Top

ಆರು ತಿಂಗಳ ಬಳಿಕ ಶೂಟಿಂಗ್​ ಅಖಾಡಕ್ಕೆ 'ಪವರ್​ಸ್ಟಾರ್ ಎಂಟ್ರಿ'

ಕೊರೊನಾ ಮತ್ತು ಲಾಕ್​ಡೌನ್​ನಿಂದ ಸುಮಾರು 6 ತಿಂಗಳು ಮನೆಯಲ್ಲಿಯೇ ಕಾಲ ಕಳೆದಿದ್ದ ಅಪ್ಪು, ಸದ್ಯ ಕ್ಯಾಮೆರಾ ಮುಂದೆ ಬಂದಿದ್ದಾರೆ.

ಆರು ತಿಂಗಳ ಬಳಿಕ ಶೂಟಿಂಗ್​ ಅಖಾಡಕ್ಕೆ ಪವರ್​ಸ್ಟಾರ್ ಎಂಟ್ರಿ
X

ಸ್ಯಾಂಡಲ್​ವುಡ್​ನ ಎಲ್ಲಾ ಬಿಗ್​ಬಜೆಟ್​ ಸಿನಿಮಾಗಳು ಶೂಟಿಂಗ್​ ಶುರುಮಾಡಿದ್ದಾಗಿದೆ. ಆಲ್ಮೋಸ್ಟ್ ಸ್ಟಾರ್​ಗಳೆಲ್ಲಾ ಒಬ್ಬೊಬ್ಬರಾಗಿ ಶೂಟಿಂಗ್​ ಅಖಾಡಕ್ಕೆ ಇಳಿತಾ ಇದ್ದಾರೆ. ಆದರೆ, ಪವರ್ ಸ್ಟಾರ್ ಯಾವಾಗಪ್ಪ ಶೂಟಿಂಗ್​ ಶುರು ಮಾಡುತ್ತಾರೆ ಅಂತ ಪವರ್ ಫ್ಯಾನ್ಸ್​ ಕಾಯ್ತಾ ಇದ್ದರು. ಆದರೆ, ಬರೋಬ್ಬರಿ 6 ತಿಂಗಳ ನಂತರ ಅಪ್ಪು ಯುವರತ್ನನ ಸೆಟ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಯುವರತ್ನ. ಸ್ಯಾಂಡಲ್​​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್​ ಸಿನಿಮಾ. ಈಗಾಗಲೇ ಯುವರತ್ನ ಸ್ಯಾಂಪಲ್ಸ್​ ನೋಡಿ ಫಿದಾ ಆಗಿರೋ ಫ್ಯಾನ್ಸ್​​ ಮತ್ತೆ ಪವರ್​ಸ್ಟಾರ್ ಶೂಟಿಂಗ್​ ಅಖಾಡಕ್ಕೆ ಇಳಿಯೋದು ಯಾವಾಗ ಅಂತ ಕಾಯ್ತಾ ಇದ್ದರು. ಕೊರೊನಾ ಮತ್ತು ಲಾಕ್​ಡೌನ್​ನಿಂದ ಸುಮಾರು 6 ತಿಂಗಳು ಮನೆಯಲ್ಲಿಯೇ ಕಾಲ ಕಳೆದಿದ್ದ ಅಪ್ಪು, ಸದ್ಯ ಕ್ಯಾಮೆರಾ ಮುಂದೆ ಬಂದಿದ್ದಾರೆ. ಬರ್ತಿದ್ದ ಹಾಗೇ ಸಖತ್​ ಜೋಶ್​ನಲ್ಲಿ ಹೆಜ್ಜೆ ಹಾಕೋಕ್ಕೆ ರೆಡಿಯಾಗಿದ್ದಾರೆ.

ಸಾಂಗ್​ ಶೂಟಿಂಗ್ ಸೆಪ್ಟೆಂಬರ್ 26 ರಿಂದ ಶುರುವಾಗಿದ್ದು, ಅಪ್ಪು ಡಾನ್ಸ್​ ರಿಹರ್ಸಲ್​ನ ವಿಡಿಯೋ ವೊಂದನ್ನ ಸ್ವತಃ ಚಿತ್ರತಂಡ ರಿಲೀಸ್​ ಮಾಡಿದೆ. ಈ ವಿಡಿಯೋದಲ್ಲಿ ಅಪ್ಪುಗೆ, ಜಾನಿ ಮಾಸ್ಟರ್ ಡಾನ್ಸ್​ ಸ್ಟೆಪ್ಸ್​ ರಿಹರ್ಸಲ್ ಮಾಡಿಸ್ತಿದ್ದಾರೆ. ಅಂದ್ಹಾಗೇ ಇದು ಚಿತ್ರದಲ್ಲಿ ಹೀರೋ ಇಂಟ್ರೊಡಕ್ಷನ್​ ಸಾಂಗ್​ ಆಗಿದ್ದು, ಫೀಲ್​ ದ ಪವರ್ ಅಂತ ಶುರುವಾಗೋ ಈ ಹಾಡಿಗೆ ಎಸ್​ ತಮನ್​ ಮ್ಯೂಸಿಕ್​ ಮಾಡಿದ್ದಾರೆ.


