ಫೆಬ್ರವರಿ 8 ಅಭಿಮಾನಿಗಳ ದಾಸನಿಗೆ ಸ್ಪೆಷಲ್ ಡೇ..
ದಚ್ಚು ಹಿರೋಯಿಸಂಗೆ 19 ವರ್ಷಗಳ ಸಂಭ್ರಮ

ಅಭಿಮಾನಿಗಳ ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ದಚ್ಚು ಚಾಲೆಂಜಿಂಗ್ ಸ್ಟಾರ್ ಆಗೋಕ್ಕೆ ಅಂದು ಇಟ್ಟ ಮೊದಲ ಹೆಜ್ಜೆಯೇ ಮೆಜೆಸ್ಟಿಕ್. ಆ ಮೆಜೆಸ್ಟಿಕ್ ಸಿನಿಮಾಗಿಂದು 19 ವರ್ಷಗಳ ಸಂಭ್ರಮ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಸ್ಯಾಂಡಲ್ವುಡ್ನ ಬಾಕ್ಸಾಫೀಸ್ ಸುಲ್ತಾನ್. ಬಹುದೊಡ್ಡ ಅಭಿಮಾನಿ ಬಳಗವನ್ನ ಗಳಿಸಿರೋ ನಟ. 50 ಸಿನಿಮಾಗಳನ್ನ ಫೂರೈಸಿ ಸಕ್ಸಸ್ಪುಲ್ ಆಗಿ ಮುನ್ನುಗ್ತಿರೋ ಹೀರೋ. ಆದರೆ, ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರೋ ದಚ್ಚುಗೆ ನಾಯಕನಾಗಿ ಮೊದಲ ಹೆಜ್ಜೆಯಾಗಿದ್ದು ಅದೇ ಮೆಜೆಸ್ಟಿಕ್ ಸಿನಿಮಾ.
ದರ್ಶನ್ ತೂಗುದೀಪ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್. ಇಂದಿಗೆ ಈ ಸಿನಿಮಾ ತೆರೆಕಂಡು 19 ವರ್ಷಗಳು ಕಳೆದಿವೆ. ಮೆಜೆಸ್ಟಿಕ್ಗೂ ಮುನ್ನ ಲೈಟ್ ಬಾಯ್ ಆಗಿ, ಪೋಷಕ ಪಾತ್ರಗಳನ್ನ ಮಾತ್ರ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದ ದಚ್ಚು, ಮೊದಲ ಬಾರಿಗೆ ಹೀರೋ ಆಗಿ ಬಣ್ಣ ಹಚ್ಚಿದ್ದು ಇದೇ ಮೆಜೆಸ್ಟಿಕ್ ಸಿನಿಮಾ ಮೂಲಕ.
ಮೆಜೆಸ್ಟಿಕ್ ಸಿನಿಮಾದಲ್ಲಿ ದಚ್ಚು ಒಂದ್ಕಡೆ ಪ್ರಜ್ವಲ್ ಹೆಸರಿನ ಚಾಕೋಲೇಟ್ ಹೀರೋ ಆಗಿಯೂ ಮತ್ತು ದಾಸ ಹೆಸ್ರಿನ ಫ್ ಅಂಡ್ ಟಫ್ ಮಾಸ್ ಹೀರೋ ಆಗಿಯೂ , 2 ಶೇಡ್ಗಳಲ್ಲಿ ಮಿಂಚಿದರು. ಕಣ್ಣಿಗೆ ಲೆನ್ಸ್, ಕೆದರಿದ ಹೇರ್ ಸ್ಟೈಲ್, ರಫ್ ಅಂಡ್ ಟಫ್ ಲುಕ್ ಇದೆಲ್ಲವೂ ಮಾಸ್ ಸಿನಿಮಾ ಪ್ರಿಯರಿಗೆ ಇಷ್ಟವಾಗುವಂತೆ ಮಾಡಿತ್ತು. ಈ ಚಿತ್ರದ ದಾಸ ಕ್ಯಾರೆಕ್ಟರ್ ಎಷ್ಟರ ಮಟ್ಟಿಗೆ ಪಾಪ್ಯುಲರ್ ಆಗಿತ್ತು ಅಂದ್ರೆ ಮುಂದಿನ ದಿನಗಳಲ್ಲಿ ಇದೇ ದಾಸ ಟೈಟಲ್ನಲ್ಲಿ ದರ್ಶನ್ ಸಿನಿಮಾ ಮಾಡಿದರು.
ಲವ್ ಸ್ಟೋರಿ ಜೊತೆಗೆ ಅಂಡರ್ವರ್ಲ್ಡ್ ಬೇಸ್ಡ್ ಸಿನಿಮಾ ಮೆಜೆಸ್ಟಿಕ್ ಸಿನಿಪ್ರಿಯರ ಮನಗೆದ್ದಿತ್ತು. ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಮೆಜೆಸ್ಟಿಕ್ ಚಿತ್ರದ ಮುಹೂರ್ತದ ಫೋಟೋಗಳು ಹರಿದಾಡುತ್ತಿವೆ. ಮಜೆಸ್ಟಿಕ್ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ ಕ್ಲಾಪ್ ಮಾಡಿದ್ರೆ, ಇದೇ ಮುಹೂರ್ತ ಸಮಾರಂಭದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಪತ್ನಿ ಸುಮಲತಾ ಅಂಬರೀಶ್ ಕೂಡ ಭಾಗಿಯಾಗಿದ್ದಾರೆ.
ಮೆಜೆಸ್ಟಿಕ್' 2002 ಫೆಬ್ರವರಿ 8 ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸಿನಿಮಾ. ಚಿತ್ರಕ್ಕೆ ನಿರ್ದೇಶಕ ಪಿ.ಎನ್.ಸತ್ಯ ನಿರ್ದೇಶನ ಮಾಡಿದರು, ಎಂ.ಜಿ.ರಾಮಮೂರ್ತಿ ಮತ್ತು ಬಾ.ಮಾ ಹರೀಶ್ ನಿರ್ಮಾಣ ಮಾಡಿದ್ರೆ, ಸಾಧುಕೋಕಿಲಾ ಮ್ಯೂಸಿಕ್ ಮಾಡಿದ್ದ ಅಷ್ಟು ಹಾಡುಗಳು ಸೂಪರ್ ಹಿಟ್ ಲಿಸ್ಟ್ ಸೇರಿದ್ವು.
ಇನ್ನು ಚಿತ್ರಕ್ಕೆ ಅಣಜಿ ನಾಗರಾಜ್ ಛಾಯಗ್ರಹಣವಿತ್ತು. ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗಿ ರೇಖಾ ಮಿಂಚಿದರು. ಮೆಜೆಸ್ಟಿಕ್ ಸಿನಿಮಾ ಸಕ್ಸಸ್ಪುಲ್ ಆಗಿ ಪ್ರದರ್ಶನ ಕಂಡಿತ್ತು. ಸದ್ಯ ನೆಚ್ಚಿನ ನಟನ ಸಿನಿಮಾಗೇ 19 ವರ್ಷಗಳು ತುಂಬಿದ ಸಂಭ್ರಮವನ್ನ ಡಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟ್ ಮಾಡುತ್ತಿದ್ದಾರೆ.