Top

ಮಾಸ್ಕ್​ ಮತ್ತು ಟೀ ಶರ್ಟ್​​ಗಳ ಮೇಲೆ ಕೋಟಿಗೊಬ್ಬ 3 ಪೋಸ್ಟರ್​

ಕೋಟಿಗೊಬ್ಬ 3 ಪೋಸ್ಟರ್ ಪ್ರಿಂಟ್​ ಇರುವಂತಹ ಮಾಸ್ಕ್ ಮತ್ತು ಟೀ ಶರ್ಟ್​ಗಳು ರೆಡಿಯಾಗಿವೆ.

ಮಾಸ್ಕ್​ ಮತ್ತು ಟೀ ಶರ್ಟ್​​ಗಳ ಮೇಲೆ ಕೋಟಿಗೊಬ್ಬ 3 ಪೋಸ್ಟರ್​
X

ಕೊರೊನಾ ಹಾವಳಿ ಶುರುವಾದಾಗಿನಿಂದ ಬಜಾರ್​ನಲ್ಲಿ ಮಾಸ್ಕ್​ಗಳಿಗೆ ಭರ್ಜರಿ ಡಿಮ್ಯಾಂಡ್​. ಕಲರ್​ ಕಲರ್​, ಡಿಸೈನ್​ ಡಿಸೈನ್​ ಮಾಸ್ಕ್​ಗಳು ಮಾರ್ಕೆಟ್​​ನಲ್ಲಿವೆ. ಆದರೆ, ಇದೀಗ ತಯಾರಾಗಿರೋ ಈ ಮಾಸ್ಕ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಕಿಚ್ಚನ ಫ್ಯಾನ್ಸ್​ ಈ ಮಾಸ್ಕ್​​ನ್ನ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಡೆಡ್ ಸಿನಿಮಾ ಕೋಟಿಗೊಬ್ಬ 3. ಈಗಾಗಲೇ ಸಿನಿಮಾ ರಿಲೀಸ್​​ಗೆ ರೆಡಿಯಾಗಿದ್ದು, ಚಿತ್ರದ ಟೀಸರ್ ಲಿರಿಕಲ್​ ಸಾಂಗ್​ ಕೂಡ ಸಾಕಷ್ಟು ಲೈಕ್ಸ್​ ಅಂಡ್ ವೀವ್ಸ್​ ಪಡೆದು, ಸೋಶೀಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು ಗೊತ್ತೇಯಿದೆ. ಸಿನಿಮಾ ಯಾವಾಗ ರಿಲೀಸ್​ ಅಂತ ಕಾಯುತ್ತಿದ್ದಾರೆ ಅಭಿಮಾನಿಗಳು. ಆದರೆ, ಚಿತ್ರದ ಕ್ರೇಜ್​ ಮಾತ್ರ ಈವರೆಗೂ ಕಮ್ಮಿಯಾಗಿಲ್ಲ ಅದಕ್ಕೆ ಸಾಕ್ಷ್ಯಿ ಈ ಮಾಸ್ಕ್ ಮತ್ತು ಟೀ ಶರ್ಟ್​ಗಳು.

ಕೋಟಿಗೊಬ್ಬ 3 ಪೋಸ್ಟರ್ ಪ್ರಿಂಟ್​ ಇರುವಂತಹ ಮಾಸ್ಕ್ ಮತ್ತು ಟೀ ಶರ್ಟ್​ಗಳು ರೆಡಿಯಾಗಿವೆ. ಅಂದ್ಹಾಗೇ ಕಿಚ್ಚನ ಅಭಿಮಾನಿಗಳೇ ಇದನ್ನ ರೆಡಿಮಾಡಿದ್ದು, ಆನ್​ಲೈನ್​ ಮೂಲಕ ಖರೀದಿ ಮಾಡಬಹುದಾಗಿದೆ. ಸಾಕಷ್ಟು ಅಭಿಮಾನಿಗಳು ಮುಗಿಬಿದ್ದು, ಕೋಟಿಗೊಬ್ಬ 3 ಮಾಸ್ಕ್ ಮತ್ತು ಟೀ ಶರ್ಟ್​ನ್ನ ಖರೀದಿ ಮಾಡುತ್ತಿದ್ದಾರೆ.

ಸದ್ಯ ದಿನದಿಂದ ದಿನಕ್ಕೆ ಕೋಟಿಗೊಬ್ಬ 3 ಕ್ರೇಜ್​ ಹೆಚ್ಚಾಗ್ತಾನೇ ಇದೆ. ಈಗಾಗಲೇ ಥಿಯೇಟರ್​ ರೀ ಓಪನ್​ಗೆ ಪರ್ಮಿಶನ್​ ಸಿಕ್ಕಿರೋದರಿಂದ ಸದ್ಯದಲ್ಲೇ ಕೋಟಿಗೊಬ್ಬ 3 ರಿಲೀಸ್​ ಡೇಟ್​ಅನ್ನು ಅನೌನ್ಸ್​ ಮಾಡುವ ಸಾಧ್ಯತೆಯಿದೆ.

Next Story

RELATED STORIES