ಕರ್ನಾಟಕದಲ್ಲಿ ಬೀಡು ಬಿಟ್ಟಿರೋ ಬಾಲಿವುಡ್ ಸ್ಟಾರ್
ಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಬೆಂಗಳೂರು: ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚ್ತಿರೋ ಶ್ರೀಲಂಕಾ ಸುಂದರಿ, ಸದ್ಯ ನಮ್ಮ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಶಿವಮೊಗ್ಗದಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಿಗೆ ಅಚ್ಚರಿ ತಂದಿದ್ದಾರೆ.
ಸಾಕಷ್ಟು ಬಾಲಿವುಡ್ ಸ್ಟಾರ್ಗಳಿಗೆ ಕರ್ನಾಟಕ ನಂಟಿದೆ. ದೀಪಿಕಾ ಪಡುಕೊಣೆ, ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ ಹೀಗೆ ಸಾಕಷ್ಟು ನಟಿಮಣಿಯರು ನಮ್ಮ ಬೆಂಗಳೂರು, ಮಂಗಳೂರಿನವರೇ. ಸದ್ಯ ಬಾಲಿವುಡ್ ಮತ್ತೊಬ್ಬ ನಟಿ ನಮ್ಮ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಅದರಲ್ಲೂ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಸದ್ಯ ಮಲೆನಾಡಿನ ಸುಂದರ ತಾಣದಲ್ಲಿ ವಿಹಾರ ಮಾಡ್ತಿದ್ದಾರೆ. ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ನಲ್ಲಿ ಸ್ಟೇ ಮಾಡಿದ್ದಾರೆ. ಸ್ವತಃ ಈ ವಿಚಾರವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಂದ್ಹಾಗೇ ರೆಸಾರ್ಟ್ನಲ್ಲಿ ಗಾಲ್ಫ್ ಆಡ್ತಿರೋ ವಿಡಿಯೋವೊಂದನ್ನ ಕೂಡ ಅಪ್ಲೋಡ್ ಮಾಡಿದ್ದಾರೆ.
ಅಂದ್ಹಾಗೇ ಜಾಕ್ವೆಲಿನ್ ಶಿವಮೊಗ್ಗಕ್ಕೆ ಬಂದಿರೋ ಕಾರಣವಾದ್ರೂ ಏನು(?) ಸಿನಿಮಾ ಶೂಟಿಂಗ್ ಗೋಸ್ಕರನಾ ಅಂದರೆ ನೋ..ಕೇವಲ ವೆಕೇಶನ್ ಮತ್ತು ವೀಕೆಂಡ್ ಮಸ್ತಿಗಾಗಿ. ಸ್ನೇಹಿತರ ಜೊತೆ ಆಗಾಗ್ಗೆ, ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುವ ಜಾಕ್ವೆಲಿನ್ ಈ ಬಾರಿ ಶಿವಮೊಗ್ಗವನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಮೊಗ್ಗದ ಸುಂದರ ಕ್ಷಣಗಳ ಫೋಟೋವನ್ನು ಶೇರ್ ಮಾಡೋದ್ರ ಜೊತೆಗೆ 'ಬೆಸ್ಟ್ ವೀಕೆಂಡ್ ಎವರ್' ಅಂತ ಬರೆದುಕೊಂಡಿದ್ದಾರೆ.
ಜಾಕ್ವೆಲಿನ್, ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ಏಪ್ರಿಲ್ ನಲ್ಲಿ ಸಾಂಗ್ ಶೂಟಿಂಗ್ ನಡೆಯಲಿದ್ದು, ಜಾಕ್ವೆಲಿನ್ ಪ್ಯಾಂಟಮ್ ತಂಡ ಸೇರಿಕೊಳ್ತಾರೆ ಅಂತ ಸುದ್ದಿ ಕೇಳಿಬರ್ತಿದೆ. ಜಾಕ್ವೆಲಿನ್ ಬಿಟೌನ್ನ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದು, ಸದ್ಯ ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ, ಅಟ್ಯಾಕ್, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.