Top

ರಿಲೀಸ್​ಗೂ ಮುನ್ನವೇ ಲೀಕ್ ಆಯ್ತಾ ಮಾಸ್ಟರ್!?

ತಮಿಳಿಗೂ ಶುರುವಾಯ್ತು ಲೀಕಾಸುರರ ಕಾಟ

ರಿಲೀಸ್​ಗೂ ಮುನ್ನವೇ ಲೀಕ್ ಆಯ್ತಾ ಮಾಸ್ಟರ್!?
X

ಸೌತ್​ ಸಿನಿ ದುನಿಯಾದಲ್ಲಿ ಸಿನಿಮಾ ಸಂಕ್ರಾಂತಿ ಶುರುವಾಗಿದೆ..ಇಳಯದಳಪತಿ ವಿಜಯ್​ ಮಾಸ್ಟರ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ..ಆದ್ರೆ ಇಳಯದಳಪತಿ ಅಭಿಮಾನಿಗಳಿಗೆ ಸಿನಿಮಾ ರಿಲೀಸ್​ಗೂ ಮುನ್ನವೇ ಶಾಕಿಂಗ್​ ಸುದ್ದಿ ಸಿಕ್ಕಿದೆ.

ಪೈರಸಿ ಅನ್ನೋದು ಈಗ ಎಲ್ಲೆಡೆ ಆವರಿಸಿಕೊಂಡು ಬಿಟ್ಟಿದೆ. ಇತ್ತಿಚಿಗಷ್ಟೆ ಅದು ಕೆಜಿಎಫ್ ಅನ್ನು ಕಾಡಿತ್ತು. ಲೀಕಾಸುರರ ಕಾಟಕ್ಕೆ ಜನವರಿ 8ರಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಟೀಸರ್ 7ರ ರಾತ್ರಿಯೇ ರಿಲೀಸ್ ಆಗಿತ್ತು.

ಇದೀಗ ತಮಿಳಿಗೂ ಕೂಡ ಲೀಕಾಸುರರ ಕಾಟ ಶುರುವಾಗಿದೆ.ಇಳಯ ದಳಪತಿ ವಿಜಯ್​ ಅಭಿನಯದ ಮೋಸ್ಟ್ ಎಕ್ಸೆಫೆಕ್ಟೆಡ್ ಸಿನಿಮಾ ಮಾಸ್ಟರ್​​ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ.

ಮಾಸ್ಟರ್​ ದಕ್ಷಿಣ ಭಾರತದಲ್ಲಿ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ, ಯಾವಾಗ ಮಾಸ್ಟರ್ ದರ್ಶನವಾಗುತ್ತೆ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಾ ಇದ್ರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ಜನವರಿ 13ರಂದು ಮಾಸ್ಟರ್​ ಸಿನಿಮಾ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಆದ್ರೆ ಸಿನಿಮಾ ರಿಲೀಸ್ ಆಗೋ ಮುನ್ನವೇ ಲೀಕ್​​ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಮಾಸ್ಟರ್​ ಸಿನಿಮಾ ಲೀಕ್ ಆಗಿದೆ ಅನ್ನೋ ಸುದ್ದಿ ಹರಿದಾಡೋದಕ್ಕೆ ಕಾರಣ ಡಿಸ್ಟ್ರಿಬ್ಯೂಟರ್ಸ್ ಮಾಡಿದ ಅದೊಂದು ಟ್ವೀಟ್..ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದ ಕಂಟೆಂಟ್, ಕೆಲ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಸಿಕ್ಕರೆ ದಯವಿಟ್ಟು ನಮಗೆ ತಿಳಿಸಿ' ಎಂದು ಸೆವೆನ್ ಸ್ಕ್ರೀನ್ ಸ್ಟುಡಿಯೋ ಟ್ವೀಟ್ ಮಾಡಿದೆ. ಈ ಟ್ವೀಟ್ ನೋಡಿದವರು 'ಮಾಸ್ಟರ್' ಸಿನಿಮಾ ಲೀಕ್ ಆಗಿದೆ ಅಂತ ಹೇಳ್ತಿದ್ದಾರೆ.


