Top

ಕಿರುತೆರೆ ನಟಿ ಮೇಘಾ ಶೆಟ್ಟಿ, ಸ್ಟಾರ್​ ನಟನೊಂದಿಗೆ ಬಿಗ್​ಸ್ಕ್ರೀನ್​ಗೆ​ ಬರಲು ರೆಡಿ

ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ಜೊತೆ ಜೊತೆಯಲಿ ಖ್ಯಾತಿಯ ಅನು ಅಲಿಯಾಸ್​ ಮೇಘಾ ಶೆಟ್ಟಿ ಸದ್ಯ , ಗಣಿ ಜೊತೆ ತ್ರಿಬಲ್​ ರೈಡಿಂಗ್​ ಹೋಗೋಕ್ಕೆ ರೆಡಿಯಾಗಿದ್ದಾರೆ.

ಕಿರುತೆರೆ ನಟಿ ಮೇಘಾ ಶೆಟ್ಟಿ, ಸ್ಟಾರ್​ ನಟನೊಂದಿಗೆ ಬಿಗ್​ಸ್ಕ್ರೀನ್​ಗೆ​ ಬರಲು ರೆಡಿ
X

ಗೋಲ್ಡನ್​ ಸ್ಟಾರ್ ಗಣೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. 4 ರಿಂದ 5 ಸಿನಿಮಾಗಳು ಕೈಯ್ಯಲಿರೋ ಗಣಿ ಲಾಕ್​ಡೌನ್​ನಿಂದ ಮನೆಯಲ್ಲಿಯೇ ಕಾಲ ಕಳಿತ್ತಿದ್ದರು. ಇದೀಗ ಹೊಸ ಸಿನಿಮಾ ತ್ರಿಬಲ್​ ರೈಡಿಂಗ್​ ಶೂಟಿಂಗ್​ ಶುರು ಮಾಡುತ್ತಿದ್ದಾರೆ. ಇಷ್ಟು ದಿನ ನಾಯಕಿಯ ಹುಡುಕಾಟದಲ್ಲಿದ್ದ ಟೀಂ, ಗಣಿಗೆ ಜೋಡಿಯನ್ನ ಆಯ್ಕೆ ಮಾಡಿದ್ದಾರೆ.

ಗೋಲ್ಡನ್​ ಸ್ಟಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಗಾಳಿಪಟ 2, ದಿ ಸ್ಟೋರಿ ಆಫ್​ ರಾಯಘಡ, ಸಖತ್​ ಇದೆಲದರ ಜೊತೆಗೆ ಹೊಸ ಸಿನಿಮಾ ತ್ರಿಬಲ್​ ರೈಡಿಂಗ್. ಸದ್ಯ ತ್ರಿಬಲ್​ ರೈಡಿಂಗ್​ ಶೂಟಿಂಗ್ ಶುರು ಮಾಡೋ ಪ್ಲಾನ್​ನಲ್ಲಿರೋ ಗೋಲ್ಡನ್​ ಸ್ಟಾರ್​ಗೆ ನಾಯಕಿ ಸಿಕ್ಕಿದ್ದಾಳೆ.


ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ಜೊತೆ ಜೊತೆಯಲಿ ಖ್ಯಾತಿಯ ಅನು ಅಲಿಯಾಸ್​ ಮೇಘಾ ಶೆಟ್ಟಿ ಸದ್ಯ , ಗಣಿ ಜೊತೆ ತ್ರಿಬಲ್​ ರೈಡಿಂಗ್​ ಹೋಗೋಕ್ಕೆ ರೆಡಿಯಾಗಿದ್ದಾರೆ. ಈ ಮೂಲಕ ಸ್ಮಾಲ್​ ಸ್ಕ್ರೀನ್​ನಿಂದ ಬಿಗ್​ ಸ್ಕ್ರೀನ್​ಗೆ ಎಂಟ್ರಿಯಾಗುತ್ತಿದ್ದಾರೆ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ತಮ್ಮದೇ ಆದ ಅಭೀಮಾನಿ ಬಳಗವನ್ನ ಹೊಂದಿರೋ ಮೇಘಾ ಶೆಟ್ಟಿ, ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗುತ್ತಿರೋದು ಅವರ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಇನ್ನು ಈ ಸಿನಿಮಾ ಔಟ್​ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು, ಲವ್, ಕಾಮಿಡಿ, ಆಕ್ಷನ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಇರೋ ಫುಲ್​ ಫ್ಯಾಕೇಜ್. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದ ಮಹೇಶ್ ಗೌಡ ತ್ರಿಬಲ್​​ ರೈಡಿಂಗ್​ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೇ ಚಿತ್ರಕ್ಕೆ ರಾಮ್ ಗೋಪಾಲ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಸಾಯಿ ಕಾರ್ತಿಕ್ ಸಂಗೀತ ಇರಲಿದೆ. ಈಗಾಗ್ಲೇ ಹೈದರಾಬಾದ್​ನಲ್ಲಿ ಸಾಂಗ್​ ರೆಕಾರ್ಡಿಂಗ್​ ಕೆಲಸಗಳು ಆರಂಭವಾಗಿದ್ದು, ಅಕ್ಟೋಬರ್​ನಿಂದ ಶೂಟಿಂಗ್​ ಶುರುವಾಗಲಿದೆ.

Next Story

RELATED STORIES