ಅಧಿಕೃತವಾಗಿ ಪೊಗರು ರಿಲೀಸ್ ಡೇಟ್ ಘೋಷಣೆ
ಮೂರು ವರ್ಷಗಳ ಸಿನಿಮಾ ಕುತೂಹಲಕ್ಕೆ ಬೀಳಲಿದೆ ಬ್ರೇಕ್

ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಡೆಡ್ ಪೊಗರು ಸಿನಿಮಾ ಅವಾಗ ರಿಲೀಸ್ ಇವಾಗ ಆಗುತ್ತೆ ಅಂತ ಬರೀ ಸುದ್ದಿ ಆಯ್ತೇ ಹೊರತು ರಿಲೀಸ್ ಅಂತ್ಲೂ ಆಗಲೇಯಿಲ್ಲ. ಅದರೆ ಈಗ ಫೈನಲಿ ಸಿನಿಮಾ ರಿಲೀಸ್ ಡೆಟ್ನ್ನ ಚಿತ್ರದ ನಾಯಕ ಧ್ರುವಾ ಸರ್ಜಾನೇ ಅಫಿಶಿಯಲ್ ಆಗಿ ಅನೌನ್ಸ್ ಮಾಡಿಬಿಟ್ಟಿದ್ದಾರೆ.
ಪೊಗರು, ಸ್ಯಾಂಡಲ್ವುಡ್ನ ಬಿಗ್ ಬಜೆಟ್ ಮತ್ತು ಮೋಸ್ಟ್ ಎಕ್ಸ್ಪೆಕ್ಡೆಡ್ ಸಿನಿಮಾ. ಸತತ 3 ವರ್ಷಗಳನ್ನ ಈ ಒಂದು ಸಿನಿಮಾಗಾಗಿ ಮೀಸಲಿಟ್ಟಿದ್ರು ಚಿತ್ರತಂಡ. ಪ್ರತಿ ಹಂತದಲ್ಲೂ ಸಿನಿಮಾ ಮೇಲೆ ಕುತೂಹಲ ಹೆಚ್ಚಿಸಿತ್ತು. ಬಿಗ್ ಸ್ಟಾರ್ ಕಾಸ್ಟ್ ಜೊತೆಗೆ ಇಂಟರ್ ನ್ಯಾಷನಲ್ ಬಾಡಿ ಬಿಲ್ಡರ್ಸ್ ಪೊಗರು ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ಸುದ್ದಿಯಾಗಿತ್ತು.
ಪೊಗರು ಸಿನಿಮಾ ಈ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡೋಕ್ಕೆ ಕಾರಣ ಖರಾಬು ಸಾಂಗ್. ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಖರಾಬು ಸಾಂಗ್ ಎಲ್ಲರ ಬಾಯಲ್ಲೂ ಗುನುಗ್ತಾ ಇತ್ತು..ಸದ್ಯ 200 ಮಿಲಿಯನ್ ವೀವ್ಸ್ನತ್ತ ಖರಾಬು ಸಾಂಗ್ ಹೆಜ್ಜೆ ಇಡ್ತಾ ಇರೋದು ವಿಶೇಷ.
ಮೊದಮೊದಲು ಪೊಗರು ಸಿನಿಮಾ ಕನ್ನಡಕ್ಕೆ ಮಾತ್ರ ಸೀಮಿತ ಅಂತಿದ್ರೂ, ನಂತರ ಸಿನಿಮಾಗಿರೋ ಕ್ರೇಜ್ ನೋಡಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ತೆರೆಗೆ ತರೋ ಪ್ಲಾನ್ ಮಾಡ್ತು ಚಿತ್ರತಂಡ. ಕನ್ನಡ ತೆಲುಗಿನಲ್ಲಿ ಪೊಗರು ಮತ್ತು ತಮಿಳಿನಲ್ಲಿ ಸೇಮಾ ತಮಿರು ಅನ್ನೋ ಟೈಟಲ್ ಫೈನಲ್ ಆಯ್ತು.
ಈಗಾಗ್ಲೇ ತಮಿಳಿನಲ್ಲಿ ಡೈಲಾಗ್ ಟ್ರೇಲರ್ ಮತ್ತು ತೆಲುಗಿನಲ್ಲಿ ಡೈಲಾಗ್ ಟ್ರೇಲರ್ ಜೊತೆಗೆ ಖರಾಬು ಸಾಂಗ್ ಕೂಡ ತೆರೆಗೆ ಬಂದಿದ್ದು, ದೊಡ್ಡ ಮಟ್ಟದಲ್ಲಿ ಕ್ರೇಕ್ ಕ್ರಿಯೇಟ್ ಮಾಡಿದೆ.ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಹಿಂದೆ ಪೊಗರು ರಿಲೀಸ್ಗೆ 2 ಡೇಟ್ ಲಾಕ್ ಮಾಡಿತ್ತು ಚಿತ್ರತಂಡ. ಜನವರಿ 29 ಮಿಸ್ ಆದ್ರೆ ಫೆಬ್ರವರಿ 6ಕ್ಕೆ ಪೊಗರು ರಿಲೀಸ್ ಪಕ್ಕಾ ಅಂತ ಹೇಳಿದರು. ಆದ್ರೀಗ ಈ ಎರಡು ಡೇಟ್ ಬಿಟ್ಟು, ಇದೇ ಫೆಬ್ರವರಿಯ ಮತ್ತೊಂದು ದಿನಾಂಕವನ್ನ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ.
ಇದೀಗ ಫೈನಲಿ ಫೆಬ್ರವರಿ 19 ಕ್ಕೆ ಪೊಗರು ರಿಲೀಸ್ ಕನ್ಫರ್ಮ್ ಆಗಿದೆ..ಸ್ವತ: ಈ ವಿಚಾರವನ್ನ ಚಿತ್ರದ ನಾಯಕ ಅಫಿಶೀಯಲ್ ಅನೌನ್ಸ್ ಮಾಡಿದ್ದಾರೆ..ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಲೈವ್ ಬಂದಿದ್ದ ಧ್ರುವಾ ಸರ್ಜಾ ಈ ವಿಚಾರವನ್ನ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಫೆಬ್ರವರಿ 19 ರಂದೇ ಕನ್ನಡದ ಪೊಗರು ಜೊತೆಗೆ ತೆಲುಗಿನಲ್ಲೂ ಪೊಗರಿಸಂ ಶುರುವಾಗಲಿದೆ. ಏಕಕಲಾಕ್ಕೆ 2 ಭಾಷೆಗಳಲ್ಲೂ ಸಿನಿಮಾ ತೆರೆಗೆ ತರೋ ಪ್ಲಾನ್ನಲ್ಲಿದ್ದಾರಂತೆ ಚಿತ್ರದ ನಿರ್ಮಾಪಕರು.