Top

ಗೆಳೆಯನ ಹುಟ್ಟುಹಬ್ಬಕ್ಕೆ ಅಧ್ಯಕ್ಷರ ಸರ್​ಪ್ರೈಸ್ ಏನ್​ ಗೊತ್ತಾ..?

ಗೆಳೆಯನ ಹುಟ್ಟುಹಬ್ಬಕ್ಕೆ ಅಧ್ಯಕ್ಷರ ಸರ್​ಪ್ರೈಸ್ ಏನ್​ ಗೊತ್ತಾ..?
X

ಸ್ಯಾಂಡಲ್​ವುಡ್​ ಅಧ್ಯಕ್ಷ ಶರಣ್ ಅಕ್ಟೋಬರ್​ 8ರಂದು ಏನೇ ಪ್ರಶ್ನೆ ಕೇಳಿದ್ರೂ ಬರೀ ವಿಶಲ್​ನಲ್ಲೇ ಉತ್ತರ ಕೊಡುತ್ತಿದ್ದರು. ಮನೆಯಿಂದ ಶೂಟಿಂಗ್​ ಸೆಟ್​ವರೆಗೂ ಒಂದು ಮಾತು ಆಡದೇ ಕೇಳಿದ ಪ್ರಶ್ನೆಗೆಲ್ಲಾ ವಿಷಲ್​​ ಹೊಡೆಯೋದರ ಮೂಲಕವೇ ಆನ್ಸರ್ ಮಾಡ್ತಾ ಇದರು. ಯಾಕೆ ಹೀಗೆ ಅಂತ ಕೇಳಿದವ್ರಿಗೆಲ್ಲಾ ಅಕ್ಟೋಬರ್​ 9ನೇ ತಾರೀಖು ಉತ್ತರ ಕೊಡುತ್ತೇನೆ ಅಂತ ಹೇಳಿದರು. ಸೋ ಆ ದಿನ ಬಂದೇ ಬಿಡ್ತು.

ಕಾಮಿಡಿ ಕಿಂಗ್​ ಶರಣ್ ಅಕ್ಟೋಬರ್​ 8ರಂದು ಮೌನವ್ರತಕ್ಕೆ ಶರಣಾಗಿದರು. ಮನೆಯಲ್ಲಿ ಅಮ್ಮ, ಮಗಳಿಂದ ಹಿಡಿದು, ಶೂಟಿಂಗ್​ ಸೆಟ್​ನಲ್ಲಿ ಡೈರೆಕ್ಟರ್ ಮೇಕಪ್​ಮ್ಯಾನ್​ ವರೆಗೂ ಯಾರೇ ಮಾತನಾಡಿಸಿದರು, ಕೇವಲ ವಿಶಲ್ ಹೊಡಿಯೋ ಮೂಲಕವೇ ಉತ್ತೆ ಕೊಡ್ತಾ ಇದರು. ಈ ವಿಡಿಯೋವನ್ನ ಸ್ವತಃ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡೋದರ ಮೂಲಕ, ಇದರ ಹಿಂದೆ ಒಂದು ಸರ್​ಪ್ರೈಸ್ ಇದೆ. ಅಕ್ಟೋಬರ್​ 9 ರಂದು ರಿವೀಲ್​ ಆಗುತ್ತೆ ಅಂತ ಹೇಳಿದರು.

ಅರೇ ಇದ್ಯಾಕಪ್ಪಾ ಹೀಗಾದರು ಶರಣ್​ ಅಂತ ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಮಾಡ್ತಾನೇ ಇದರು. ಫೈನಲಿ ಎಲ್ರೂ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶರಣ್​ಗೂ ವಿಶಲ್​ಗೂ ಸಂಬಂಧ ಇದೆ. ಶರಣ್​ ತಮ್ಮ ಹೋಮ್ ಬ್ಯಾನರ್​ ಲಡ್ಡು ಮೂವೀಸ್ ಅಡಿಯಲ್ಲಿ ಹೊಸ ಚಿತ್ರವೊಂದನ್ನ ಅನೌನ್ಸ್​ ಮಾಡಿದ್ದಾರೆ. ಈ ಹಿಂದೆ ಇವರದ್ದೇ ಬ್ಯಾನರ್​ನಲ್ಲಿ ರ್ಯಾಂಬೋ, ರ್ಯಾಂಬೋ 2 ಸಿನಿಮಾ ನಿರ್ಮಾಣ ಮಾಡಿದ್ದ ಶರಣ್​ ಇದೀಗ ಪ್ರೊಡಕ್ಷನ್​​ ನಂಬರ್​ 3 ಹೆಸ್ರಿನಲ್ಲಿ ಹೊಸ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ.

ಇದೊಂದೆ ಸರ್​ಪ್ರೈಸ್ ಅಲ್ಲ. ಇದರ ಜೊತೆಗೆ ನೆಚ್ಚಿನ ಗೆಳೆಯ ತರುಣ್​ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ಮತ್ತೊಂದು ವಿಶೇಷ ಸುದ್ದಿ ಹೇಳಿದ್ದಾರೆ. ಈ ಹೊಸ ಚಿತ್ರಕ್ಕೆ ತರುಣ್​ ಸುಧೀರ್​ ಸ್ವತಃ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಈ ಮೂಲಕ ನೆಚ್ಚಿನ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನು ಈ ಪೋಸ್ಟರ್ನಲ್ಲಿ ವಿಶಲ್​ ಸಿಂಬಲ್​ ಇದ್ದು, ಸರ್​ಪ್ರೈಸ್ ಜೊತೆಗೆ ತಲೆಗೆ ಕೆಲಸ ಕೊಟ್ಟಿದ್ದಾರೆ ಶರಣ್. ಈ ಫೋಸ್ಟರ್ ಮೂಲಕ ಚಿತ್ರದ ಟೈಟಲ್​ ಏನು ಅಂತ ಗೆಸ್ ಮಾಡ್ತಾ ಇರಿ. ಆದಷ್ಟು ಬೇಗ ರಿವೀಲ್​ ಮಾಡ್ತಿವಿ ಅಂತ ಹೇಳಿದ್ದಾರೆ.

ಸದ್ಯ ನಟ ಶರಣ್​ ಅವತಾರ್ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತ್ರ ತಮ್ಮದೇ ಹೋಂ ಬ್ಯಾನರ್​ನಲ್ಲಿ ಸಿನಿಮಾ ಮಾಡೋದು ಪಕ್ಕಾ ಆಗಿದೆ.

Next Story

RELATED STORIES