Top

ಬಾಕ್ಸರ್ ಆಗಿ ಮಿಂಚಲು ಅಜಾನುಬಾಹು ಆದ ಆರ್ಯ

ಬರೋಬ್ಬರಿ 150 ಕೆ.ಜಿ. ತೂಕವನ್ನ ಹೊತ್ತುಕೊಂಡು ವರ್ಕೌಟ್ ಮಾಡುತ್ತಿದ್ದಾರೆ. ಇವರು ಕಾಲಿವುಡ್​ನ ಸೂಪರ್ ಸ್ಟಾರ್ ಆರ್ಯ.

ಬಾಕ್ಸರ್ ಆಗಿ ಮಿಂಚಲು ಅಜಾನುಬಾಹು ಆದ ಆರ್ಯ
X

ಕಾಲಿವುಡ್​ ಸ್ಟಾರ್ ಆರ್ಯ ​ಸದ್ಯ ಜಿಮ್​ ವರ್ಕೌಟ್​ ಅಂತ ಸಖತ್​ ಬ್ಯುಸಿಯಾಗಿದ್ದಾರೆ. ಸೋಶಿಯಲ್​ ಮಿಡಿಯಾದಲ್ಲಿ ಆರ್ಯ ವರ್ಕೌಟ್ ವಿಡಿಯೋಸ್ ಸಖತ್​ ವೈರಲ್​ ಆಗುತ್ತಿದೆ. ಸದ್ಯ ಆರ್ಯ 150 ಕೆಜಿ ವೈಯ್ಟ್ ಲಿಫ್ಟ್ ಮಾಡುತ್ತಿರೋ ವಿಡಿಯೋ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಒಂದಲ್ಲ... ಎರಡಲ್ಲ... ಬರೋಬ್ಬರಿ 150 ಕೆ.ಜಿ. ತೂಕವನ್ನ ಹೊತ್ತುಕೊಂಡು ವರ್ಕೌಟ್ ಮಾಡುತ್ತಿದ್ದಾರೆ. ಇವರು ಕಾಲಿವುಡ್​ನ ಸೂಪರ್ ಸ್ಟಾರ್ ಆರ್ಯ. ಇದು ಬಾಡಿಬಿಲ್ಡ್ ಮಾಡಲು ಆರ್ಯ ಮಾಡುತ್ತಿರುವ ಕಸರತ್ತು.

ಕಾಲಿವುಡ್​ ಸ್ಟಾರ್ ಆರ್ಯ ಜಿಮ್​ ವರ್ಕೌಟ್​ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಾಕ್ಸರ್ ಆಗಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದೀಗ ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ವರ್ಕೌಟ್ ಮಾಡುವ ವಿಡಿಯೋವೊಂದು ಆರ್ಯ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಆರ್ಯ 150 ಕೆಜಿ ತೂಕವನ್ನು ಎತ್ತಿಕೊಂಡು ಫುಲ್​​ಸ್ಕ್ಯಾಟ್ಸ್ ​ ಮಾಡುತ್ತಿದ್ದಾರೆ. ಈ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾ ಕಿಕ್​ ಸ್ಟಾರ್ಟ್​ ಸಿಗಲಿದೆ ಅನ್ನೋ ಸುದ್ದಿ ಸಹ ಕೊಟ್ಟಿದ್ದಾರೆ.


ಆರ್ಯ ತಮ್ಮ ವಿವಾಹವಾದ ನಂತರ ಹೊಸ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟು ಫಿಟ್ನೆಸ್​ ಕಾಯ್ದುಕೊಳ್ಳುತ್ತಿದ್ದಾರೆ. ಸದ್ಯ ಖ್ಯಾತ ನಿರ್ದೇಶಕ ಪರಂಜಿತ್​ ಕಾಂಬಿನೇಷನ್​ನಲ್ಲಿ ಮಾಡುತ್ತಿರೋ ಹೊಸ ಸಿನಿಮಾಗಾಗಿ ಹಗಲಿರುಳು ಜಿಮ್​ನಲ್ಲೇ ಬೆವರಿಳಿಸುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲಿ ಆರ್ಯ ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಬಾಕ್ಸಿಂಗ್​ ಅಭ್ಯಾಸ ಸಹ ಮಾಡುತ್ತಿದ್ದಾರೆ. ಇದು ಆರ್ಯ ಅಭಿನಯದ 30ನೇ ಚಿತ್ರವಾಗಿದ್ದು, ಇದರಲ್ಲಿ ಆರ್ಯ ಬಾಕ್ಸರ್​ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಬಾಕ್ಸರ್ ಪಾತ್ರಕ್ಕಾಗಿ ಆರ್ಯ ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಪ್ರತಿದಿನ ಓಡ್ತಾರೆ, ಸೈಕ್ಲಿಂಗ್ ಮಾಡ್ತಾರೆ. ಹೀಗೆ ಆರ್ಯ ತಮ್ಮ ನಿತ್ಯದ ಫಿಟ್ನೆಸ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾ ಇರ್ತಾರೆ.

ಸದ್ಯ ಮುಂದಿನ ಚಿತ್ರಕ್ಕಾಗಿ ಆರ್ಯ ಭರ್ಜರಿ ಪ್ರಿಪರೇಷನ್ ಮಾಡುತ್ತಿದ್ದಾರೆ. ವರ್ಕೌಟ್​ ವಿಡಿಯೋಗಳನ್ನೇ ನೋಡಿ ಫಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಿನಿಮಾದಲ್ಲಿ ಆರ್ಯ ಲುಕ್ ಯಾವ ರೀತಿ ಇರಬಹುದು ಅಂತ ಕಾತರದಿಂದ ಕಾಯುತ್ತಿದ್ದಾರೆ.

Next Story

RELATED STORIES