ಫಿಲ್ಮಂ ಛೇಂಬರ್ಗೆ ದೂರು ನೀಡಿದ ಬಳಿಕ ನಟ ದರ್ಶನ್ ಪ್ರತಿಕ್ರಿಯೆ
ರಾಬರ್ಟ್ ಸಮಸ್ಯೆ ಅಲ್ಲ, ಎಲ್ಲಾರ ಸಮಸ್ಯೆ. ಎಲ್ಲರೂ ಕುಳಿತುಕೊಂಡು ಸಮಸ್ಯೆ ಬಗೆಹರಿಸಬೇಕು

X
Admin 229 Jan 2021 8:22 AM GMT
ಬೆಂಗಳೂರು: ನಿರ್ಮಾಪಕರು ಅನ್ನ ಹಾಕಿದ್ದಾರೆ. ಹೀಗಾಗಿ ಹೋರಾಟ ಮಾಡಲೇಬೇಕು. ನಿರ್ಮಾಪಕರಿಗೆ ಒಳ್ಳೆಯದು ಆಗಲಿ ಅಂತ ಬಂದಿದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶುಕ್ರವಾರ ಹೇಳಿದರು.
ಟಾಲಿವುಡ್ನಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆಗೆ ಕಿರಿಕ್ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಬಂದಿದ್ದರು. ದೂರು ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಇರುವರು ಕನ್ನಡ ಅಭಿಮಾನ ಬೆಳೆಸಬೇಕು ಎಂದರು.
ಸದ್ಯ ಆಂಧ್ರದವರು ಯಾರು ಕನ್ನಡದಲ್ಲಿ ಮಾತನಾಡಲ್ಲ, ರಾಬರ್ಟ್ ಸಮಸ್ಯೆ ಅಲ್ಲ, ಎಲ್ಲಾರ ಸಮಸ್ಯೆ. ಎಲ್ಲರೂ ಕುಳಿತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ನಟ ದರ್ಶನ್ ಅವರು ಮಾತನಾಡಿದ್ದಾರೆ.
Next Story