Top

ಪ್ರೇಮಿಗಳ ದಿನದಂದು 'ದಿಯಾ' ಸಿನಿಮಾ ರಿ-ರೀಲಿಸ್

ಚಿತ್ರದಲ್ಲಿನ ಪ್ರೇಮಕಥೆಗೆ ಯುವಸಮೂಹ ಸಿಕ್ಕಾಪಟ್ಟೆ ಫಿದಾ ಆಗಿತ್ತು

ಪ್ರೇಮಿಗಳ ದಿನದಂದು ದಿಯಾ ಸಿನಿಮಾ ರಿ-ರೀಲಿಸ್
X

ಪ್ರೇಮಿಗಳ ದಿನಾಚರಣೆ ರೀ ರಿಲೀಸ್ ಆಗುತ್ತಿದೆ ಸ್ಯಾಂಡಲ್​ವುಡ್​ನ ಸಕ್ಸಸ್​ಫುಲ್​ ಸಿನಿಮಾ ದಿಯಾ. ತತ ಮೂರನೇ ಬಾರಿ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿರೋ ದಿಯಾ ಚಿತ್ರದ ಬಗ್ಗೆ ಸ್ವತ: ನಾಯಕ ನಾಯಕಿ ಸಂಭ್ರಮವನ್ನ ಶೇರ್ ಮಾಡಿಕೊಂಡಿದ್ದಾರೆ.

ದಿಯಾ, ಈ ಸಿನಿಮಾವನ್ನ ಬಹುಶಃ ಯಾರಿಗೂ ಮರಿಲಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ 2020ರಲ್ಲಿ ತೆರೆಕಂಡ ಈ ಚಿತ್ರ ಕ್ರಿಯೇಟ್ ಮಾಡಿದ್ದ ಕ್ರೇಝ್ ಅಷ್ಟಿಷ್ಟಲ್ಲ. ನವಿರಾದ ಪ್ರೇಮ ಕಥೆ. ಇನೋಸೆಂಟ್ ಫೀಲಿಂಗ್ಸ್, ಸೆಂಟಿಮೆಂಟ್ಸ್ ಜೊತೆಗೆ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್​. ಸೋ ಕಂಪ್ಲೀಟ್ ಪ್ಯಾಕೇಜ್ ಚಿತ್ರ ಇದಾಗಿತ್ತು.

ಚಿತ್ರದಲ್ಲಿನ ಪ್ರೇಮಕಥೆಗೆ ಯುವಸಮೂಹ ಸಿಕ್ಕಾಪಟ್ಟೆ ಫಿದಾ ಆಗಿತ್ತು. ಚಿತ್ರ ಭರ್ಜರಿ ಪ್ರದರ್ಶನ ಕಾಣ್ತಿತ್ತು. ಜೊತೆಗೆ ಮೌತ್ ಪಬ್ಲಿಸಿಟಿಯಿಂದಾಗಿ ದಿನೇದಿನೇ ತನ್ನ ಪ್ರೇಕ್ಷಕರನ್ನ ಹೆಚ್ಚು ಮಾಡ್ಕೊಳ್ತಾ ಹೋಯ್ತು. ಹೀಗೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದ ದಿಯಾ ಚಿತ್ರ ಲಾಕ್ಡೌನ್ ಹೊಡೆತಕ್ಕೆ ಸಿಲುಕಿದ್ದು ಎಲ್ಲರಿಗೂ ಗೊತ್ತೆ ಇದೆ.

ಅಂದ್ಹಾಗೇ ಕೆಲ ದಿನಗಳ ನಂತರ ದಿಯಾ, ಒಟಿಟಿ ಫ್ಲಾಟ್ ಪಾರ್ಮ್​ ನಲ್ಲಿ ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿತ್ತು. ಚಿತ್ರ ನೋಡಿದ ಕನ್ನಡಿಗರಷ್ಟೇ ಅಲ್ಲದೇ ಅನ್ಯ ಭಾಷಿಕರು ಚಿತ್ರವನ್ನ ಕೊಂಡಾಡಿದರು. ಒಟಿಟಿ ಯಲ್ಲಿ ಸಿನಿಮಾ ನೋಡಿ ಖುಷಿ ಪಟ್ಟವರೆಲ್ಲ ಛೇ ಇಂಥಾ ಅದ್ಬುತ ಸಿನಿಮಾವನ್ನ ಥಿಯೇಟರ್​ನಲ್ಲಿ ನೋಡ್ಲಿಕ್ಕೆ ಆಗ್ಲಿಲ್ಲವಲ್ಲ ಅಂಥ ಬೇಸರ ವನ್ನು ವ್ಯಕ್ತ ಪಡಿಸಿದರು.