ಇನ್ನು ನಿರ್ದೇಶಕ ಕನಗರಾಜ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಿಮಗಾಗಿ ಮಾಸ್ಟರ್‌' ಅನ್ನು ನಿರ್ಮಿಸಲು ಒಂದೂವರೆ ವರ್ಷ ಕಷ್ಟಪಟ್ಟಿದ್ದೇವೆ. ಚಿತ್ರವನ್ನು ನೀವು ಥಿಯೇಟರ್‌ಗಳಲ್ಲಿಯೇ ನೋಡಿ ಸಂಭ್ರಮಿಸುತ್ತೀರಿ ಎಂಬ ನಿರೀಕ್ಷೆ ಹೊಂದಿದ್ದೇವೆ. ಸಿನಿಮಾದ ಸೋರಿಕೆಯಾದ ದೃಶ್ಯಗಳು ನಿಮಗೇನಾದರೂ ಸಿಕ್ಕರೆ ದಯವಿಟ್ಟು ಅದನ್ನು ಯಾರಿಗೂ ಹಂಚಬೇಡಿ ಅಂತ ಮನವಿ ಮಾಡಿದ್ದಾರೆ.

ಮಾಸ್ಟರ್‌ ಚಿತ್ರದ ದೃಶ್ಯಗಳನ್ನು ಶೇರ್‌ ಮಾಡದಂತೆ ನಿರ್ದೇಶಕ ಲೋಕೇಶ್ ಕನಗರಾಜ್ ಮನವಿ ಮಾಡುತ್ತಲೇ #masterleaked ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಟ್ವೀಟರ್​ನಲ್ಲಿ ಈ ಸುದ್ದಿ ಸುಂಟರಗಾಳಿಯನ್ನೇ ಎಬ್ಬಿಸಿದೆ.

ಮಾಸ್ಟರ್ ಸಿನಿಮಾ ಒಟ್ಟು 500 ಥಿಯೇಟರ್​ಗಳಲ್ಲಿ ರಿಲೀಸ್ ಆಗಲು ರೆಡಿಯಾಗಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಏಕಕಾಲಕ್ಕೆ 4 ಭಾಷೆಗಳಲ್ಲಿ 'ಮಾಸ್ಟರ್' ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ವಿದೇಶದಲ್ಲಿ ಇನ್ನೂ ಕೂಡ ಹಲವೆಡೆ ಥಿಯೇಟರ್ ಬಾಗಿಲು ತೆಗೆದಿಲ್ಲ..ವಿದೇಶಗಳಲ್ಲೂ ವಿಜಯ್​ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದ್ರಲ್ಲೂ ತಮಿಳು ಸಿನಿಮಾಗಳು ವಿದೇಶದಲ್ಲಿ ತುಂಬಾನೇ ಸದ್ದು ಮಾಡ್ತಾರೆ. ಹೀಗಾಗಿ ಅಭಿಮಾನಿಗಳು ಒಟಿಟಿಯಲ್ಲಿಯೂ ರಿಲೀಸ್ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ.

ಒಟಿಟಿಯಲ್ಲಿ ಮಾಸ್ಟರ್ ರಿಲೀಸ್ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಕೇಳಿಬಂದಿತ್ತು. ಥಿಯೇಟರ್‌ನಲ್ಲಿಯೇ ರಿಲೀಸ್ ಮಾಡುವುದಾಗಿ ಮಾಸ್ಟರ್ ತಂಡ ಹೇಳಿತ್ತು. ಕೊರೊನಾ ಇರೋದರಿಂದ ತಡವಾಗಿಯಾದರೂ ಕೂಡ ಚಿತ್ರಮಂದಿರಲ್ಲಿಯೇ 'ಮಾಸ್ಟರ್' ರಿಲೀಸ್ ಮಾಡಲು ವಿಜಯ್ ಟೀಂ ಭಾರೀ ತಯಾರಿ ಮಾಡಿಕೊಂಡಿದೆ. ತಮಿಳು ಚಿತ್ರರಂಗದಲ್ಲಿ ಹಬ್ಬ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಸಿನಿಮಾ ಲೀಕ್ ಆಗಿದೆ ಅನ್ನೋ ಸುದ್ದಿ ಬೇಸರ ತರಿಸಿದೆ.

Next Story

RELATED STORIES