Top

ಅಕ್ಟೋಬರ್​ 16ರಂದು ಚಿರು ಅಭಿನಯದ ಕೊನೆಯ ಸಿನಿಮಾ ರೀ ರಿಲೀಸ್

ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಅಕ್ಟೋಬರ್ 16 ರಂದು ಸಿನಿಮಾ ರೀ ರಿಲೀಸ್ ಆಗುತ್ತಿದೆ.

ಅಕ್ಟೋಬರ್​ 16ರಂದು ಚಿರು ಅಭಿನಯದ ಕೊನೆಯ ಸಿನಿಮಾ ರೀ ರಿಲೀಸ್
X

ಬಹುಶ ಸಿನಿಮಾರಂಗದ ಇತಿಹಾಸದಲ್ಲೇ ಇಷ್ಟು ದಿನ ಥಿಯೇಟರ್​ ಲಾಕ್​ಡೌನ್​ ಆಗಿದ್ದೇ ಇಲ್ಲ ಅನ್ನಿಸುತ್ತೆ. ಬರೋಬ್ಬರಿ 7 ತಿಂಗಳ ನಂತರ ಮುಚ್ಚಿದ್ದ ಥೀಯೇಟರ್ ಬಾಗಿಲುಗಳು ತೆರೆಯುತ್ತಿದೆ. ಥಿಯೇಟರ್​ ರೀ ಓಪನ್ ಆಗುತ್ತಿದೆ ಹಾಗೇ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ಶಿವಾರ್ಜುನ ಸಿನಿಮಾ ರೀ ರಿಲೀಸ್​ ಆಗುತ್ತಿದೆ

ಅಕ್ಟೋಬರ್​ 15 ಕ್ಕೆ ಥಿಯೇಟರ್ ರೀ ಓಪನ್ ಆಗುತ್ತಿದೆ. ಥಿಯೇಟರ್​ ಬಾಗಿಲು ತೆರೆಯುತ್ತಿದ್ದಂತೆ, ದಿವಂಗತ ನಟ ಚಿರಂಜೀವಿ ಸರ್ಜಾರನ್ನ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳೋ ಅವಕಾಶ ಸಿನಿಪ್ರಿಯರಿಗೆ ಸಿಗುತ್ತಿದೆ. ಇದೇ ವರ್ಷ ಮಾರ್ಚ್​ 12 ರಂದು ತೆರೆಕಂಡಿದ್ದ ಶಿವಾರ್ಜುನ ಸಿನಿಮಾ, ಒಂದು ವಾರದ ನಂತರ ಲಾಕ್​ಡೌನ್​ನಿಂದ ಪ್ರದರ್ಶನ ರದ್ದಾಗಿತ್ತು.

ಇದೀಗ ಚಿರು ಅಭಿಮಾನಿಗಳಿಗೆ ಮತ್ತೊಮ್ಮೆ ನೆಚ್ಚಿನ ನಟನನ್ನ ಕಣ್ತುಂಬಿಕೊಳ್ಳೋ ಅವಕಾಶ ಸಿಗ್ತಿದ್ದು, ಅಕ್ಟೋಬರ್ 16 ರಂದು ಸಿನಿಮಾ ರೀ ರಿಲೀಸ್ ಆಗುತ್ತಿದೆ. ಈ ವಿಚಾರವನ್ನ ಸ್ವತಃ ಪತ್ನಿ ಮೇಘನಾರಾಜ್​​ ಮತ್ತು ಸಹೋದರ ಧ್ರುವಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಶಿವಾರ್ಜುನ ಸಿನಿಮಾ ರಿಲೀಸ್​ ಟೈಮ್​ನಲ್ಲಿ ಥಿಯೇಟರ್​ಗಳಲ್ಲಿ ಚಿರು ಕಟೌಟ್​ಗಳು ನಿಲ್ಲಿಸಲಾಗಿತ್ತು. ಇಂದಿಗೂ ಸಾಕಷ್ಟು ಕಡೆ ಕಟೌಟ್​ಗಳು ಹಾಗೆಯೇ ಇವೆ. ಸದ್ಯ ಚಿರು ಅಭಿನಯದ ಶಿವಾರ್ಜುನ ಸಿನಿಮಾವನ್ನ ನೋಡಲು ಮಿಸ್​ ಮಾಡಿಕೊಂಡವ್ರಿಗೆ, ಇದೀಗ ಚಿರು ನೆನಪಿನಲ್ಲಿ ಸಿನಿಮಾ ನೋಡುವಂತಾಗುತ್ತಿದೆ.

Next Story

RELATED STORIES