Top

ಪೆಂಟಗನ್​​ಗೆ ರಿಯಲ್​ ಸ್ಟಾರ್ ಉಪೇಂದ್ರ ಸಾಥ್

ಐದು ಕಥೆ.. ಐದು ನಿರ್ದೇಶಕರು.. ಒಂದು ಸಿನಿಮಾ

ಪೆಂಟಗನ್​​ಗೆ ರಿಯಲ್​ ಸ್ಟಾರ್ ಉಪೇಂದ್ರ ಸಾಥ್
X

ಸ್ಯಾಂಡಲ್​ವುಡ್​ನಲ್ಲಿ ಭಿನ್ನ ವಿಭೀನ್ನ ಪ್ರಯತ್ನಗಳು ನಡೀತಾನೇ ಇರುತ್ತೆ. ಇಲ್ಲೊಂದು 5 ನಿರ್ದೇಶಕರ ತಂಡ ಸೇರಿ ಒಂದೇ ಸಿನಿಮಾಗೇ ಆ್ಯಕ್ಷನ್​ ಕಟ್ ಹೇಳೋಕ್ಕೆ ರೆಡಿಯಾಗಿದ್ದಾರೆ. ಸಿನಿಮಾ ಒಂದೇ ಆದ್ರೂ, ಕಥೆಗಳು ಮಾತ್ರ 5.

ಒಂದು ಸಿನಿಮಾ ಅಂದ್ರೆ ಆ ಸಿನಿಮಾದಲ್ಲಿ ಒಂದು ಕಥೆ ಇರುತ್ತೆ. ಅದಕ್ಕೊಂದು ಆರಂಭ ಇರುತ್ತೆ. ಮಧ್ಯದಲ್ಲಿ ಇಂಟರ್​ವಲ್ ಇರುತ್ತೆ. ಕೊನೆಯ ಭಾಗದಲ್ಲಿ ಕ್ಲೈಮ್ಯಾಕ್ಸ್​ ಇರುತ್ತೆ. ಎಲ್ಲ ಮುಗಿದ ಮೇಲೆ ಸಿನಿಮಾಗೊಂದು ಅಂತ್ಯ ಇರುತ್ತೆ. ಆದರೆ, ಒಂದೇ ಸಿನಿಮಾದಲ್ಲಿ ನಾಲ್ಕೈದು ಕಥೆ ಬಂದ್ರೆ ಹೇಗಿರಬಹುದು ಒಮ್ಮೆ ಯೋಚನೆ ಮಾಡಿ. ಡಿಫೆರೆಂಟ್​​ ಐಡಿಯಾ ಅನ್ಸುತ್ತೆ ಅಲ್ವಾ(?) ಇದೇ ಡಿಫೆರೆಂಟ್ ಐಡಿಯಾ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾವೊಂದು ರೆಡಿಯಾಗುತ್ತಿದೆ.

ಐದು ಕಥೆ, ಐದು ನಿರ್ದೇಶಕರು, ಒಂದು ಸಿನಿಮಾ. ಇದು ಸ್ಯಾಂಡಲ್​ವುಡ್​​ ಅಂಗಳದಲ್ಲಿ ನಡೆಯುತ್ತಿರೋ ಹೊಸ ಪ್ರಯೋಗ. ಆ ಸಿನಿಮಾದ ಹೆಸರು ಪೆಂಟಗನ್​. ಪೆಂಟಗನ್ ಅಂದಕೂಡ್ಲೇ ಸೂಪರ್ ಪವರ್ ದೇಶ, ಅಮೆರಿಕಾದ ಭದ್ರತಾ ವ್ಯವಸ್ಥೆ ನಿಮ್ಗೆಲ್ಲಾ ನೆನಪಾಗಬಹುದು. ಆದರೆ, ಇದು ಆ ಪೆಂಟಗನ್ ಅಲ್ಲ. ಇಲ್ಲಿ ಪೆಂಟಗನ್ ಅಂದ್ರೆ ಐದು ಅಂತ ಅರ್ಥ.

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನೇತೃತ್ವದಲ್ಲಿ ಈ ಪೆಂಟಗನ್ ಸಿನಿಮಾದ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತವಾಗಿ ಚಿತ್ರದ ಮೋಶನ್​ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಐದು ವಿಭಿನ್ನ ಕಥೆಗಳನ್ನು ಒಂದಾಗಿಸಿ, ಈ ಮೂಲಕ ಐದು ಸಿನಿಮಾ ನಿರ್ದೇಶಕರನ್ನೂ ಈ ವೇಳೆ ಪರಿಚಯಿಸಿದ್ದಾರೆ.

ಈ ಸಿನಿಮಾದ ಐದು ಕಥೆಗಳಿಗೆ ಐದು ಜನ ನಿರ್ದೇಶಕರು ಆ್ಯಕ್ಷನ್ ಕಟ್​ ಹೇಳಲಿದ್ದಾರೆ. ಒಂದು ಕಥೆಗೆ ಗುರುದೇಶಪಾಂಡೆ ಡೈರೆಕ್ಟರ್ ಆದರೆ ಇನ್ನುಳಿದಂತೆ ಬದ್ಮಾಶ್, ಶಿವಾಜಿ ಸುರತ್ಕಲ್​ ನಿರ್ದೇಶಕ ಆಕಾಶ್ ಶ್ರೀವತ್ಸ, ಚೂರಿಕಟ್ಟೆ ನಿರ್ದೇಶಕ ರಘು ಶಿವಮೊಗ್ಗ, ಡಬಲ್ ಎಂಜಿನ್​​​​​​​ ಖ್ಯಾತಿಯ ಚಂದ್ರ ಮೋಹನ್ ಹಾಗೂ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸುತ್ತಿರುವ ಕಿರಣ್ ಕುಮಾರ್​ ಈ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ.

ಜಿ ಸಿನೆಮಾಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು. ಐದು ಕಥೆಗಳಲ್ಲಿ ಮೂರರ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇನ್ನುಳಿದ ಕೆಲಸಗಳು ಕೂಡ ವೇಗದಲ್ಲೇ ಸಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವೊಂದು ಆರಂಭವಾಗಿದೆ.

Next Story

RELATED STORIES