Top

32ನೇ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ

ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹರಸಿ, ಹಾರೈಸಿ

32ನೇ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ
X

ಆ್ಯಕ್ಷನ್​ ಪ್ರಿನ್ಸ್​​ ಧ್ರುವಾ ಸರ್ಜಾಗೇ ಇಂದು 32ನೇ ವರ್ಷದ ಹುಟ್ಟುಹಬ್ಬ. ಆದರೆ, ಈ ಬಾರಿ ಫ್ಯಾನ್ಸ್ ಜೊತೆ​ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೋ ಪರಿಸ್ಥಿತಿಯಲ್ಲಿ ಧ್ರುವಾ ಇಲ್ಲ ಅನ್ನೋ ವಿಚಾರ ಗೊತ್ತೇಯಿದೆ. ನೆಚ್ಚಿನ ನಟನಿಿಿಗೆ ಅಭಿಮಾನಿಗಳು, ಸೆಲೆಬ್ರೆಟಿಗಳು ಸೋಶಿಯಲ್​ ಮೀಡಿಯಾ ಮೂಲಕವೇ ಶುಭ ಹಾರೈಸ್ತಿದ್ದಾರೆ. ಅದರ ಜೊತೆಗೆ ಧ್ರುವಾ ಫ್ಯಾನ್ಸ್​ಗೆ ಒನ್​ ಸರ್​ಪ್ರೈಸ್​ ಕೂಡ ಇದೆ.

ಧ್ರುವಾ ಸರ್ಜಾ. ಸ್ಯಾಂಡಲ್​ವುಡ್​ನಲ್ಲಿ ಮಾಡಿರೋ 3 ಸಿನಿಮಾಗಳು ಕೂಡ 100 ಡೇಸ್. ಕಡಿಮೆ ಅವಧಿಯಲ್ಲಿ ಕಡಿಮೆ ಸಿನಿಮಾಗಳನ್ನ ಮಾಡಿದರು, ಬಹುದೊಡ್ಡ ಅಭಿಮಾನಿ ಬಳಗವನ್ನ ಹೊಂದಿರೋ ಮಾಸ್​ ಹೀರೋ. ಪ್ರತಿ ಬಾರಿ ಧ್ರುವಾ ಸರ್ಜಾ ಹುಟ್ಟುಹಬ್ಬ ಅಂದ್ರೆ ಮಧ್ಯರಾತ್ರಿಯಿಂದಲೇ ಮನೆಮುಂದೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿತ್ತು. ಹುಟ್ಟುಹಬ್ಬದ ದಿನ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರತಿಯೊಬ್ಬ ಅಭೀಮಾನಿಗೂ ಸಲ್ಫಿ ಕೊಡೋದು ಆ ದಿನದ ವಾಡಿಕೆಯಾಗಿರ್ತಿತ್ತು.

ಆದರೆ, ಈ ಬಾರಿ ಧ್ರುವಾ ಸರ್ಜಾ ಹುಟ್ಟುಹಬ್ಬಕ್ಕೆ ಬ್ರೇಕ್​ ಬಿದ್ದಿದೆ. ಕೊರೊನಾ ಸಮಸ್ಯೆ ಒಂದು ಕಡೆಯಾದ್ರೆ, ಅದಕ್ಕಿಂತ ಹೆಚ್ಚಾಗಿ ಧ್ರುವಾ ಕುಟುಂಬದಲ್ಲಿ ಆಗಿರೋ ನೋವಿನ ಸಂಗತಿ ಎಲ್ರಿಗೂ ಗೊತ್ತಿದೆ. ಹಾಗಾಗಿ ಧ್ರುವಾ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳೋ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಸ್ವತಃ ಧ್ರುವಾ ಸರ್ಜಾ ಅಭಿಮಾನಿಗಳಲ್ಲಿ ಮನವಿಯೊಂದನ್ನ ಮಾಡಿದ್ದಾರೆ. ಅಭಿಮಾನಿಗಳೆ ನಮ್ಮ ಅನ್ನದಾತರು. ಪ್ರತಿವರ್ಷ ನನ್ನ ಹುಟ್ಟುಹಬ್ಬಕ್ಕೆ ನೀವೂ ತೋರಿಸೋ ಪ್ರೀತಿ ಅಭೀಮಾನ ವರ್ಣನಾತೀತ ಆದರೆ ಈ ಬಾರಿ ಆಗಿರೋ ಬೆಳವಣಿಗೆ ನಿಮಗೆ ಗೊತ್ತಿರೋದೇ. ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹರಸಿ, ಹಾರೈಸಿ' ಅಂತ ಟ್ವಿಟ್​ ಮಾಡಿದ್ದಾರೆ.

