Top

ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಪ್ರತಿಮೆ ಧ್ವಂಸ ಪ್ರಕರಣ ಅಳಿಯ ಅನಿರುದ್ಧ ಪ್ರತಿಕ್ರಿಯೆ

ಈ ಹಿಂದೆಯೂ ಒಮ್ಮೆ ಇದೇ ಜಾಗದಿಂದ ವಿಷ್ಣು ಪುತ್ಥಳಿಯನ್ನು ಹೊತ್ತೊಯ್ಯಲಾಗಿತ್ತು

ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಪ್ರತಿಮೆ ಧ್ವಂಸ ಪ್ರಕರಣ ಅಳಿಯ ಅನಿರುದ್ಧ ಪ್ರತಿಕ್ರಿಯೆ
X

ಬೆಂಗಳೂರು: ಸ್ಯಾಂಡಲ್​ವುಡ್​ನ ಸಾಹಸ ಸಿಂಹ ದಿವಗಂತ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರಿಗೆ ಮತ್ತೆ ಸಿಟ್ಟು ಬಂದಿದ್ದು, ಕೆಲ ದಿನಗಳ ಹಿಂದೆ ತೆಲುಗಿನ ನಟನೊಬ್ಬ ವಿಷ್ಣು ಬಗ್ಗೆ ಇಲ್ಲ-ಸಲ್ಲದ್ದು ಮಾತನಾಡಿದ್ದಾಗ ಅವರಿಗೆ ಸಿಟ್ಟು ಬಂದಿತ್ತು. ಈಗ ಮತ್ತೆ ಇದೇ ಕಾರಣಕ್ಕೆ ಸಿಟ್ಟಾಗಿದ್ದಾರೆ.

ಮಾಗಡಿ ರಸ್ತೆಯಲ್ಲಿ ನಟ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಪುತ್ಥಳಿಯನ್ನು ಯಾರೊ ಕಿಡಿಗೇಡಿಗಳು ಹಾಳುಗೆಡವಿದ್ದಾರೆ. ವಿಷ್ಣುವರ್ಧನ್ ಪುತ್ಥಳಿಗೆ ಅವಮಾನ ಎಸಗಿದ್ದಾರೆ. ಈ ಘಟನೆ ನಟ ಅನಿರುದ್ಧ್​​ ಅವರನ್ನು ಕೆರಳಿಸಿದೆ.

ಮಾವನವರೂ ಆಗಿರುವ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿರುವ ಅನಿರುದ್ಧ ಅವರು, ವಿಷ್ಣುವರ್ಧನ್ ಪುತ್ಥಳಿಗೆ ಮಾಡಲಾಗಿರುವ ಅವಮಾನಕ್ಕೆ ಸಿಟ್ಟಿನಿಂದ, ಬೇಸರದಿಂದ ಪ್ರತಿಕ್ರಿಯಿಸಿದ್ದು, 'ವಿಷ್ಣುವರ್ಧನ್ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನು ಪೊಲೀಸರು ಶ್ರೀಘವೇ ಹಿಡಿದು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಿಸಲಾಗಿತ್ತು. ಇದು ಬಾಲಗಂಗಾಧರ ಸ್ವಾಮೀಜಿ ಸರ್ಕಲ್ ಆಗಿದ್ದರಿಂದ ಇಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಿಸಬೇಕು, ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ಈ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು ಅದೇ ಕಾರಣಕ್ಕೆ ವಿಷ್ಣು ಅವರ ಪುತ್ಥಳಿಯನ್ನು ಧ್ವಂಸ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೂ ಒಮ್ಮೆ ಇದೇ ಜಾಗದಿಂದ ವಿಷ್ಣು ಪುತ್ಥಳಿಯನ್ನು ಹೊತ್ತೊಯ್ಯಲಾಗಿತ್ತು.

Next Story

RELATED STORIES