Top

ಮೃತ ಪುತ್ರನಿಗೂ ಟಿಕೆಟ್ ಖರೀದಿಸಿದ ಅಪ್ಪು ಅಭಿಮಾನಿಯ ಕುಟುಂಬ

ಇದೇ ರೀತಿ ಪವರ್ ಸ್ಟಾರ್ ಅಭಿಮಾನಿಯೊಬ್ಬ ಯುವರತ್ನನನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ. ಆದರೆ, ಆತನ ಆಸೆ ಮಾತ್ರ ಈಡೆರಲಿಲ್ಲ.

ಮೃತ ಪುತ್ರನಿಗೂ ಟಿಕೆಟ್ ಖರೀದಿಸಿದ ಅಪ್ಪು ಅಭಿಮಾನಿಯ ಕುಟುಂಬ
X

ಯುವರತ್ನ. ಸಕ್ಸಸ್​ಫುಲ್ಲಾಗಿ ಮುನ್ನುಗ್ತಿರೋ ಸಿನಿಮಾ. ಎಲ್ಲಾ ಕಡೆ ಅಪ್ಪು ಫ್ಯಾನ್ಸ್​ ಸೆಲೆಬ್ರೇಷನ್. ಈ ಸೆಲೆಬ್ರೇಷನ್​ ಮಧ್ಯೆ ಹಾರ್ಟ್​ ಟಚ್ಚಿಂಗ್ ಎಮೋಷನಲ್​ ಘಟನೆಯೊಂದು ನಡೆದಿದೆ. ಸ್ವತಃ ಪವರ್ ಸ್ಟಾರ್​ಗೂ ಈ ಘಟನೆ ನೋಡಿ ಮನಸ್ಸು ಭಾರವಾಗಿದೆ.

ಪವರ್​ ಸ್ಟಾರ್​ ಅಭಿನಯದ ಯುವರತ್ನ ಸಿನಿಮಾ ನೋಡಲು ಪವರ್ ಸ್ಟಾರ್​ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಇದೀಗ ಸಿನಿಮಾ ನೋಡಿ ಮೆಚ್ಚಿಕೊಂಡಾಡುತ್ತಿದ್ದಾರೆ. ಇದೇ ರೀತಿ ಪವರ್ ಸ್ಟಾರ್ ಅಭಿಮಾನಿಯೊಬ್ಬ ಯುವರತ್ನನನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ. ಆದರೆ, ಆತನ ಆಸೆ ಮಾತ್ರ ಈಡೆರಲಿಲ್ಲ.

ಮೈಸೂರಿನ ಯುವಕ, ಪುನೀತ್​ ರಾಜ್​ಕುಮಾರ್ ಅಭಿಮಾನಿ ಹರಿಕೃಷ್ಣನ್ ಯುವರತ್ನ ಸಿನಿಮಾ ನೋಡೋ ಆಸೆಯಲ್ಲಿದ್ದ. ಆದರೆ, ದುರಾದೃಷ್ಟವಶಾತ್​ ಕೆಲ ತಿಂಗಳ ಹಿಂದೆ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಆದ್ರೀಗ ಆತನ ಆಸೆಯನ್ನ ಅವರ ತಂದೆ ತಾಯಿ ಈಡೇರಿಸಿದ್ದಾರೆ. ಮೈಸೂರಿನ ಚಿತ್ರಮಂದಿರದಲ್ಲಿ ತಮ್ಮ ಪುತ್ರನ ಫೋಟೋ ಜೊತೆಗೆ ಸಿನಿಮಾ ನೋಡಿದ್ದಾರೆ. ಆತನಿಗೂ ಟಿಕೆಟ್​ ಖರೀದಿ ಮಾಡಿ, ತಂದೆ ತಾಯಿಯ ಮಧ್ಯೆ, ಸೀಟಿನ ಮೇಲೆ ಆತನ ಫೋಟೋ ಇರಿಸಿ, ಯುವರತ್ನ ಸಿನಿಮಾ ನೋಡಿದ್ದಾರೆ.

ಈ ಘಟನೆ ತಿಳಿದ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಭಾವುಕರಾಗಿದ್ದು, ಮೈಸೂರಿನ ಮುರಳಿಧರ್ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ' ಅಂತ ಟ್ವೀಟ್​ ಮಾಡಿದ್ದಾರೆ.

Next Story

RELATED STORIES