ಲಾಕ್​​ಡನ್​ನಿಂದ ಥಿಯೇಟರ್ ಗಳಿಗೆ ರಿಲೀಫ್ ಸಿಕ್ಕಿದ್ದೇ ತಡ ,ದಿಯಾ ಚಿತ್ರತಂಡ ಮತ್ತೆ ರಿರಿಲೀಸ್ ಆಯ್ತು. ಇನ್ನು ಒಟಿಟಿ ಯಲ್ಲಿ ದಿಯಾ ನೋಡಿ ಫಿಧಾ ಆಗಿದ್ದ ಸಿನಿ ರಸಿಕರು ಥಿಯೇಟರ್​ನಲ್ಲಿ ಮತ್ತೊಮ್ಮೆ ಸಿನಿಮಾ ನೋಡಿ ಖುಷಿ ಪಟ್ರು. ಎರಡನೇ ಬಾರಿ ತೆರೆಕಂಡ ದಿಯಾ ಕೊರೊನಾ ನಡುವೆಯೂ ಮತ್ತೊಮ್ಮೆ ಭರ್ಜರಿ ರೆಸ್ಪಾನ್ಸ್ ಪಡೆಯುವಲ್ಲಿ ಯಶಸ್ವಿ ಆಯ್ತು.

ಈಗ ಈ ಲವ್ ಸೆಂಟಿಮೆಂಟ್ ಚಿತ್ರವನ್ನ ಮತ್ತೊಮ್ಮೆ ರಿ-ರೀಲಿಸ್ ಮಾಡಿ, ವ್ಯಾಲೆಂಟೈನ್ಸ್ ಡೇ ಗೆ ಗಿಫ್ಟ್ ನೀಡುತ್ತಿದೆ ಚಿತ್ರ ತಂಡ. ದಿಯಾ, ಆದಿ, ರೋಹಿತ್ ಪಾತ್ರಗಳ ಗುಂಗಲ್ಲೇ ಇರೋ ಪ್ರೇಕ್ಷಕರು ಚಿತ್ರವನ್ನ ಮತ್ತೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ, ಪೃಥ್ವಿ ಅಂಬರ್ ನಾಯಕರಾಗಿ ಖುಷಿ ರವಿ ನಾಯಕಿಯಾಗಿ ಮಿಂಚಿದರು. ಈಗ ಸ್ವತಃ ಪೃಥ್ವಿ ಅಂಬರ್ ಮತ್ತು ಖುಷಿ ನೀವು ಗೆಲ್ಲಿಸಿದ ಸಿನಿಮಾ ದಿಯಾ ಮತ್ತೊಮ್ಮೆ ರಿಲೀಸ್ ಆಗ್ತಿದೆ. ಥಿಯೇಟರ್ ನಲ್ಲಿ ಈ ಬಾರಿ ಮಿಸ್ ಮಾಡದೇ ಚಿತ್ರ ನೋಡಿ ಅಂದಿದ್ದಾರೆ.

ಕೆಲವೇ ದಿನಗಳ ಹಿಂದೆ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದ ಚಿತ್ರತಂಡ ಈಗ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ. ಪ್ರತಿ ಬಾರಿ ಸಖತ್ ರೆಸ್ಪಾನ್ಸ್ ಗಿಟ್ಟಿಸಿರೋ ದಿಯಾ ಚಿತ್ರ ಮತ್ತೆ ಅಂಥದ್ದೇ ರೆಸ್ಪಾನ್ಸ್ ಸಿಗೋ ನಿರೀಕ್ಷೆಯಲ್ಲಿದೆ.

Next Story

RELATED STORIES