ಸದ್ಯ ಚಿರು ಅಗಲಿಕೆಯಿಂದ ಕೊಂಚವೇ ಚೇತರಿಸಿಕೊಂಡು, ಪೊಗರು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ನಟ ಧ್ರುವಾ ಸರ್ಜಾ. ನೋವು-ನಲಿವಿನಲ್ಲೂ ಸದಾ ಜೊತೆಗಿರೋ ಸ್ಯಾಂಡಲ್​ವುಡ್​ ಸ್ನೇಹಿತರು ಸೋಶಿಯಲ್​ ಮೀಡಿಯಾ ಮೂಲಕವೇ ಧ್ರುವಾ ಸರ್ಜಾ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ನಟ ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್, ನಿರ್ದೇಶಕರಾದ ಎ.ಪಿ ಅರ್ಜುನ್, ಸಿಂಪಲ್​ ಸುನಿ, ಪವನ್​ ಒಡಯರ್, ನಟಿ ರಚಿತಾರಾಮ್, ನಟ ಡಾಲಿ ಧನಂಜಯ ಹೀಗೆ ಸಾಕಷ್ಟು ಸೆಲೆಬ್ರೆಟಿಗಳು ಮತ್ತು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಸದ್ಯ ಪೊಗರು ಸಿನಿಮಾದ ನಿರೀಕ್ಷೆಯಲ್ಲಿರೋ ಧ್ರುವಾ ಅಭಿಮಾನಿಗಳಿಗೆ ನಿರ್ದೇಶಕ ಎ.ಪಿ ಅರ್ಜುನ್​ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. 2012ರಲ್ಲಿ ಅದ್ದೂರಿ ಸಿನಿಮಾ ಮೂಲಕ ಧ್ರುವಾರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ಎ.ಪಿ ಅರ್ಜುನ್​, ಹುಟ್ಟುಹಬ್ಬದ ದಿನ ಹೊಸ ಚಿತ್ರವೊಂದನ್ನ ಅನೌನ್ಸ್​ ಮಾಡಿದ್ದಾರೆ. 8 ವರ್ಷದ ಬಳಿಕ ಮತ್ತೊಮ್ಮೆ ಅದ್ದೂರಿ ಕಾಂಬಿನೇಷನ್​ ಒಂದಾಗುತ್ತಿದೆ.

ಸದ್ಯ ಧ್ರುವಾ ಮತ್ತು ಎ.ಪಿ ಅರ್ಜುನ್​ ಹೊಸ ಚಿತ್ರಕ್ಕೆ ಪ್ರೊಡಕ್ಷನ್ ನಂ.3 ಅಂತ ವರ್ಕಿಂಗ್​ ಟೈಟಲ್​ ಇಟ್ಟಿದ್ದು, ಪೋಸ್ಟರ್​ ಒಂದನ್ನ ಬಿಡುಗಡೆ ಮಾಡಲಾಗಿದೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಎ.ಪಿ ಅರ್ಜುನ್. ಅದ್ದೂರಿ ಸಿನಿಮಾದಲ್ಲಿ ಲವ್ವರ್​ ಬಾಯ್​ ಜೊತೆಗೆ ಮಾಸ್​ ಲುಕ್​ನಲ್ಲಿ ಮಿಂಚಿದ್ದ ಧ್ರುವಾ ಸರ್ಜಾ, ಡೈಲಾಗ್​ ಡೆಲಿವರಿ ಮೂಲಕಾನೇ ಸಿನಿಪ್ರಿಯರ ಮನ ಗೆದ್ದಿದರು. ಸಿನಿಮಾ ಸೂಪರ್​ ಡೂಪರ್​ ಹಿಟ್ ಆಗಿತ್ತು. ಚಿತ್ರದ ಎಲ್ಲಾ ಹಾಡುಗಳು ಸಂಗೀತ ಪ್ರಿಯರ ಗಮನ ಸಳೆದಿತ್ತು. ಹಾಗಾಗಿ ಈ ಕಾಂಬಿನೇಷನ್​ ಬಗ್ಗೆ ಹೆಚ್ಚಿನ ನಿರೀಕ್ಷೆಯಂತೂ ಇದ್ದೇ ಇದೆ.

ಅಂದ್ಹಾಗೇ ಈ ಹೊಸ ಚಿತ್ರದಲ್ಲಿ ಆಲ್​ಮೋಸ್ಟ್​ ಅದ್ದೂರಿ ಚಿತ್ರದ ಟೆಕ್ನಿಕಲ್​ ಟೀಂ ಇರಲಿದ್ದು, ಇದು ಪಕ್ಕಾ ರಗಡ್​ ಮಾಸ್​ ಸಬ್ಜೆಕ್ಟ್ ಅನ್ನೋದು ಪಕ್ಕಾ ಆಗಿದೆ. ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿರೋ ಧ್ರುವಾ ಸರ್ಜ ಮುಂದಿನ ವರ್ಷ ಈ ಪ್ರಾಜೆಕ್ಟ್​ನ್ನ ಕೈಗೆತ್ತಿಕೊಳ್ಳಲಿದ್ದಾರೆ.

Next Story

RELATED STORIES