ವಿಶೇಷ ಅಂದ್ರೆ ಈ ಹಿಂದೆ ಅಪ್ಪುಗೆ ಜಾನಿ ಮಾಸ್ಟರ್​ 2 ಹಾಡುಗಳನ್ನ ಕೊರಿಯೊಗ್ರಫ್​ ಮಾಡಿರೋದ್ರಿಂದ, ಈ ಹಾಡಿನ ಬಗ್ಗೆ ಕೂಡ ಹೆಚ್ಚಿನ ನಿರೀಕ್ಷೆ ಇದೆ. ರೀಸೆಂಟಾಗಿ ಅಲ್ಲೂ ಅರ್ಜುನ್​ ಅಭಿನಯದ ಬುಟ್ಟ ಬೊಮ್ಮ ಹಾಡಿಗೆ ತಮನ್​ ಮ್ಯೂಸಿಕ್​ ಮತ್ತು ಜಾನಿ ಮಾಸ್ಟರ್ ಕೊರಿಯೊಗ್ರಫೀ ಇತ್ತು. ಹಾಗಾಗಿ ಈ ಕಾಂಬಿನೇಷನ್​ನಲ್ಲಿಯೇ ಅಪ್ಪು ಸಾಂಗ್​ಕೂಡ ರೆಡಿಯಾಗ್ತಿದ್ದು, ಬುಟ್ಟ ಬೊಮ್ಮ ಹಾಡನ್ನು ಮಿರಿಸುವಂತಹ ನಿರೀಕ್ಷೆ ಇದೆ.

ಅಂದ್ಹಾಗೇ ಈ ಹಿಂದೆ ನೊಡಿರೋ ಯುವರತ್ನ ಟೀಸರ್​ನಲ್ಲಿ ಅಪ್ಪು ಕ್ಲೀನ್​ ಶೇವ್​ ಲುಕ್​ನಲ್ಲಿ ಮಿಂಚಿದರು. ಆದ್ರೀಗ ಇಂಟ್ರೋಡಕ್ಷನ್​ ಸಾಂಗ್​ನಲ್ಲಿ ಬಿಯರ್ಡ್​ ಲುಕ್​ ಕಾಣಿಸ್ತಿದೆ. ಈ ಹಿಂದೆ ನಾವೇ ನಿಮಗೆ ಹೇಳಿದ್ವಿ. ಲಾಕ್​ಡೌನ್​ನಲ್ಲಿ ಅಪ್ಪು ಗಡ್ಡಧಾರಿಯಾಗಿದ್ದರು. ಇದೇ ಟೈಮ್​ನಲ್ಲಿ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಸಹೋದರನ ಮದುವೆಗೆ ಅಪ್ಪು ಹೋದಾಗ, ಈ ಲುಕ್​ ನೋಡಿ ಫಿದಾ ಆದ ನಿರ್ದೇಶಕರು ಇದೇ ಲುಕ್​ನಲ್ಲಿ ಸಾಂಗ್​ ಶೂಟಿಂಗ್​ ಮಾಡೋಕ್ಕೆ ನಿರ್ಧಾರ ಮಾಡಿದ್ದರು. ಅದರಂತೆ ಈಗ ಬಿಯರ್ಡ್​ ಲುಕ್​ನಲ್ಲಿಯೇ ಇಂಟ್ರೋಡಕ್ಷನ್​ ಸಾಂಗ್​ ಶೂಟ್ ಮಾಡಲಾಗ್ತಿದೆ..

ಅಂದ್ಹಾಗೇ ಈ ಹಾಡು ಮತ್ತು ಇದರ ಜೊತೆಗೆ ಬಾಕಿ ಉಳಿದಿರುವ ಮತ್ತೊಂದು ಹಾಡನ್ನ ಫಾರಿನ್​ ಲೋಕೇಷನ್​ಗಳಲ್ಲಿ ಶೂಟ್ ಮಾಡೋ ಪ್ಲಾನ್​ನಲ್ಲಿತ್ತು ಚಿತ್ರತಂಡ. ಆದರೆ ಕೋವಿಡ್​ 19 ಕಾರಣ ಸದ್ಯ ಬೆಂಗಳೂರಿನಲ್ಲಿ ಸಾಂಗ್​ ಶೂಟಿಂಗ್​ ನಡಿತಿದೆ. ಅಂದುಕೊಂಡಂತೆ 2 ಹಾಡುಗಳ ಚಿತ್ರೀಕರಣ ಕಂಪ್ಲೀಟ್​ ಆಗುತ್ತಿದ್ದ ಹಾಗೇ ಯುವರತ್ನನಿಗೆ ಕುಂಬಳಕಾಯಿ ಹೊಡೆಯಲಿದೆ ಚಿತ್ರತಂಡ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್​ ವರ್ಕ್​ ಶುರುಮಾಲಿರೋ ಯುವರತ್ನ ಟೀಂ,ಮುಂದಿನ ವರ್ಷ ಸಿನಿಮಾ ತೆರೆಗೆ ತರ್ಲಿದ್ದಾರೆ.


Next Story

RELATED STORIES