ಬುರ್ಜ್ ಖಲೀಫಾ ಪ್ರಮೋಷನ್ ಮೀರಿಸಿದ ಹಾಸ್ಟೆಲ್ ಹುಡುಗರು
ಸೋಶಿಯಲ್ ಮೀಡಿಯಾದಲ್ಲಿ ಹಾಸ್ಟೆಲ್ ಹುಡುಗರ ಹವಾ.
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಾಸ್ಟೆಲ್ ಹುಡುಗರದ್ದೇ ಸುದ್ದಿ. ಚಿತ್ರದ ಪೋಸ್ಟರ್, ಟೀಸರ್ನ್ನ ಒಬ್ಬೊಬ್ಬರು ಸ್ಟಾರ್ ಕೈಯ್ಯಲ್ಲೂ ಸಖತ್ ಡಿಫ್ರೆಂಟಾಗಿ ಲಾಂಚ್ ಮಾಡಿಸ್ತಿದ್ದಾರೆ. ಈ ಹುಡುಗರು ಪ್ರಮೋಶನ್ ಐಡಿಯಾಸ್ ಸ್ವತಃ ಕಿಚ್ಚ ಸುದೀಪ್ ಫಿದಾ ಆಗ್ಬಿಟ್ಟಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಇದು ಸ್ಯಾಂಡಲ್ವುಡ್ನಲ್ಲಿ ರೆಡಿಯಾಗುತ್ತಿರೋ ಹೊಸ ಸಿನಿಮಾ. ಟೈಟಲ್ಲೇ ಸಖತ್ ಡಿಫ್ರೆಂಟಾಗಿದ್ದು, ಈ ಸಿನಿಮಾ ಪ್ರಮೋಶನ್ಗಾಗಿ ಈ ಟೀಂ ಹೊಸ ಹೊಸ ಐಡಿಯಾಸ್ ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರದ ಪೋಸ್ಟರ್ಅನ್ನ 18 ಸಾವಿರ ಅಡಿ ಎತ್ತರದ ಜಾಗದಲ್ಲಿ ನಿಂತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಲಾಂಚ್ ಮಾಡೋ ಹಾಗೇ ಕ್ರಿಯೇಟ್ ಮಾಡಿದರು. ಕಟ್ ಮಾಡಿದ್ರೆ ಅಪ್ಪು ಗ್ರೀನ್ ಮ್ಯಾಟ್ನಲ್ಲಿ ನಿಂತಿರೋ ದೃಶ್ಯ ಕಣ್ಣಿಗೆ ಬೀಳುತ್ತೆ. ಈ ರೀತಿ ಫನ್ ವೇ ನಲ್ಲಿ ಮೊದಲ ಪೋಸ್ಟರ್ ಬಿಟ್ಟಿದರು ಹಾಸ್ಟೆಲ್ ಹುಡುಗರು.
ಆ ನಂತರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್ನ್ನ ಕಿಚ್ಚ ಸುದೀಪ್ ಬುರ್ಜ್ ಖಲೀಫಾದಲ್ಲಿ ಮಾಡಲಿದ್ದಾರೆ ಅಂತ ಅನೌನ್ಸ್ ಮಾಡಲಾಗಿತ್ತು. ಹಾಗಾದ್ರೆ ಕಿಚ್ಚನ ನಿಜಕ್ಕೂ ಮತ್ತೆ ದುಬೈ ಫ್ಲೈಟ್ ಹತ್ತುತ್ತಾರಾ(?) ಅಲ್ಲೇ ಟೀಸರ್ ಲಾಂಚ್ ಅಗುತ್ತಾ ಅಥವಾ ಮತ್ತೊಮ್ಮೆ ಹಾಸ್ಟೆಲ್ ಹುಡುಗರು ಬಿಸ್ಕೆಟ್ ಹಾಕೋ ಪ್ಲಾನ್ ಮಾಡಿದ್ದಾರಾ ಅಂತೆಲ್ಲಾ ಪ್ರಶ್ನೆ ಶುರುವಾಗಿತ್ತು.
ಇದೀಗ ಬುರ್ಜ್ ಖಲೀಫಾದ ಎತ್ತರವನ್ನು ಮೀರಿ, ಭೂಮಿಯನ್ನ ಬಿಟ್ಟು ಮತ್ತೊಂದು ಗ್ರಹಕ್ಕೆ ಹೋಗಿ ಟೀಸರ್ ಶೂಟಿಂಗ್ ಮಾಡುವಂತೆ ಕ್ರಿಯೇಟ್ ಮಾಡಿದ್ದಾರೆ. ಸ್ಟಾರ್ ಸಿನಿಮಾಗಳ ಗ್ಯಾಪ್ ನಲ್ಲಿ ನಮ್ಮ ಸಿನಿಮಾ ಕೂಡ ಮೇ ನಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಬಿಟ್ಟು ಕೊಟ್ಟಿದ್ದಾರೆ. ಅಂದ್ಹಾಗೇ ಈ ಟೀಸರ್ ಮತ್ತು ಪ್ರಮೋಶನ್ ಐಡಿಯಾಸ್ ನೋಡಿ , ಹೊಸ ಹುಡುಗರ ಕ್ರಿಯೇಟಿವಿಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಮಾಡಿದ್ದಾರೆ. ಗುಲ್ಮೊಹರ್ಫಿಲ್ಮ್ಸ್ಮತ್ತು ವರುಣ್ಸ್ಟುಡಿಯೋಸ್ಬ್ಯಾನರ್ನಲ್ಲಿ ಸಿನಿಮಾ ತಯಾರಾಗಿದೆ.