Top

ಮೇಘನಾ ಪಕ್ಕದಲ್ಲೇ ನಿಂತು ಹರಸಿ ಹಾರೈಸಿದ ಚಿರಂಜೀವಿ ಸರ್ಜಾ..!

ಇದೀಗ ಜೂನಿಯರ್​ ಚಿರು ನಿರೀಕ್ಷೆಯಲ್ಲಿರೋ ಮೇಘನಾಗೆ ಸೀಮಂತ ಶಾಸ್ತ್ರ ನೆರವೇರಿದೆ.

ಮೇಘನಾ ಪಕ್ಕದಲ್ಲೇ ನಿಂತು ಹರಸಿ ಹಾರೈಸಿದ ಚಿರಂಜೀವಿ ಸರ್ಜಾ..!
X

ಸ್ಯಾಂಡಲ್​ವುಡ್​ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನಗಲಿ ತಿಂಗಳುಗಳೇ ಕಳೆದುಹೋದ್ವು ಆದರೆ ಸದಾ ಚಿರು ನೆನಪಿನಲ್ಲೇ ಬದುಕನ್ನ ಸಾಗಿಸುತ್ತಿದ್ದಾರೆ ಪತ್ನಿ ಮೇಘನಾ ರಾಜ್. ಇದೀಗ ಜೂನಿಯರ್​ ಚಿರು ನಿರೀಕ್ಷೆಯಲ್ಲಿರೋ ಮೇಘನಾಗೆ ಸೀಮಂತ ಶಾಸ್ತ್ರ ನೆರವೇರಿದೆ. ಪಕ್ಕದಲ್ಲೇ ನಿಂತು ಪತ್ನಿಯನ್ನ ನೋಡಿ ಹರಸಿ ಹಾರೈಸಿದ್ದಾರೆ ಚಿರು ಸರ್ಜಾ.

10 ವರ್ಷಗಳ ಕಾಲ ಪ್ರೀತಿಸಿ, ಪ್ರೀತಿಗೆ ಮದುವೆಯಂಬ ಅಧಿಕೃತ ಮುದ್ರೆ ಒತ್ತಿದ ಮುದ್ದಾದ ಜೋಡಿ ಚಿರು ಸರ್ಜಾ ಮತ್ತು ಮೇಘನರಾಜ್. ಇವರಿಬ್ಬರ ಪ್ರೀತಿಯ ಸಂಕೇತ , ಮೇಘನಾ ಮಡಿಲು ತುಂಬುವಷ್ಟರಲ್ಲೇ ಚಿರು ಸರ್ಜಾ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಚಿರು ನಿಧನರಾದಾಗ ಮೇಘನಾ ತುಂಬು ಗರ್ಭೀಣಿ. ಅದರಲ್ಲೂ ಅವಳಿಜವಳಿ ಮಕ್ಕಳು ಅನ್ನೋ ಸುದ್ದಿ ಕಿವಿಗೆ ಬಿದ್ದಾಗಂತೂ, ದೇವರು ಎಷ್ಟು ಕ್ರೂರಿ. ಅಪ್ಪ ಅನ್ನೋ ತೊದಲು ನುಡಿ ಕೇಳುವ ಮುನ್ನವೇ ಚಿರುವನ್ನ ತನ್ನಡೆಗೆ ಕರೆಸಿಕೊಂಡ ಅಂತ ಅದೆಷ್ಟು ಜನ ಶಾಪ ಹಾಕಿದ್ದಾರೋ.


ಸದ್ಯ ಚಿರು ನೆನಪಿನಲ್ಲೇ ಜೀವನ ಸಾಗಿಸ್ತಿರೋ ಮೆಚ್ಚಿನ ಮಡದಿ ಮೇಘನಾ ಮತ್ತು ಸರ್ಜಾ ಫ್ಯಾಮಿಲಿ ಕೊಂಚಕೊಂಚವೇ ನೋವಿನಿಂದ ಚೇತರಿಸಿಕೊಳ್ತಿದ್ದಾರೆ. ಸದ್ಯ ಮೇಘನಾರಾಜ್​ಗೆ ಸರಳವಾಗಿ ಸೀಮಂತ ಶಾಸ್ತ್ರ ನೇರವೇರಿಸಿದ್ದಾರೆ. ಹಸಿರು ಸೀರೆಯುಟ್ಟು, ಕೈ ತುಂಬ ಬಳೆತೊಟ್ಟು, ಗೊಂಬೆಯಂತೇ ಕಂಗೊಳಿಸುತ್ತಿದ್ದಾರೆ ಮೇಘನಾ. ಇಡೀ ಸರ್ಜಾ ಕುಟುಂಬವೇ ಮೇಘನಾಗೇ ಅರಿಶಿನ ಕುಂಕುಮ ಹಚ್ಚಿ, ಬಳೆ ತೊಡಸಿ ಹರಸಿ ಹಾರೈಸಿದ್ದಾರೆ. ಅದರಲ್ಲೂ ಪ್ರೀತಿಯ ಅತ್ತಿಗೆಯನ್ನ ನೋಡಿ, ಧ್ರುವಾ ಸರ್ಜಾ ಕಣ್ಣಾಲಿಗಳು ಒದ್ದೆಯಾಗಿದ್ದವು.

ಮೇಘನಾ ರಾಜ್​ ಸೀಮಂತ ಕಾರ್ಯದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು. ಆದರೆ, ಚಿರು ಇಲ್ಲವೆಂಬ ಭಾವನೆ ಮೇಘನಾರಾನ್ನ​ ಕಾಡಬಾರದು ಅಂತಲೇ, ಚಿರು ಸರ್ಜಾರ ಕಟೌಟ್​ನ್ನ ನಿರ್ಮಿಸಿ, ಮೇಘನಾ ಪಕ್ಕದಲ್ಲೇ ಇರಿಸಲಾಗಿತ್ತು. ಚಿರು ಫೋಟೋ, ಕಟೌಟ್​ನ್ನ ನೋಡುತ್ತಲ್ಲೇ ಮೇಘನಾರಾಜ್ ಫೋಟೋಗೆ ಮಂದಹಾಸ ಬೀರಿದರು.

ಸದ್ಯ ಮೇಘನಾರಾಜ್​ರ ಸೀಮಂತದ ಕೆಲ ವಿಡಿಯೋ ಮತ್ತು ಫೋಟೋಗಳು ಸೋಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸ್ವತಃ ಅಭಿಮಾನಿಗಳೇ ಮೇಘನಾ ಪಕ್ಕದಲ್ಲಿ ಚಿರು ಇರುವಂತೆ ಫೋಟೊಗಳನ್ನ ಎಡಿಟ್ ಮಾಡಿ ಹರಿಬಿಡ್ತಿದ್ದಾರೆ. ಎಲ್ಲರೂ ದೂರದಿಂದಲೇ ಮೇಘನಾಗೇ ಶುಭಾಶಯ, ಹಾರೈಕೆ ತಿಳಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಅವರು ಜೂನ್​ನಲ್ಲಿ ಹೃದಯಾಘತದಿಂದ ನಿಧನರಾದರು.

Next Story

RELATED STORIES