Top

ಟಾಲಿವುಡ್​ಗೆ ಎಂಟ್ರಿ ಕೊಟ್ಟ ಟಗರು ಪುಟ್ಟಿ ಮಾನ್ವಿತಾ

ಇದೀಗ ಮಾನ್ವಿತಾ ಸದ್ದಿಲ್ಲದೇ ಟಾಲಿವುಡ್​ಗೆ ಹಾರಿದ್ದಾರೆ.

ಟಾಲಿವುಡ್​ಗೆ ಎಂಟ್ರಿ ಕೊಟ್ಟ ಟಗರು ಪುಟ್ಟಿ ಮಾನ್ವಿತಾ
X

ಟಗರು ಪುಟ್ಟಿ ಮಾನ್ವಿತಾ ಕಾಮತ್ ಬೆರಳೆಣಿಕೆಯಷ್ಟು ಸಿನಿಮಾಗಳ ಮೂಲಕವೇ ಸ್ಯಾಂಡಲ್​ವುಡ್​​ನಲ್ಲಿ ಹೆಚ್ಚುಗಮನ ಸೆಳೆದ ನಟಿ. ಇದೀಗ ಮಾನ್ವಿತಾ ಸದ್ದಿಲ್ಲದೇ ಟಾಲಿವುಡ್​ಗೆ ಹಾರಿದ್ದಾರೆ. ಹೊಸ ಸಿನಿಮಾದ ಮುಹೂರ್ತ ಮುಗಿಸಿ, ಈ ಖುಷಿವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಕೆಂಡಸಂಪಿಗೆ ಸಿನಿಮಾ ಮೂಲಕ ಕನ್ನಡಕ್ಕೆ ನಟಿಯಾಗಿ ಕಾಲಿಟ್ಟ, ಮಾನ್ವಿತಾ ಹರೀಶ್​, ಆ ನಂತರ ಮಾನ್ವಿತಾ ಕಾಮತ್​ ಆದರು. ಬ್ಯಾಕ್​ ಟು ಬ್ಯಾಕ್​ ಕನ್ನಡ ಸಿನಿಮಾಗಳಲ್ಲಿ ಮಿಂಚಿದ ಮಾನ್ವಿತಾ ಗ್ಯಾಪ್​ಲ್ಲಿ ರಾಜಸ್ಥಾನ್​ ಡೈರಿಸ್​ ಎಂಬ ಕನ್ನಡ ಮತ್ತು ಮರಾಠಿಯ ಬೈ ಲಾಂಗ್ವೆಲ್​ ಸಿನಿಮಾ ಮಾಡಿದ್ದು, ಅದಿನ್ನು ರಿಲೀಸ್​ ಆಗಬೇಕಿದೆ.

ಮರಾಠಿ ಸಿನಿಮಾ ನಂತರ ಇದೀಗ ಡೈರೆಕ್ಟಾಗಿ ಟಾಲಿವುಡ್​​ಗೆ ಕಾಲಿಟ್ಟಿದ್ದಾರೆ ನಟಿ ಮಾನ್ವಿತಾ. 2019ರಲ್ಲಿ ಇಂಡಿಯಾ ವರ್ಸಸ್​ ಇಂಗ್ಲೆಂಡ್​ ಸಿನಿಮಾ ನಂತರ, ತೆರೆಮೇಲೆ ಕಾಣಿಸಿಕೊಳ್ಳದ ಮಾನ್ವಿತಾ, ವರ್ಕೌಟ್ ಮಾಡಿ, ಮೊದಲಿಗಿಂತಲೂ ಹೆಚ್ಚು ಫಿಟ್​ ಆಗಿದ್ದಾರೆ.

ಇದೀಗ ಮಾನ್ವಿತಾ ಸದ್ದಿಲ್ಲದೇ ಟಾಲಿವುಡ್​ಗೆ ಹಾರಿದ್ದು, ರೀಸೆಂಟಾಗಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಮಳ್ಳಿ ಮೊದಲೈಂದಿ ಅಂತ ಟೈಟಲ್​ ಇಟ್ಟಿದ್ದು, ಈ ಚಿತ್ರದ ಕ್ಲಾಪ್​ ಬೋರ್ಡ್​ ಹಿಡಿದು, ಫೋಟೋಗೆ ಪೋಸ್​ ಕೊಟ್ಟಿದ್ದಾರೆ ಮಾನ್ವಿತಾ. ಅಂದ್ಹಾಗೇ ಈ ಖುಷಿ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ, ಚಿತ್ರದ ನಾಯಕ, ನಿರ್ದೇಶಕ, ಚಿತ್ರತಂಡದ ಬಗ್ಗೆ ಮಾಹಿತಿ ರಿವೀಲ್​ ಮಾಡಿಲ್ಲ ಟಗರು ಪುಟ್ಟಿ.

Next Story

RELATED STORIES