Top

ಕಾಶ್ಮೀರದ ಕೊರೆಯುವ ಚಳಿಯಲ್ಲಿ ಜೇಮ್ಸ್ ಶೂಟಿಂಗ್

ಫೋಟೋಗಳಲ್ಲಿ ರಿವೀಲ್ ಆಗಿತ್ತು ಅಪ್ಪು ಸ್ಟೈಲಿಶ್ ಲುಕ್

ಕಾಶ್ಮೀರದ ಕೊರೆಯುವ ಚಳಿಯಲ್ಲಿ ಜೇಮ್ಸ್ ಶೂಟಿಂಗ್
X

ಕಳೆದ ಒಂದು ವಾರದಿಂದ ಜೇಮ್ಸ್​ ತಂಡ ಕಾಶ್ಮೀರದಲ್ಲಿ ಬೀಡು ಬಿಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ಪವರ್​ ಸ್ಟಾರ್ ಶೂಟಿಂಗ್​ ಫೊಟೋಸ್​ಗಳು ಸೋಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದೀಗ ಅಪ್ಪು ಮತ್ತೊಂದು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿರೋ ಫೋಟೋ ರಿವೀಲ್​ ಆಗಿದೆ.

ಜೇಮ್ಸ್​. ಸದ್ಯ ಕಾಶ್ಮೀರದಲ್ಲಿ 5 ನೇ ಹಂತದ ಚಿತ್ರೀಕರಣ ಭರ್ಜರಿಯಾಗಿ ನಡೀತಿದೆ. ಈಗಾಗಲೇ ಮೈಸೂರು, ಬೆಂಗಳೂರು, ಹೊಸಪೇಟೆ ಸೇರಿದಂತೆ 50 ಪರ್ಸೆಂಟ್​ ಸಿನಿಮಾ ಶೂಟಿಂಗ್​ ಕೂಡ ಕಂಪ್ಲೀಟ್ ಆಗಿದೆ. ಆದರೆ, ಇಲ್ಲಿವರೆಗೂ ಜೇಮ್ಸ್​ ಚಿತ್ರದ ಒನ್​​ ಲೈನ್​ ಸ್ಟೋರಿ ಆಗಲಿ, ಪವರ್ ಸ್ಟಾರ್ ಕ್ಯಾರೆಕ್ಟರ್ ಬಗ್ಗೆ ಆಗ್ಲಿ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಆದ್ರೀಗ ರಿವೀಲ್​ ಆಗಿರೋ ಫೋಟೋ ಹೀರೋ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕಾಶ್ಮೀರದಲ್ಲಿ10 ದಿನಗಳ ಶೂಟಿಂಗ್​ ಶೆಡ್ಯೂಲ್​ ಪ್ಲಾನ್​ ಮಾಡಿರೋ ಚಿತ್ರತಂಡ, ಅಚ್ಚುಕಟ್ಟಾಗಿ ಚಿತ್ರೀಕರಣ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಶೂಟಿಂಗ್​ ಸ್ಪಾಟ್​ನಿಂದ ಒಂದಷ್ಟು ಫೋಟೋಸ್​ ಬಿಡುಗಡೆಯಾಗಿತ್ತು. ಈ ಫೋಟೋದಲ್ಲಿ ಸ್ಟೈಲಿಶ್​ ಆಗಿರೋ ಪವರ್​ ಸ್ಟಾರ್ ಲುಕ್​ ಈ ರಿವಿಲ್​ ಆಗಿತ್ತು. ಚೇಂಜ್​ ಆಗಿರೋ ಅಪ್ಪು ಹೇರ್ ಸ್ಟೈಲ್​ ಕೂಡ ಗಮನ ಸೆಳೆದಿತ್ತು.

ಇದೀಗ ಚಿತ್ರೀಕರಣ ಆಗ್ತಿರೋ ಜೇಮ್ಸ್​ ಸಿನಿಮಾದ ಮತ್ತೊಂದು ಫೋಟೋ ರಿಲೀಸ್​ ಆಗಿದೆ. ಈ ಫೋಟೋದಲ್ಲಿ ಪವರ್ಸ್ಟಾರ್ ಯೋಧನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಸಿನಿಪ್ರಿಯರು ಅಪ್ಪು ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರ ಮಾಡ್ತಿದ್ದಾರ ಅಂತ ಚರ್ಚೆ ಮಾಡ್ತಿದ್ದಾರೆ. ಈಗಾಗ್ಲೇ ಚಿತ್ರದಲ್ಲಿ ಪವರ್​ಸ್ಟಾರ್ ಬೇರೆ ಲುಕ್​ಗಳಲ್ಲೂ ಕಾಣಿಸಿಕೊಂಡಿರೋದ್ರಿಂದ ,ಇದು ಕೇವಲ ಒಂದು ಚಿಕ್ಕ ಎಪಿಸೋಡ್​ನಲ್ಲಿ ಬರುವ ಲುಕ್​ ಇರಬಹುದಾ ಅನ್ನೋ ಊಹೆ ಕೂಡ ಮಾಡುತ್ತಿದ್ದಾರೆ.

ಸದ್ಯ ಈ ಲುಕ್​ ನೋಡಿ ಪವರ್​ಸ್ಟಾರ್ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ. ಈಗಾಗಲೇ ಕಾಶ್ಮೀರದಲ್ಲಿ ಬೀಡುಬಿಟ್ಟಿರೋ ಚಿತ್ರತಂಡ ಟಾಕಿಪೋರ್ಶನ್​, ಸಾಂಗ್, ಮತ್ತು ಫೈಟ್ ಚಿತ್ರೀಕರಣ ಮಾಡುತ್ತಿದೆ. ನಿರ್ದೇಶಕ ಚೇತನ್​ ಕುಮಾರ್ ಕೂಡ ಸಿನಿಮಾಗಾಗಿ ಸಾಕಷ್ಟು ಎಫರ್ಟ್​ ಹಾಕ್ತಿದ್ದಾರೆ.

Next Story

RELATED STORIES