ಅಂಬಿ ಜನ್ಮಸ್ಥಳದಲ್ಲೇ ಬ್ಯಾಡ್ ಮ್ಯಾನರ್ಸ್ ಫಸ್ಟ್ ಡೇ ಶೂಟಿಂಗ್
ಶೂಟಿಂಗ್ ಸೆಟ್ಗೆ ವಿಸಿಟ್ ಮಾಡಿ ವಿಶ್ ಮಾಡಿದ ಡಿ ಬಾಸ್ ದಚ್ಚು

ಜೂನಿಯರ್ ರೆಬೆಲ್ ಸ್ಟಾರ್ ಎರಡನೇ ವೆಂಚರ್ ಬ್ಯಾಡ್ ಮ್ಯಾನರ್ಸ್ ಟೈಟಲ್ ಮತ್ತು ಫಸ್ಟ್ ಲುಕ್ನಿಂದಲೇ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಇದೀಗ ಮೈಸೂರಿನಲ್ಲಿ ಚಿತ್ರಕ್ಕೆ ಅದ್ಧೂರಿ ಮುಹೂರ್ತ ನಡೆದಿದ್ದು, ಅಂಬಿ ಜನ್ಮಸ್ಥಳದಲ್ಲೇ ಮೊದಲ ದಿನದಿಂದ ಶೂಟಿಂಗ್ ಶುರುಮಾಡಿದ್ದಾರೆ.
ಅಮರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಶ್ ಅಭೀನಯದ 2ನೇ ಸಿನಿಮಾ ಬ್ಯಾಡ್ ಮ್ಯಾನರ್ಸ್. ಚಿತ್ರದ ಟೈಟಲ್ ಜೊತೆಗೆ ಸುಕ್ಕಾ ಸೂರಿ, ಅಭಿಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅಂದಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಕೊಂಡಿತ್ತು. ಆ ನಂತರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಆ ನಿರೀಕ್ಷೆಯನ್ನ ಡಬಲ್ ಮಾಡಿತ್ತು.

ಕೈಯ್ಯಲ್ಲಿ ಗನ್ ಹಿಡಿದು, ರಗಡ್ ಲುಕ್ನಲ್ಲಿ ಅಭೀ ಕಾಣಿಸಿಕೊಂಡಿದ್ದು, ಇಡೀ ಸಿನಿಮಾ ನಿರ್ದೇಶಕ ಸೂರಿ ಸ್ಟೈಲ್ನಲ್ಲಿದ್ದು, ಪಕ್ಕಾ ರಾ ಅಂಡ್ ಮಾಸ್ ಸಿನಿಮಾ ಅನ್ನೋದು ಗೊತ್ತಾಗ್ತಿದೆ. ಸದ್ಯ ಈ ಚಿತ್ರಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿದೆ. ಕೆಲವೇ ಮಂದಿಯ ಸಮ್ಮುಖದಲ್ಲಿ ಮುಹೂರ್ತ ಸಿಂಪಲ್ಲಾಗಿ ನೆರವೇರಿದೆ.
ಇನ್ನು ಚಿತ್ರದ ಮುಹೂರ್ತದ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿರುವ ಸುಮಲತಾ ಅಂಬರೀಶ್ ಅಭಿ ನಟನೆಯ "ಬ್ಯಾಡ್ ಮ್ಯಾನರ್ಸ್" ಸಿನಿಮಾದ ಮುಹೂರ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿತು. ಎಂದಿನಂತೆ ಅಭಿ ಮತ್ತು ತಂಡಕ್ಕೆ ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ಇರಲಿ ಅಂತ ಬರೆದುಕೊಂಡಿದ್ದಾರೆ.

ಅಂದ್ಹಾಗೇ ವಿಶೇಷವಾಗಿ ಬ್ಯಾಡ್ ಮ್ಯಾನರ್ಸ್ ಮೊದಲ ದಿನದ ಚಿತ್ರೀಕರಣವನ್ನ ಅಂಬಿ ಜನ್ಮಸ್ಥಳ ಅಂದ್ರೆ ಮಂಡ್ಯದಲ್ಲಿ ಮಾಡಲಾಗಿದೆ.ಇದಕ್ಕಾಗಿ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ರಗಡ್ ಸೆಟ್ ಹಾಕಲಾಗಿದೆ. ಮೈಸೂರು ಮತ್ತು ಮಂಡ್ಯ ಸುತ್ತಮುತ್ತ 12 ದಿನಗಳ ಕಾಲ ಫಸ್ಟ್ ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡಿದೆಯಂತೆ ಚಿತ್ರತಂಡ.
ಇನ್ನು ಸಹೋದರ ಅಭಿಷೇಕ್ ಚಿತ್ರಕ್ಕೆ ಶುಭ ಹಾರೈಸಲು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿನಿಮಾ ಶೂಟಿಂಗ್ ಸೆಟ್ಗೆ ವಿಸಿಟ್ ಮಾಡಿದ್ದಾರೆ.