Top

ವಸಿಷ್ಠ ಸಿಂಹ ಅಭಿಯನದ ಕಾಲಚಕ್ರ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ

ಒಂದು ಹೊಸ ಥ್ರಿಲ್ಲಿಂಗ್​ ಆಲೋಚನೆ ಈಗ ಕಾಲಚಕ್ರ ಟೀಸರ್​ ಮೂಲಕ ಬಿಡುಗಡೆಯಾಗಿದೆ

ವಸಿಷ್ಠ ಸಿಂಹ ಅಭಿಯನದ ಕಾಲಚಕ್ರ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ
X

ಸ್ಯಾಂಡಲ್​​ವುಡ್​ನ ಆ್ಯಂಗ್ರಿ ಯಂಗ್​ಮ್ಯಾನ್​ ವಸಿಷ್ಟ ಸಿಂಹ ಅಭಿನಯದ ಎಕ್ಸ್​ಪೆಕ್ಡೆಡ್​ ಮೂವಿ ಕಾಲಚಕ್ರ. ಸದ್ಯ ಈ ಟೀಸರ್​ ರಿಲೀಸ್​ ಆಗಿದ್ದು, ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಲೈಕ್ಸ್​ ಅಂಡ್​ ವೀವ್ಸ್​ ಪಡೆದುಕೊಂಡು, ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿ ಕ್ಷಣ, ಪ್ರತಿ ನಿಮಿಷ ಹಾಗೂ ಪ್ರತಿ ನಿತ್ಯ ಹೊಸ ಹೊಸ ಆಲೋಚನೆಗಳು ಹುಟ್ಟುತ್ತಲೇ ಇರುತ್ತವೆ. ಅಂಥದ್ದೇ ಒಂದು ಹೊಸ ಥ್ರಿಲ್ಲಿಂಗ್​ ಆಲೋಚನೆ ಈಗ ಕಾಲಚಕ್ರ ಟೀಸರ್​ ಮೂಲಕ ಬಿಡುಗಡೆಯಾಗಿದೆ.

ಕಾಲಚಕ್ರ. 1991ರಲ್ಲಿ ರೆಬೆಲ್​ ಸ್ಟಾರ್​ ಅಂಬರೀಶ್ ಇದೇ ಟೈಟಲ್​ನಲ್ಲಿ ಸಿನಿಮಾ ಮಾಡಿದರು. ಸೂಪರ್​ ಡೂಪರ್​ ಹಿಟ್​ ಕೂಡ ಆಗಿತ್ತು. ಇದೀಗ 29 ವರ್ಷಗಳ ಬಳಿಕ ಈಗ ಅದೇ ಕಾಲಚಕ್ರ ಟೈಟಲ್​ನಲ್ಲಿ ಹೊಸ ಚಿತ್ರ ರೆಡಿಯಾಗಿದೆ. ಇಂಟರೆಸ್ಟಿಂಗ್​ ಏನಂದ್ರೆ ಮಾಡ್ರನ್​ ಕಾಲಚಕ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ತಾ ಇರೋದು ಬೇರಾರೂ ಅಲ್ಲ, ಕನ್ನಡ ಚಿತ್ರರಂಗದ ಆ್ಯಂಗ್ರಿ ಯಂಗ್​ ಮ್ಯಾನ್​ ವಸಿಷ್ಠ ಸಿಂಹ.

ಟ್ರೈಲರ್​ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ನಲ್ಲಿ ಕಾಲಚಕ್ರ ಹವಾ ಎಬ್ಬಿಸಿದೆ. ಯಾಕಂದ್ರೆ ಚಿತ್ರದ ಟೀಸರ್ ಅಷ್ಟರಮಟ್ಟಿಗೆ ಕ್ಯೂರಿಯಾಸಿಟಿ ಬಿಲ್ಡ್​ ಮಾಡುತ್ತೆ. ಎಲ್ಲೂ ಚಿತ್ರದ ಕಥೆ ರಿವೀಲ್​ ಆಗಿಲ್ಲ. ಆದರೆ ಕುತೂಹಲವನ್ನ ಮಾತ್ರ ಹೆಚ್ಚು ಮಾಡುತ್ತೆ.

ಕಾಲಚಕ್ರ ಚಿತ್ರದ ಟೀಸರ್​ ಹೇಳುವ ಪ್ರಕಾರ ಇದೊಂದು ಸಸ್ಪೆನ್ಸ್​ ಥ್ರಿಲ್ಲರ್, ಪ್ರೀತಿ ಇದೆ. ಸಂಬಂಧಗಳ ವ್ಯಾಲ್ಯೂ ಇದೆ. ಪತ್ನಿಯನ್ನು ಕಳೆದುಕೊಂಡ ಪತಿ ಹಾಗೂ ಅಮ್ಮನನ್ನ ಕಳೆದುಕೊಂಡ ಮಗುವಿನ ನೋವಿದೆ. ಜೊತೆಗೆ ಸಾಧನೆ, ಸವಾಲುಗಳು ಮತ್ತು ಮೋಸದ ಕರಿಛಾಯೆಯೂ ಇದೆ. ಟೀಸರ್​ ನೋಡಿ ಎಲ್ಲವನ್ನೂ ಹೇಳಲು ಸಾಧ್ಯವಾಗದೇ ಇದ್ರೂ, ನಿರ್ದೇಶಕ ಸುಮಂತ್​ ಕ್ರಾಂತಿಯವರು ಹೇಳಲು ಹೊರಟಿರುವ ಕಥೆಯ ತಿರುಳಿನಲ್ಲಿ ಸಮ್​ಥಿಂಗ್​ ಈಸ್​ ದೇರ್​ ಎನ್ನುವ ಸಂದೇಶವಂತೂ ಕಾಣಿಸುತ್ತೆ.

ಎಲ್ಲದಕ್ಕಿಂತ ಮುಖ್ಯವಾದ ಸಂಗತಿ ಏನಂದ್ರೆ, ಕಾಲಚಕ್ರ ಕಾಲ್ಪನಿಕ ಕಥೆಯಲ್ಲ. ಇದು ರಿಯಲ್​ ಸ್ಟೋರಿಯನ್ನ ಆಧರಿಸಿದ ಚಿತ್ರವಾಗಿದೆ. ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಬೇಕು ಎನ್ನುವ ಕುತೂಹಲ ಉಂಟಾಗುತ್ತೆ. ಅಂದ ಹಾಗೆ, ಕೆಲ ದಿನಗಳ ಹಿಂದಷ್ಟೇ ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದ ಹಾಡು ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ಚಿತ್ರದ ಪೋಸ್ಟರ್​ ಚಿತ್ರ ಪ್ರೇಮಿಗಳನ್ನ ಆಕರ್ಷಿಸಿತ್ತು.

ನೆಗಿಟಿವ್​ ರೋಲ್​ಗಳ ಮೂಲಕ ಕನ್ನಡ ಪ್ರೇಕ್ಷಕರನ್ನ ರಂಜಿಸಿದ್ದ ವಸಿಷ್ಠ ಈಗಾಗ್ಲೇ ದಯವಿಟ್ಟು ಗಮನಿಸಿ ಎನ್ನುವ ಚಿತ್ರದ ಮೂಲಕ ನಾಯಕ ನಟರಾಗಿಯೂ ಕಾಣಿಸಿಕೊಂಡಿದರು. ಅವರು ಹೀರೋ ಆಗಿ ನಟಿಸುತ್ತಿರುವ ಎರಡನೇ ಚಿತ್ರ ಕಾಲಚಕ್ರ. ನಿಜ ಹೇಳಬೇಕು ಅಂದ್ರೆ,ಕನ್ನಡ ಸಿನಿಪ್ರಿಯರು ಈ ಕಾಲಚಕ್ರವನ್ನ ದಯವಿಟ್ಟು ಗಮನಿಸಲೇಬೇಕು. ಯಾಕಂದ್ರೆ, ಚಿತ್ರದ ಟೀಸರ್​ನಲ್ಲಿ ನಿಜವಾದ ಧಮ್​ ಇದೆ.

Next Story

RELATED STORIES