Top

ಕೊಡಗಿನ ಕುವರಿಯ ಮಾರ್ನಿಂಗ್​ ವರ್ಕೌಟ್ ವಿಡಿಯೋ ವೈರಲ್​

ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ತಮ್ಮ ಡಯಟ್​ ಪುಡ್​ ಬಗೆಗಿನ ವಿಡಿಯೋವೊಂದನ್ನ ಮಾಡಿ ಡಯಟ್ ಸೀಕ್ರೆಟ್ ರಿವೀಲ್​ ಮಾಡಿದರು.

ಕೊಡಗಿನ ಕುವರಿಯ ಮಾರ್ನಿಂಗ್​ ವರ್ಕೌಟ್ ವಿಡಿಯೋ ವೈರಲ್​
X

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇತ್ತೀಚೆಗಂತೂ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿರ್ತಾರೆ. ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಆಗಾಗ್ಗೆ ಹೊಸ ಹೊಸ ಪೋಟೋಗಳ ಜೊತೆಗೆ ಒಂದಷ್ಟು ಇಂಟ್ರೆಸ್ಟಿಂಗ್​ ವಿಡಿಯೋಗಳನ್ನ ಅಭಿಮಾನಿಗಳ ಜೊತೆ ಶೇರ್​ ಮಾಡಿಕೊಳ್ತಾ ಇರ್ತಾರೆ. ಇದೀಗ ರಶ್ಮಿಕಾರ ವರ್ಕೌಟ್ ವಿಡಿಯೋವೊಂದು ಸಖತ್​ ವೈರಲ್​ ಆಗಿದೆ.

ಸ್ಯಾಂಡಲ್​ವುಡ್​ ಜೊತೆಗೆ ಟಾಲಿವುಡ್​​ನಲ್ಲೂ ಸಖತ್ ಬ್ಯುಸಿಯಾಗಿರೋ ನಟಿ ರಶ್ಮಿಕಾ ಮಂದಣ್ಣ. ಸೋಶಿಯಲ್​ ಮೀಡಿಯಾದಲ್ಲೂ ಸಖತ್​ ಫ್ಯಾನ್ಸ್​ ಫಾಲೋಯಿಂಗ್​ ಇರುವ ನಟಿ. ರಶ್ಮಿಕಾ ಯಾವುದೇ ಫೋಟೋಸ್​ ಅಥವಾ ವಿಡಿಯೋಸ್​ ಅಪ್​ಲೋಡ್​ ಮಾಡಿದ್ರೂ, ಲಕ್ಷಗಟ್ಟಲೆ ಲೈಕ್ಸ್​, ವೀವ್ಸ್ ಪಡೆದುಕೊಳ್ಳುತ್ತವೆ. ಒಂದು ಕಡೆ ಟ್ರೋಲ್​ಗಳಿಗೆ ಹೆಚ್ಚು ಆಹಾರವಾಗೋ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿ ಇದ್ದೆ ಇರ್ತಾರೆ.

ಇತ್ತೀಚೆಗಂತೂ ರಶ್ಮಿಕಾ ಮಂದಣ್ಣ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹೆಚ್ಚು ಕನೆಕ್ಟ್ ಆಗಿದ್ದಾರೆ. ಅವರಿಗಾಗಿ ಒಂದಲ್ಲ ಒಂದು ಇಂಟ್ರೆಸ್ಟಿಂಗ್​ ವಿಡಿಯೋಗಳನ್ನ ಅಪ್​​ಲೋಡ್ ಮಾಡ್ತಾನೇ ಇರ್ತಾರೆ. ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ತಮ್ಮ ಡಯಟ್​ ಪುಡ್​ ಬಗೆಗಿನ ವಿಡಿಯೋವೊಂದನ್ನ ಮಾಡಿ ಡಯಟ್ ಸೀಕ್ರೆಟ್ ರಿವೀಲ್​ ಮಾಡಿದರು. ಚಾಕೋಲೇಟ್ ಪ್ರೋಟೀನ್​ ಓಟ್ಸ್​ ಪ್ಯಾನ್​ಕೇಕ್ಸ್ ನ್ನ ಮಾಡೋ ವಿಧಾನವನ್ನ ತೋರಿಸಿದರು.

ಇದೀಗ ರಶ್ಮಿಕಾ ತಮ್ಮ ವರ್ಕೌಟ್​ ವಿಡಿಯೋವೊಂದನ್ನ ರಿವೀಲ್​ ಮಾಡಿದ್ದಾರೆ. ಇದರಲ್ಲೇನಿದೆ ವಿಶೇಷ ಅಂದ್ರೆ ರಶ್ಮಿಕಾ ಹೈದ್ರಾಬಾದ್​ನ ಕಡಲತೀರದಲ್ಲಿ ವರ್ಕೌಟ್ ಮಾಡಿದ್ದಾರೆ. ಶೂಟಿಂಗ್​ಗಾಗಿ ಹೈದ್ರಾಬಾದ್​ಗೆ ತೆರಳಿರೋ ರಶ್ಮಿಕಾ ಇದು ನನ್ನ ಮೊದಲ ಬೀಚ್​ ವರ್ಕೌಟ್ ಅಂತ ಹೇಳಿದ್ದಾರೆ..ಸನ್​ಸೆಟ್​ ನೋಡ್ತಾ, ಸಮುದ್ರದ ಅಲೆಗಳ ಶಬ್ದಗಳನ್ನ ಕೇಳ್ತಾ, ಆ ಸಮುದ್ರದ ವಾಸನೆ, ಇವೆಲ್ಲದರ ಜೊತೆ ವರ್ಕೌಟ್ ಮಾಡೋದು ಬಹಳ ಖುಷಿ ಕೊಡುವುದಾಗಿ ಹೇಳಿದ್ದಾರೆ. ಅಂದ್ಹಾಗೇ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಟಾಲಿವುಡ್​ ,ಸ್ಯಾಂಡಲ್​ವುಡ್​ ಜೊತೆಗೆ ಸೋಶಿಯಲ್​ ಮೀಡಿಯಾ ಸ್ಟಾರ್ ಕೂಡ ಹೌದು. ಸದ್ಯ ರಶ್ಮಿಕಾ ಅಭಿನಯದ ಕನ್ನಡದ ಪೊಗರು, ತೆಲುಗಿನ ಪುಷ್ಪ, ಮತ್ತು ತಮಿಳಿನ ಸುಲ್ತಾನ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Next Story

RELATED STORIES