Top

ಫೇಸ್​ಬುಕ್​ ಲೈವ್​ನಲ್ಲಿ ನಟಿ ಸಂಜನಾ ಗಲ್ರಾನಿ ದಿಢೀರ್​ ಪ್ರತ್ಯಕ್ಷ

ನಟಿ ಸಂಜನಾ ಗಲ್ರಾನಿ ಫೇಸ್​ಬುಕ್ ಲೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ

ಫೇಸ್​ಬುಕ್​ ಲೈವ್​ನಲ್ಲಿ ನಟಿ ಸಂಜನಾ ಗಲ್ರಾನಿ ದಿಢೀರ್​ ಪ್ರತ್ಯಕ್ಷ
X

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಟಿ ಸಂಜನಾ ಗಿಲ್ರಾನಿ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿರಲಿಲ್ಲ, ಅದುವಲ್ಲದೇ ಜೈಲಿನಿಂದ ಹೊರ ಬಂದ ನಂತರ ಆಸ್ಪತ್ರೆ ಸೇರಿದ್ದರು.

ಸದ್ಯ ಸಂಜನಾ ಗಲ್ರಾನಿ ಅವರು ಆಸ್ಪತ್ರೆಯಲ್ಲಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅವರು ಚಿಕಿತ್ಸೆ ಪಡೆದು ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇನ್ನು ಸಂಜನಾ ಅವರು ಯಾವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದರೆ, ಇದ್ದಕ್ಕಿದಂತೆ ಮನೆಗೆ ಬಂದ ಬಳಿಕ ಫೇಸ್​ಬುಕ್ ಲೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, 'ನನಗೆ ತುಂಬಾ ನೋವಾಗಿದೆ. 3 ತಿಂಗಳು ಹಗಲು-ರಾತ್ರಿ ಅಳುತ್ತಿದೆ. ಕಣ್ಣಿರು ಬತ್ತಿ ಹೋಗಿದೆ. ನಾನು ನಮಾಜ್ ಮಾಡುವಾಗ ಸಾವು ಕೊಡು ಅಂತ ದೇವರಲ್ಲಿ ಬೇಡಿಕೊಂಡಿದ್ದೇನೆ. ನೋವಿಂದ ಹೊರಗೆ ಬರಲು ಸಮಯ ಬೇಕಿದೆ. ನನಗೆ ಸರ್ಜರಿ ಆಗಿದೆ ಸ್ವಲ್ಪ ಚೇತರಿಕೆ ಬೇಕಾಗಿದೆ' ಎಂದು ಅಭಿಮಾನಿಗಳ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ.

Next Story

RELATED STORIES