Top

ಸೋಶಿಯಲ್​ ಮೀಡಿಯಾದಲ್ಲಿ ಹಾಸ್ಟೆಲ್​​ ಹುಡುಗರ ಹವಾ..!

ಹಾಸ್ಟೆಲ್​ ಹುಡುಗರಿಗಾಗಿ ರವಿವರ್ಮನ ಚಿತ್ರಪಟಗಳೇ ಮಾತನಾಡಿದ್ದು ಹೇಗೆ?

ಸೋಶಿಯಲ್​ ಮೀಡಿಯಾದಲ್ಲಿ ಹಾಸ್ಟೆಲ್​​ ಹುಡುಗರ ಹವಾ..!
X

ಸ್ಯಾಂಡಲ್​​ವುಡ್​​ನಲ್ಲಿ ಹೊಸತಂಡದ ಹೊಸ ಪ್ರಯತ್ನಗಳು ನಡೀತಾನೇ ಇರುತ್ತೆ. ಆದರೆ, ಇಲ್ಲೊಂದು ಹೊಸ ತಂಡ ಪೋಸ್ಟರ್​ ಲಾಂಚ್​ನಲ್ಲೇ ಹೊಸತನ ತೋರಿದ್ದು, ಪವರ್​ಸ್ಟಾರ್​ ಜೊತೆಗೂಡಿ ಪ್ರಯೋಗಾನೇ ಮಾಡಿದ್ದಾರೆ.

ಸ್ಯಾಂಡಲ್ವುಡ್​ಗೆ ಹೊಸತಂಡಗಳು ಎಂಟ್ರಿ ಆಗ್ತಾನೇ ಇರುತ್ತೆ. ಹೊಸ ಹೊಸ ಪ್ರಯತ್ನಗಳು ನಡೀತಾನೇ ಇರುತ್ತೆ. ಆದರೆ, ಇಲ್ಲೊಂದು ಹೊಸ ಟೀಂ ಕಾಲಿಡ್ತಾನೇ ಸೌಂಡ್ ಮಾಡ್ಕೊಂಡು ಬರ್ತಿದೆ. ಅದೇ ಹಾಸ್ಟೆಲ್​​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ.

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ. ಟೈಟಲ್ಲೇ ಸಖತ್​ ಡಿಫ್ರೆಂಟಾಗಿದ್ದು, ಈ ಚಿತ್ರದ ಪೋಸ್ಟರ್ ಲಾಂಚ್​ ಕೂಡ ಅಷ್ಟೇ ಡಿಫ್ರೆಂಟಾಗಿತ್ತು. ಪೋಸ್ಟರ್ ಲಾಂಚ್​ ಮಾಡೋಕ್ಕಂತ್ಲೇ ಒಂದು ಅದ್ಬುತವಾದ ವಿಡಿಯೋ ಮಾಡಿ, ಸೊಶೀಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದರು. ರವಿವರ್ಮನ ಚಿತ್ರಪಟಗಳ ಜೊತೆಗೆ ಒಂದಷ್ಟು ಫೇಮಸ್ ಚಿತ್ರಪಟಗಳು ಮಾತನಾಡುವ ಮೂಲಕ ಪೋಸ್ಟರ್ ಡೇಟ್​​ನ್ನ ಬಹಿರಂಗ ಪಡಿಸಿದರು ಹಾಗೂ ಈ ಪೋಸ್ಟರ್​ನ ಪವರ್ ಸ್ಟಾರ್ ಲಾಂಚ್ ಮಾಡ್ತಾರೆ ಅನ್ನೋ ಕ್ಲೂ ಕೂಡ ಈ ವಿಡಿಯೋ ಮೂಲಕ ಕೊಟ್ಟಿದರು ಹಾಸ್ಟೆಲ್​ ಹುಡುಗರು.

ಸದ್ಯ ಹಾಸ್ಟೆಲ್​ ಹುಡುಗರು ಫಸ್ಟ್ ಲುಕ್​ ಪೋಸ್ಟರ್​ನ್ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಲಾಂಚ್​ ಮಾಡಿದ್ದಾರೆ. ಪೋಸ್ಟರ್ ಲಾಂಚ್​ನ್ನ ಸಖತ್​ ಡಿಫ್ರೆಂಟಾಗಿ , ಫನ್​​ ವೇ ನಲ್ಲಿ ಮಾಡಲಾಗಿದೆ. ಗ್ರೀನ್​ ಮ್ಯಾಟ್​ನಲ್ಲಿ ಪೋಸ್ಟರ್ ಲಾಂಚ್​ ಮಾಡಿ 18 ಸಾವಿರ ಅಡಿ ಎತ್ತರದ ಜಾಗದಲ್ಲಿ ನಿಂತಿರೋ ಹಾಗೇ ತೋರಿಸಲಾಗಿದೆ. ಹಾಗೂ ಪೋಸ್ಟರ್ ಲಾಂಚ್​ ಆದ್ಮೇಲೆ ಅಪ್ಪು ಡೇಟ್​ ಕೇಳೋ ಡೈರೆಕ್ಟರ್ ಡೇಟ್ಸ್​​ ತಿನ್ನಿಸಿ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

ಅಂದ್ಹಾಗೇ ಈ ಚಿತ್ರಕ್ಕೆ ಹೊಸ ನಟರ ಹುಡುಕಾಟದಲ್ಲಿದೆ ಚಿತ್ರತಂಡ..ಇನ್ನು ವರುಣ್​ ಸ್ಟುಡಿಯೋಸ್​ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು,ನಿತಿನ ್​ ಕೃಷ್ಣಮೂರ್ತಿ ಆ್ಯಕ್ಷನ್​ ಕಟ್ ಹೇಳಿಕೊಳ್ಳುತ್ತಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ಚಿತ್ರಕ್ಕಿದೆ. ಹಾಸ್ಟೆಲ್​ ಹುಡುಗರು ಸಿಕ್ತಿದ್ದ ಹಾಗೇ ಸಿನಿಮಾ ಶೂಟಿಂಗ್​ ಶುರುವಾಗಲಿದೆ..

Next Story

RELATED STORIES