ಮದಗಜ ವಿಲನ್ ಲುಕ್ ರಿವೀಲ್ಗೆ ಮುಹೂರ್ತ ಫಿಕ್ಸ್
ಲುಂಗಿ ಜುಬ್ಬಾ ತೊಟ್ಟು, ವೈಟ್ ಬಿಯರ್ಡ್ ಲುಕ್ನಲ್ಲಿ JPB

ಮದಗಜ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಆಗ್ತಾನೇ ಇದೆ. ಸದ್ಯ ಮದಗಜ ಕೊನೆ ಹಂತದ ಶೂಟಿಂಗ್ ಮಾಡುತ್ತಿದ್ದು, ಸಿನಿಮಾದ ಒಂದೊಂದೇ ಸ್ಯಾಂಪಲ್ಗಳು ಹೊರಬರ್ತಿವೆ. ಇದೀಗ ಮದಗಜನ ಎದುರು ಅಬ್ಬರಿಸೋ ವಿಲನ್ ಲುಕ್ನ್ನ ರಿವೀಲ್ ಮಾಡೋಕ್ಕೆ ರೆಡಿಯಾಗಿದೆ ಚಿತ್ರತಂಡ.
ಮದಗಜ, ಸಿನಿಮಾ ಶುರುವಿನಿಂದ ಇಲ್ಲಿವರೆಗೂ ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡ್ತಾನೇ ಇದೆ. ಈಗಾಗಲೇ ಕನ್ನಡ ತಮಿಳು ತೆಲುಗಿನಲ್ಲಿ ಮದಗಜನ ಟೀಸರ್ ಘರ್ಜನೆ ಜೋರಾಗಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್ ಕಾದಿದೆ.
ಮದಗಜ ಸಿನಿಮಾದ ವಿಲನ್ ಜಗಪತಿ ಬಾಬುರ ಲುಕ್ ರಿವೀಲ್ ಆಗುತ್ತಿದೆ. ಇದೇ ಫೆಬ್ರುವರಿ 12ರಂದು ಬೆಳಿಗ್ಗೆ 9ಗಂಟೆ 9 ನಿಮಿಷಕ್ಕೆ ಜಗಪತಿ ಬಾಬು ಕ್ಯಾರೆಕ್ಟರ್ ಲುಕ್ ರಿವೀಲ್ ಆಗುತ್ತಿದೆ. ಅಂದ್ಹಾಗೇ ಈ ಹಿಂದೆ ಜಗಪತಿ ಬಾಬು ಮದಗಜ ಸೆಟ್ನಲ್ಲಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಅದರಂತೆ ಲುಂಗಿ ಬುಬ್ಬಾ ತೊಟ್ಟು, ವೈಟ್ ಬಿಯರ್ಡ್ ಲುಕ್ನಲ್ಲಿ ಜಗಪತಿ ಬಾಬು ಕಾಣಿಸಿಕೊಂಡಿದರು. ಆದರೆ, ಚಿತ್ರದಲ್ಲಿ ಕಂಪ್ಲೀಟ್ ಲುಕ್ ಹೇಗಿರುತ್ತೆ ಅನ್ನೊದನ್ನ ಅಫೀಶಿಯಲ್ ಆಗಿ ಚಿತ್ರತಂಡವೇ ರಿವೀಲ್ ಮಾಡಲಿದೆ.
ಸದ್ಯ ಮದಗಜ 3ನೇ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಲಾಸ್ಟ್ ಶೆಡ್ಯೂಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಸದ್ಯ ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಒಂದೊಂದೇ ಸ್ಯಾಂಪಲ್ಗಳು ಬಿಡುಗೆಯಾಗಲಿದ್ದು, ಆದಷ್ಟು ಬೇಗ ಚಿತ್ರವನ್ನ ತೆರೆಗೆ ತರೋ ಪ್ಲಾನ್ ಮಾಡುತ್ತಿದೆ ಮದಗಜ ಟೀಂ.