Top

ಸಿನಿಪ್ರಿಯರ ಹೃದಯ 'ಕಬ್ಜ' ಮಾಡಿದ ಮೋಷನ್ ಪೋಸ್ಟರ್

ಕಬ್ಜ ಕಥೆ ಮತ್ತು ಕಾಲಮಾನದ ಬಗ್ಗೆ ಸಿಕ್ತು ಸೂಚನೆ

ಸಿನಿಪ್ರಿಯರ ಹೃದಯ ಕಬ್ಜ ಮಾಡಿದ ಮೋಷನ್ ಪೋಸ್ಟರ್
X

ರಿಯಲ್​ ಸ್ಟಾರ್ ಉಪ್ಪಿ ಅಭಿನಯದ ಪ್ಯಾಂಡ್​ ಇಂಡಿಯನ್​ ಸಿನಿಮಾ ಕಬ್ಜ, ಫಸ್ಟ್​ ಲುಕ್​ ನಿಂದ್ಲೇ ಸಿನಿಪ್ರಿಯರ ಗಮನ ಸೆಳೆದಿತ್ತು. ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮ್​ ಕೂಡ ಥೀಮ್​ ಪೋಸ್ಟರ್​ ನೋಡಿ ಫಿದಾ ಆಗಿದರು. ಇದೀಗ ಚಿತ್ರದ ಮೊಶನ್​ ಪೋಸ್ಟರ್ ರಿಲೀಸ್ ಆಗಿದ್ದು, ಸೊಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಆರ್​.ಚಂದ್ರು ಕಾಂಬಿನೇಷನ್​ನಲ್ಲಿ ರೆಡಿಯಾಗುತ್ತಿರೋ ಕಬ್ಜ ಸಿನಿಮಾ, ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಸೌಂಡ್ ಮಾಡುತ್ತಿದೆ. ಫಸ್ಟ್ ಲುಕ್​ ಪೋಸ್ಟರ್​ನಲ್ಲಿಯೇ ರೆಟ್ರೋ ಲುಕ್​ನಲ್ಲಿ ಗಮನ ಸೆಳೆದಿದ್ದ ಉಪ್ಪಿ, ಆ ನಂತರ ರಿಲೀಸ್ ಆದ ಚಿತ್ರದ ಸಾಲು ಸಾಲು ಪೋಸ್ಟರ್​​ಗಳು ಸಿನಿಮಾ ಮೇಲೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು.

ಈ ಹಿಂದೆ ಕಬ್ಜ ಚಿತ್ರದ ಅಫೀಶಿಯಲ್ ಥೀಮ್​ ಪೋಸ್ಟರ್​ನ್ನ ಸ್ಟಾರ್ ಡೈರೆಕ್ಟರ್ ರಾಮ್​​ ಗೋಪಾಲ್​ ವರ್ಮಾ ರಿಲೀಸ್​ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಕಜ್ಬ ಚಿತ್ರದ ಮೋಶನ್​ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾದ ಕಥೆ ಮತ್ತು ಕಾಲಮಾನದ ಬಗ್ಗೆ ಹಿಂಟ್ ಕೊಟ್ಟಿದೆ. 1947ರ ಘಟನೆಯೊಂದನ್ನ ಆಧರಿಸಿ ಸಿನಿಮಾ ಮಾಡಲಾಗಿದೆ ಅನ್ನೋದು ಮೋಶನ್​ ಪೋಸ್ಟರ್ ಮೂಲಕ ಗೊತ್ತಾಗುತ್ತಿದೆ. ರಿಯಲ್​ ಸ್ಟಾರ್ ಉಪ್ಪಿ ರೆಟ್ರೊ ಲುಕ್‌ನಲ್ಲಿ ಹಳೆ ಬುಲೆಟ್‌ ಏರಿ, ಹಿಂದೆ ಸೀಟ್​ನಲ್ಲಿ ರಕ್ತಸಿಕ್ತ ದೇಹವೊಂದನ್ನ ಹೊತ್ತು ತರ್ತಿರೋ ಚಿತ್ರ ಈ ಮೋಶನ್​ ಪೋಸ್ಟರ್ನಲ್ಲಿದೆ.

ಅಂದ್ಹಾಗೇ ಕಬ್ಜ ಸ್ಟೋರಿಲೈನ್​ ಬಗ್ಗೆ ಸುಳಿವು ಸಿಕ್ಕಿದ್ದು, ಗಾಂಧಿ ಅನುಯಾಯಿಯೊಬ್ಬರ ಕೊಲೆ ಮತ್ತು ಆ ನಂತರ ಆತನ ಮಗ ರೌಡಿಸಂಗೆ ಇಳಿಯುವುದು ಹೀಗೆ ಕಥೆ ಸುತ್ತುತ್ತದೆ. ಅಂದ್ಹಾಗೇ ಚಿತ್ರದಲ್ಲಿ ಉಪ್ಪಿ 2 ಡಿಫ್ರೆಂಟ್ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಬ್ಜ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, 2021ಕ್ಕೆ ಬಿಡುಗಡೆ ಆಗಲಿದೆ ಅನ್ನೋದನ್ನ ಮೋಶನ್​ ಪೋಸ್ಟರ್ ಹೇಳ್ತಿದೆ. ವಿಶೇಷ ಅಂದ್ರೆ ಇದೇ ಸಿನಿಮಾದ ಎರಡನೇ ಭಾಗವೂ ಬರಲಿದ್ದು, ಕಬ್ಜ ರಿಲೀಸ್​ ನಂತರ ಪಾರ್ಟ್​ 2 ಶೂಟಿಂಗ್​ ಶುರುವಾಗಲಿದೆ.

Next Story

RELATED STORIES