Top

ಯುವರತ್ನ ರಿಲೀಸ್​ಗೆ ಕೌಂಟ್ಡೌನ್ ಕರುನಾಡಿನಾದ್ಯಂತ ಯುವಯಾತ್ರೆ

23ರಂದು ಮೈಸೂರು ಮತ್ತು ಮಂಡ್ಯದಲ್ಲಿ ಅಪ್ಪು ಯುವಯಾತ್ರೆ ನಡೆಯಲಿದೆ.

ಯುವರತ್ನ ರಿಲೀಸ್​ಗೆ ಕೌಂಟ್ಡೌನ್ ಕರುನಾಡಿನಾದ್ಯಂತ ಯುವಯಾತ್ರೆ
X

ಕರುನಾಡಿನಾದ್ಯಂತ ಯುವರತ್ನ ಯಾತ್ರೆ ಶುರುವಾಗಿದೆ. ಸ್ವತಃ ಪವರ್ ಸ್ಟಾರೇ ಊರುಗಳಿಗೆ ಭೇಟಿ ನೀಡಿ, ಅಭಿಮಾನಿ ದೇವರುಗಳನ್ನ ಮಾತನಾಡಿಸಿಕೊಂಡು ಬರ್ತಾ ಇದ್ದಾರೆ. ಅಪ್ಪು ಬರ್ತಿದ್ದಾರೆ ಅಂದ್ರೆ ಸುಮ್ನೆನಾ. ಅಭಿಮಾನಿಗಳಂತೂ ಅದ್ದೂರಿಯಾಗಿ ಅವರನ್ನ ವೆಲ್ಕಂ ಮಾಡ್ಕೊಳ್ತಾ ಇದ್ದಾರೆ.

ಬಹುನಿರೀಕ್ಷಿತ 'ಯುವರತ್ನ' ಸಿನಿಮಾದ ಬಿಡುಗಡೆಗಾಗಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ವೇಯ್ಟ್ ಮಾಡುತ್ತಿದ್ದಾರೆ. ಆದರೆ, ಅದಕ್ಕೂ ಮುನ್ನ ಯುವಯಾತ್ರೆಯ ಸಂಭ್ರಮದಲ್ಲಿದ್ದಾರೆ ಅಪ್ಪು ಫ್ಯಾನ್ಸ್. ಯುವರತ್ನ ಮಾತಿನಂತೆ ಮಾರ್ಚ್​ 21 ರಿಂದ 23ರ ವರೆಗೆ 3 ದಿನಗಳ ಕಾಲ ಸಾಕಷ್ಟು ಊರುಗಳಿಗೆ ಭೇಟಿ ನೀಡಿ, ಅಭಿಮಾನಿಗಳನ್ನ ಭೇಟಿ ಮಾಡೋದಾಗಿ ಹೇಳಿದರು. ಅದರಂತೆ ಒಂದು ಲಿಸ್ಟ್ ಕೂಡ ಬಿಡುಗಡೆಯಾಗಿತ್ತು.

ಈಗಾಗಲೇ ಯುವರತ್ನ ಟೀಂ ಅಂದುಕೊಂಡಂತೆ. ಹೇಳಿದ ಡೇಟ್​ಗೆ ಹೇಳಿದ ಸಮಯಕ್ಕೆ ಆಯಾ ಊರುಗಳಿಗೆ ಭೇಟಿ ಮಾಡಿದ್ದಾರೆ. ಮಾರ್ಚ್​ 21 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರ್ಗಿಗೆ ಭೇಟಿ ಕೊಟ್ಟಿದ್ದಾರೆ. ಹಾಗಾದ್ರೆ ಪವರ್ಸ್ಟಾರ್​​ನ ಕಲಬುರ್ಗಿಯಲ್ಲಿ ಅಭಿಮಾನಿಗಳು ಬರಮಾಡಿಕೊಂಡಿದ್ದು ಹೇಗೆ ಗೊತ್ತಾ(?)

