ಕೋಲ್ಡ್ ವಾಟರ್ ಕುಡಿಯುವ ಮುನ್ನ ಎಚ್ಚರವಹಿಸುವುದು ಉತ್ತಮ
ತಣ್ಣನೆಯ ನೀರು ಕುಡಿಯುವುದರಿಂದ ಗ್ಯಾಸ್ ಸಮಸ್ಯೆಯನ್ನು ಎದುರಿಸ ಬೇಕಾಗುವುದು ಅಲ್ಲದೇ ಹೊಟ್ಟೆ ನೋವು ಸಹಾ ಕಾಣಿಸಿ ಕೊಳ್ಳುತ್ತದೆ.

ಬೆಂಗಳೂರು: ತಂಪುಪಾನಿ (ಕೋಲ್ಡ್ ನೀರು) ಮತ್ತು ಜ್ಯೂಸ್ಗಳನ್ನು ಕುಡಿವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ, ಇದರಲ್ಲೂ ಮೀಷನ್ನಲ್ಲಿ ಶೇಖರಣೆ ಮಾಡಿ ಇಟ್ಟಿರುವುದನ್ನು (ಫಿಡ್ಜ್) , ಏಕೆಂದರೆ ಕೋಲ್ಡ್ ನೀರು ಮತ್ತು ಜ್ಯೂಸ್ ದೇಹಕ್ಕೆ ಒಳ್ಳೆಯದಲ್ಲ. ಎಷ್ಟೇ ಬಿಸಿಲು ಇರಲಿ, ಹೇಗೆ ಇರಲಿ ಮಾಮೂಲಿ ನೀರು ಅಥವಾ ಜ್ಯೂಸ್ ಕುಡಿಯುವುದು ಉತ್ತಮ.
ನಿಮ್ಮ ದೇಹ ಕೂಲ್ ಆಗಲಿ ಅಂತ ಕೋಲ್ಡ್ ನೀರು ಮತ್ತು ಜ್ಯೂಸ್ ಕುಡಿದರೆ ಬಾಡಿ ಹೀಟ್ ಆಗುತ್ತದೆ. ದೇಹ ತಂಪು ಆಗಬೇಕಾದರೆ ವಾರಂ ನೀರು ಅಥವಾ ಜ್ಯೂಸ್ ಕುಡಿಯಿರಿ. ಆಗ ನಿಮ್ಮ ದೇಹಕ್ಕೆ ಶೀತವಾಗುತ್ತದೆ. ಜೊತೆಗೆ ಯಾವುದೇ ಕಾಲದಲ್ಲೂ ಕೋಲ್ಡ್ ನೀರು ಮತ್ತು ಕೋಲ್ಡ್ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದಲ್ಲ.
ತಣ್ಣನೆಯ ನೀರು ಕುಡಿಯುವುದರಿಂದ ಗ್ಯಾಸ್ ಸಮಸ್ಯೆಯನ್ನು ಎದುರಿಸ ಬೇಕಾಗುವುದು ಅಲ್ಲದೇ ಹೊಟ್ಟೆ ನೋವು ಸಹಾ ಕಾಣಿಸಿ ಕೊಳ್ಳುತ್ತದೆ ಇನ್ನೂ ಹೃದಯದ ವೇಗ ಸ್ಥಳದ ಮೇಲೆ ತಣ್ಣನೆಯ ನೀರು ಪರಿಣಾಮ ಬೀರುತ್ತೆ ಇದರಿಂದಾಗಿ ಹೃದಯ ಬಡಿತದ ವೇಗ ಕಡಿಮೆ ಆಗಿ ಹೃದಯಾಘಾತ ದ ಅಪಾಯಕ್ಕೆ ದಾರಿ ಮಾಡಿ ಕೊಡುತ್ತೆ.
ಅದುವಲ್ಲದೇ, ತಣ್ಣನೆಯ ನೀರನ್ನು ಕುಡಿಯುವುದರಿಂದ ವಸಡಿನ ನೋವು ಪ್ರಾರಂಭ ಆಗುತ್ತೆ. ಹಲ್ಲುಗಳು ಸಡಿಲ ಆಗುವ ಸಾಧ್ಯತೆ ಹೆಚ್ಚು ಇನ್ನೂ ತಣ್ಣನೆಯ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತದೆ. ಇದರಿಂದಾಗಿ ಗಂಟಲಿನ ಸೋಂಕು ಕಾಣಿಸುತ್ತೆ ