಾರ್ ಕಾಸ್ಟ್ ಮೇಲಿದೆ. ಸಲಾರ್ನಲ್ಲಿ ಯಾರೆಲ್ಲಾ ಇರ್ತಾರೆ.ಯಾವ ಯಾವ ಪಾತ್ರಗಳಲ್ಲಿ ಯಾರ್ಯಾರು ಬಣ್ಣ ಹಚ್ತಾರೆ ಅಂತ ತಿಳ್ಕೊಳ್ಳೋ ಕುತೂಹಲ ಸಿನಿಪ್ರಿಯರಿಗಿದೆ.
ಸಲಾರ್ ಸಿನಿಮಾ ಟೈಟಲ್ ರಿವೀಲ್ ಆಗಿ, ಹೈದ್ರಾಬಾದ್ನಲ್ಲಿ ಅದ್ದೂರಿಯಾಗಿ ಸೆಟ್ಟೇರಿತ್ತು. ಆ ನಂತರ ಚಿತ್ರದ ನಾಯಕಿ ಬಗ್ಗೆ ಕುತೂಹಲ ಶುರುವಾಯ್ತು. ಒಂದಷ್ಟು ಹೆಸರುಗಳ ನಂತರ ಶ್ರುತಿ ಹಾಸನ್ ಹೆಸರನ್ನ ಚಿತ್ರತಂಡ ಅಫೀಶೀಯಲ್ ಅನೌನ್ಸ್ ಮಾಡಿದರು.
ಚಿತ್ರದ ನಾಯಕಿ ನಂತರ, ಪ್ರಭಾಸ್ ವಿಲನ್ ಯಾರಾಗ್ತಾರೆ ಅನ್ನೋ ಪ್ರಶ್ನೆ ಶುರುವಾಯ್ತು. ಟಾಲಿವುಡ್ ಕಾಲಿವುಡ್ನ ದೊಡ್ಡ ದೊಡ್ಡ ನಟರ ಹೆಸರುಗಳು ಕೇಳಿಬಂತು. ವಿಜಯ್ ಸೇತುಪತಿ ಫೈನಲ್ ಆಗಿದ್ದಾರೆ ಅನ್ನೋ ಸುದ್ದಿಯೂ ಹರಿದಾಡಿತ್ತು. ಆದರೆ ಈಗ ಪ್ರಭಾಸ್ ಎದುರು ಕನ್ನಡದ ನಟ ತೊಡೆ ತಟ್ಟೋದು ಕನ್ಫರ್ಮ್ ಆಗಿದೆ.
ಪ್ರಭಾಸ್ ಎದುರು ಖಳನಾಯಕನಾಗಿ ಅಬ್ಬರಿಸಲು ಕನ್ನಡದ ಕಲಾವಿದ ಆಯ್ಕೆ ಆಗಿದ್ದಾರೆ. ಆ ನಟ ಮತ್ತಾರು ಅಲ್ಲ. ಮಧು ಗುರುಸ್ವಾಮಿ. ಮಧು ಗುರುಸ್ವಾಮಿ. ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರೂ, ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಹ್ಯಾಟ್ರಿಕ್ ಹೀರೋ ಅಭಿನಯದ ಭಜರಂಗಿ 2. ಈ ಚಿತ್ರದಲ್ಲಿ ಮಂತ್ರವಾದಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಭಜರಂಗಿ 2 ಕ್ಲೈಮಾಕ್ಸ್ನಲ್ಲಿ ಇವರ ಪಾತ್ರ ಹೆಚ್ಚು ಹೈಲೈಟ್ ಆಗಿದೆ.
ಭಜರಂಗಿ 2 ನಂತರ ವಜ್ರಕಾಯ ಸಿನಿಮಾದಲ್ಲೂ ಮಧು ಗುರುಸ್ವಾಮಿ ಸಖತ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಯಸ್ಸಿಗೆ ಮೀರಿದ ಪಾತ್ರ ಮಾಡಿದ್ದಾರೆ. ಹುಸುರ್ ಪಾತ್ರದಲ್ಲಿ ಬೇಸ್ ವಾಯ್ಸ್ ಜೊತೆಗೆ ಖಡಕ್ ಲುಕ್ನಲ್ಲಿ ಮಿಂಚಿದ್ದಾರೆ.
ಸದ್ಯ ಸಲಾರ್ ಸಿನಿಮಾದಲ್ಲಿ ಮಧು ಗುರುಸ್ವಾಮಿ ನಟಿಸ್ತಿರೋ ವಿಚಾರವನ್ನ ಸ್ವತ: ಮಧು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ನನ್ನ ಮುಂದಿನ ಸಿನಿಮಾ ಸಲಾರ್ ಎಂದು ಹೇಳಲು ತುಂಬಾ ಖುಷಿಯಾಗ್ತಿದೆ. ಚಿತ್ರದಲ್ಲಿ ನಟಿಸಲು ಸಖತ್ ಎಕ್ಸೈಟ್ ಆಗಿದ್ದೀನಿ. ಅವಕಾಶ ನೀಡಿದ್ದಕ್ಕೆ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್ ಅವರಿಗೆ ಧನ್ಯವಾದಗಳು' ಅಂತ ಪೋಸ್ಟ್ ಹಾಕಿದ್ದಾರೆ.
ಸದ್ಯ ಸಲಾರ್ ಸಿನಿಮಾಗೇ ಕನ್ನಡದ ನಟ ಆಯ್ಕೆಯಾಗಿರೋದು ಕನ್ನಡ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನು ಯಾರೆಲ್ಲಾ ಸಲಾರ್ ತಂಡವನ್ನ ಸೇರಲಿದ್ದಾರೆ ಅನ್ನೂ ಕುತೂಹಲವಂತೂ ಇದ್ದೇ ಇದೆ.