Top

ಹ್ಯಾಟ್ರಿಕ್ ಹೀರೋ-ಡಾಲಿ ಸಿನಿಮಾಗೆ ಮುಹೂರ್ತ ಫಿಕ್ಸ್

ಪ್ರೊಡಕ್ಷನ್​ ನಂ.2 ಹೆಸರಿನಲ್ಲಿ ಈಗಾಗ್ಲೇ ಸಿನಿಮಾ ಅನೌನ್ಸ್

ಹ್ಯಾಟ್ರಿಕ್ ಹೀರೋ-ಡಾಲಿ ಸಿನಿಮಾಗೆ ಮುಹೂರ್ತ ಫಿಕ್ಸ್
X

ಬೆಂಗಳೂರು: ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಮತ್ತು ಡಾಲಿ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿರೋದು ಗೊತ್ತೇಯಿದೆ. ಇದೀಗ ಈ ಚಿತ್ರ ಅಫೀಶೀಯಲ್​ ಆಗಿ ಸೆಟ್ಟೇರೋಕ್ಕೆ ಸಜ್ಜಾಗಿದೆ. ಚಿತ್ರಕ್ಕೆ ನವೆಂಬರ್ 19ರ ಬೆಳಿಗ್ಗೆ 10.30ಕ್ಕೆ ಮುಹುರ್ತ ಫಿಕ್ಸ್​ ಆಗಿದೆ.

ಟಗರು ಸಿನಿಮಾದ ನಂತರ ಶಿವಣ್ಣ-ಡಾಲಿ ಜೋಡಿ ಎಷ್ಟರಮಟ್ಟಿಗೆ ಫೇಮಸ್​ ಆಗಿದೆ ಅನ್ನೋದು ಗೊತ್ತೇಯಿದೆ. ಇವರಿಬ್ಬರ ಜೋಡಿಯನ್ನ ಮತ್ತೆ ತರೆಮೇಲೆ ನೋಡೋಕ್ಕೆ ಕಾಯ್ತಿದ್ದ ಸಿನಿಪ್ರಿಯರಿಗೆ ಈಗಾಗ್ಲೇ ಸಿಹಿ ಸುದ್ದಿ ಸಿಕ್ಕಿದೆ..ಪ್ರೊಡಕ್ಷನ್​ ನಂ.2 ಹೆಸರಿನಲ್ಲಿ ಈಗಾಗ್ಲೇ ಸಿನಿಮಾ ಅನೌನ್ಸ್​ ಆಗಿದೆ.

ಸದ್ಯ ನವೆಂಬರ್ 19, ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಹೊಸ ಚಿತ್ರಕ್ಕೆ ಅಧಿಕೃತವಾಗಿ ಮುಹೂರ್ತ ನೆರವೇರ್ತಿದೆ. ಇನ್ನು ಇದೇ ದಿನ ಚಿತ್ರದ ಟೈಟಲ್ ಕೂಡ ರಿವೀಲ್​ ಆಗುವ ಸಾಧ್ಯತೆ ಇದೆ. ಈಗಾಗ್ಲೇ ವಿಜಯದಶಮಿ ದಿನದಂದೇ ಚಿತ್ರದ ಮ್ಯೂಸಿಕ್ ವರ್ಕ್​ ಶುರುವಾಗಿತ್ತು. ಅನೂಪ್​ ಸೀಳಿನ್​ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ವಿಶೇಷ ಅಂದ್ರೆ ಶಿವಣ್ಣ ಮತ್ತು ಡಾಲಿ ಜೊತೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ಸಹ ಈ ಚಿತ್ರದಲ್ಲಿ ಸ್ಕ್ರೀನ್​ ಶೇರ್​ ಮಾಡ್ತಿದ್ದಾರೆ. ಅಂದ್ಹಾಗೇ ಈ ಚಿತ್ರಕ್ಕೆ ಕ್ಯಾಮರಮ್ಯಾನ್​ ಕಂ ಡೈರೆಕ್ಟರ್ ವಿಜಯ್​ ಮಿಲ್ಟನ್​ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಅಂದ್ಹಾಗೇ ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರಕ್ಕೆ ಬಂಡವಾಳ ಹೂಡಿದ್ದ ಕೃಷ್ಣ ಸಾರ್ಥಕ್​, ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳ ಕೊನೆಯ ವಾರದಿಂದ ಸಿನಿಮಾ ಶೂಟಿಂಗ್​ ಶುರುವಾಗಲಿದೆ.

Next Story

RELATED STORIES