ಇನ್ನು ಬೆಳಿಗ್ಗೆ ಗುಲ್ಬರ್ಗಾ ಭೇಟಿ ಆದ ನಂತರ, ಮದ್ಯಾಹ್ನದ ವೇಳೆಗೆ ಬೆಳಗಾವಿಗೆ ವಿಸಿಟ್ ಮಾಡಿದ್ದಾರೆ. ಬೆಳಗಾವಿಯ ಅಭಿಮಾನಿಗಳು ಕೈಯಲ್ಲಿ ಕನ್ನಡದ ಭಾವುಟ ಹಿಡಿದು, ಅಪ್ಪುನ ವೆಲ್ಕಂ ಮಾಡಿಕೊಂಡಿದ್ದಾರೆ. ಅಷ್ಟೇಅಲ್ಲ ಪವರ್ ಸ್ಟಾರ್ ಕೂಡ ವೇದಿಕೆ ಮೇಲೆ ನಿಂತು ಯುವರತ್ನ ಚಿತ್ರದ ಡೈಲಾಗ್​ ಹೇಳಿ ರಂಜಿಸಿದ್ದಾರೆ.

ಇನ್ನು ಸಂಜೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲೂ ಅದ್ದೂರಿಯಾಗಿ ಯುವ ಸಂಭ್ರಮ ನೆರವೇರಿದೆ. ಕ್ರೇನ್​ ಮೂಲಕ ಹೂ ಸುರಿಮಳೆಯೇ ಸುರಿಸಿ ಸ್ವಾಗತಿಸಿದ್ದಾರೆ ಅಭಿಮಾನಿಗಳು. ಇದೇ ವೇಳೆ ಮಾತನಾಡಿದ ಅಪ್ಪು ಸ್ಟಾರ್ ನಾನಲ್ಲ..ನನ್ನನ್ನು ಸ್ಟಾರ್ ಮಾಡಿದ ನೀವೆಲ್ಲರೂ ಸ್ಟಾರ್ ಅಂತ ಹೇಳಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿತ್ತು.

ಇನ್ನು ಮಾರ್ಚ್​ 22ರಂದು ಕೂಡ ಯುವರತ್ನನ 2ನೇ ದಿನದ ಯಾತ್ರೆ ಮುಂದುವರೆದಿದ್ದು, ಬೆಳಿಗ್ಗೆ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಬಳ್ಳಾರಿಯ ಅಭಿಮಾನಿಗಳ ಕೂಡ ಅದ್ದೂರಿಯಾಗಿ ಸ್ವಾಗತಿಸಿದ್ದು, ಬಳ್ಳಾರಿ ನನಗೆ ಹೊಸದೇನಲ್ಲ. ಸಾಕಷ್ಟು ಬಾರಿ ಬಂದಿದ್ದೇನ ಅಂತ ಇಲ್ಲಿಯ ಜನ, ಭಾಷೆಯ ಬಗ್ಗೆ ಖುಷಿಯ ಮಾತುಗಳನ್ನಾಡಿದ್ದಾರೆ ಪವರ್​ ಸ್ಟಾರ್.

ಬಳ್ಳಾರಿಯ ನಂತರ ಚಿತ್ರದುರ್ಗ ಹಾಗೂ ತುಮಕೂರಿಗೆ ಭೇಟಿ ನಿಡಿರೋ ಪವರ್ ಸ್ಟಾರ್ ಅಲ್ಲಿಯ ಅಭಿಮಾನಿಗಳ ಪ್ರೀತಿ, ಗೌರವವನ್ನ ಸ್ವೀಕರಿಸಿ, ಯುವರತ್ನ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನ ವೇದಿಕೆ ಮೇಲೆ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಸಾಕಷ್ಟು ಊರುಗಳಲ್ಲಿ , ಮಾರ್ಗ ಮಧ್ಯೆ ಆ ಊರಿನ ತಿಂಡಿ-ತಿನಿಸುಗಳನ್ನ ಟೆಸ್ಟ್​​ ಮಾಡಿದ್ದಾರೆ ಅಪ್ಪು. ಇನ್ನು 23 ರಂದು ಮೈಸೂರು ಮತ್ತು ಮಂಡ್ಯದಲ್ಲಿ ಅಪ್ಪು ಯುವಯಾತ್ರೆ ನಡೆಯಲಿದೆ.

Next Story

RELATED STORIES