Top

ತೆಲುಗು ನಾಡಿನಲ್ಲಿ ಮತ್ತೆ ಬುದ್ಧಿವಂತನ ಮೇನಿಯಾ

ಗನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಉಪೇಂದ್ರ

ತೆಲುಗು ನಾಡಿನಲ್ಲಿ ಮತ್ತೆ ಬುದ್ಧಿವಂತನ ಮೇನಿಯಾ
X

ಉಪೇಂದ್ರ ಕೇವಲ ಸ್ಯಾಂಡಲ್ವುಡ್ಮಾತ್ರವಲ್ಲ ಭಾರತೀಯ ಚಿತ್ರರಂಗವನ್ನೇ ಮೀರಿಸುವ ಬುದ್ಧಿವಂತ. ನಟನೆಗೂ ಸೈ ಡೈರೆಕ್ಟರ್ಗೂ ಜೈ ಅನ್ನೋ ಅಪ್ರತಿಮ ಕಲಾವಿದ. ಇದೀಗ ರಿಯಲ್ ಸ್ಟಾರ್ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಅದು ಸ್ಯಾಂಡಲ್ವುಡ್ನಲ್ಲಿ ಅಲ್ಲ ಪಕ್ಕದ ಟಾಲಿವುಡ್​ನಲ್ಲಿ.

ತೆಲುಗು ನಾಡಿನಲ್ಲಿ ಮತ್ತೊಮ್ಮೆ ಬುದ್ಧಿವಂತನ ಮೇನಿಯಾ ಶುರುವಾಗಿದೆ. ಟಾಲಿವುಡ್ನಲ್ಲಿ ಬುದ್ಧಿವಂತನ ಆಟ ಆರಂಭವಾಗಿದೆ. ಮೆಗಾ ಪ್ರಿನ್ಸ್ ವರುಣ್ ತೇಜ್ ನಾಯಕನಾಗಿ ನಟಿಸುತ್ತಿರೋ 'ಗನಿ' ಸಿನಿಮಾದಲ್ಲಿ ಉಪೇಂದ್ರ ಬಣ್ಣ ಹಚ್ಚಿದ್ದಾರೆ. 'ಗನಿ' ಸಿನಿಮಾದಲ್ಲಿ ವರುಣ್ ತೇಜ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕನಿಗೆ ಬಾಕ್ಸಿಂಗ್ ಕೋಚ್ ಆಗಿ ಉಪೇಂದ್ರ ನಟಿಸಲಿದ್ದಾರೆ.

ಉಪೇಂದ್ರ ಏನೇ ಮಾಡಿದ್ರೂ ಡಿಫರೆಂಟ್ಆಗಿ ಮಾಡ್ತಾರೆ. ಇದೀಗ ಗನಿ ಸಿನಿಮಾದಲ್ಲೂ ಉಪೇಂದ್ರ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗನಿ ಸೆಟ್ಗೆ ಎಂಟ್ರಿ ಕೊಟ್ಟಿರೋ ಉಪ್ಪಿಗೆ, ನಿರ್ಮಾಪಕರು ಗ್ರ್ಯಾಂಡ್ವೆಲ್ಕಮ್ಮಾಡಿದ್ದಾರೆ.ಈ ಬಗ್ಗೆ ಪೋಸ್ಟ್ಮಾಡಿರೋ ನಿರ್ಮಾಪಕರು, ಅವರ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಉಪ್ಪಿಯ ಲುಕ್ ರಿವೀಲ್ ಆಗಿದೆ.


ಇನ್ನು ವರುಣ್ತೇಜ್ ನಟನೆಯ 10ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಉಪೇಂದ್ರಗೆ ಕೋಚ್ಪಾತ್ರ ನೀಡಲಾಗಿದೆ. ಜೊತೆಗೆ ಬಾಲಿವುಡ್ನಟ ಸುನೀಲ್ ಶೆಟ್ಟಿ, ಜಗಪತಿ ಬಾಬು ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯಾಗಿ 'ದಬಂಗ್ 3' ಖ್ಯಾತಿಯ ಸಾಯಿ ಮಾಂಜ್ರೇಕರ್ ಬಣ್ಣ ಹಚ್ಚಲಿದ್ದಾರೆ. ಕಿರಣ್ ಗನಿ ಚಿತ್ರಕ್ಕೆ ಆಕ್ಷನ್ಕಟ್ಹೇಳಲಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ತೆಲುಗು ಸಿನಿ ರಂಗಕ್ಕೂ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಒಂದಷ್ಟು ಸೂಪರ್ ಹಿಟ್, ಬ್ಲಾಕ್ ಬಾಸ್ಟರ್ ಟಾಲಿವುಡ್ ಸಿನಿಮಾಗಳಲ್ಲಿ ಉಪ್ಪಿ ನಟಿಸಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ಮೊದಲ ಬಾರಿಗೆ 'ಓಂ' ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡುವ ಮೂಲಕ ಟಾಲಿವುಡ್​ಗೆ ಉಪ್ಪಿ ಕಾಲಿಟ್ಟಿದ್ರು. ಆ ನಂತ್ರ ಉಪೇಂದ್ರ, ಸೂಪರ್​ ಸಿನಿಮಾಗಳು ಕೂಡ ತೆಲುಗಿಗೆ ಡಬ್​ ಆಗಿದ್ವು.

2015ರಲ್ಲಿ ತೆರೆಕಂಡ ಅಲ್ಲು ಅರ್ಜುನ್ ಅಭಿನಯದ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ದೇವರಾಜ್ಅನ್ನೋ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದರು. ಆನಂತರ ಆರು ವರ್ಷಗಳ ಬಳಿಕ ಮತ್ತೊಮ್ಮೆ 'ಗನಿ' ಮೂಲಕ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಇದು ಪ್ರೇಕ್ಷರಲ್ಲಿ ಸಹಜವಾಗಿಯೇ ಕುತೂಹಲವನ್ನ ಹೆಚ್ಚಿಸಿದೆ.

Next Story

RELATED STORIES