Top

ನಿನ್ನೆ ನಡೆದ ಘಟನೆ ವಿರುದ್ಧ ರೊಚ್ಚಿಗೆದ್ದ ನಟ ಜಗ್ಗೇಶ್

ನನ್ನನ್ನ ಕರ್ನಾಟಕದಲ್ಲಿ ಮುಟ್ಟೋಕೆ ಆಗುತ್ತಾ(?) ನನ್ನನ್ನೇನು ದರ್ಶನ್ ಅಭಿಮಾನಿಗಳು ಹೊಡೆದೇಬಿಟ್ರಾ(?)

ನಿನ್ನೆ ನಡೆದ ಘಟನೆ ವಿರುದ್ಧ ರೊಚ್ಚಿಗೆದ್ದ ನಟ ಜಗ್ಗೇಶ್
X

ಬೆಂಗಳೂರು: ಕನ್ನಡ ಚಿತ್ರರಂಗ ಯಾವ ದಿಕ್ಕಿಗೆ ಸಾಗಿದೆ. ನನಗೂ ಸಾಕಷ್ಟು ಅಭಿಮಾನಿ ಸಂಘಗಳು ಇದೆ. ಸಾಕಷ್ಟು ಅಭಿಮಾನಿಗಳು ನಿನ್ನೆ ನಡೆದ ಘಟನೆಗೆ ಕಣ್ಣೀರು ಹಾಕುತ್ತಿದ್ದಾರೆ ನಾನು ಅವರಿಗೆ ಸಮಾಧಾನ ಮಾಡುತ್ತಿದ್ದೇನೆ ಎಂದು ನವರಸ ನಾಯಕ ಜಗ್ಗೇಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ನಡೆದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವ ಅವರು, ಇವತ್ತು ಒಂದು ಸಿನಿಮಾ ಹಿಟ್ ಆದರೆ, ಅವರನ್ನ ತುಳಿಯಲು ಹುನ್ನಾರ ಶುರುವಾಗುತ್ತದೆ. ನನ್ನ 40 ವರ್ಷಕ್ಕೆ ಅವಮಾನ ಮಾಡಿದ್ದೀರಾ(?) ನಾನು ಜಾಲ ಹಿಡಿದು ಬೆಳೆದವನಲ್ಲ, ತಲೆ ಹಿಡಿದು ಬೆಳೆದವನಲ್ಲ(!) ಕಷ್ಟಪಟ್ಟು ಬೆಳೆದು ಬಂದವನು, ನನಗೆ ಅವಮಾನ ಮಾಡಿದ್ರೆ, ಕನ್ನಡಕ್ಕೆ ಅವಮಾನ ಮಾಡಿದಂತೆ(!) ಎಂದಿದ್ದಾರೆ.

ಇನ್ನು ನನ್ನನ್ನ ಈ ಥರ ಅವಮಾನ ಮಾಡೋಕೆ ಬರಬೇಡಿ(!) ನಿನ್ನೆ ಆಡಿದ ಮಾತುಗಳನ್ನ ಎತ್ತಿದರೆ ಬೆಂಕಿ ಹಚ್ಚಿದಂಗಾಗುತ್ತೆ(!) ನನ್ನ ಒಕ್ಕಲುತನವನ್ನ ಆ ಹುಡುಗರು ಎತ್ತಿ ಹೀಯಾಳಿಸಿದರು. ನೀನೊಬ್ಬ ಒಕ್ಕಲಿಗನಾ ಅಂತ ಅವಮಾನ ಮಾಡಿದರು. 20 ಹುಡುಗರು ಬಂದ್ರು ನಾನೇನು ಓಡಿ ಹೋಗಲಿಲ್ಲ, ಅಲ್ಲೇ ಕೂತಿದ್ದೆ(!) ಎಂದು ನಿನ್ನೆ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಇಂತಹ ರೌಡಿಸಂ ಮಾಡೋಕೆ ಹೋಗಬೇಡಿ(!) ಕನ್ನಡ ಚಿತ್ರರಂಗ ಹಾಳಾಗಿ ಹೋಗ್ತಿದೆ(!) ಯಾವುದು ಇವೆಲ್ಲಾ ಸ್ಟಾರ್ ಡಮ್ ಶೋಕಿ, ಕಿತಾಪತಿ(!) ಸ್ಟಾರ್​ಗಳ ಮಧ್ಯೆ ತಂದು ಹಾಕೋದನ್ನ ಬಿಟ್ಟುಬಿಡಿ(!) ನಾನು ಓಡಿಹೋಗಲ್ಲ, ನಾನು ಅಪ್ಪನಿಗೆ ಹುಟ್ಟಿದ ಮಗ(!) ಇಂಥವನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತ ನನಗೆ ಗೊತ್ತಿದೆ(!) ಎಂದಿದ್ದಾರೆ.

ರಾಜ್, ವಿಷ್ಣು, ಅಂಬಿ ಸತ್ತ ಮಾರನೇ ದಿನದಿಂದ ಕನ್ನಡದ ಸ್ವಾಭಿಮಾನ ಸಾಯುತ್ತಿದೆ. ಇನ್ನು ಉಳಿದಿರೋದು ನಾನು, ಶಿವಣ್ಣ, ರವಿಚಂದ್ರನ್, ರಮೇಶ್ ಅಷ್ಟೇ. ನಾವು ಸತ್ತ ಮೇಲೆ ತಿಥಿ ಮಾಡಿ ಖುಷಿಪಡಿ. ನನ್ನನ್ನ ಕರ್ನಾಟಕದಲ್ಲಿ ಮುಟ್ಟೋಕೆ ಆಗುತ್ತಾ(?) ನನ್ನನ್ನೇನು ದರ್ಶನ್ ಅಭಿಮಾನಿಗಳು ಹೊಡೆದೇಬಿಟ್ರಾ(?) ಎಂದು ನಟ ಜಗ್ಗೇಶ್ ಅವರು ಆಕ್ರೋಶದ ಭರಿತವಾಗಿ ಮಾತನಾಡಿದ್ದಾರೆ.

Next Story

RELATED STORIES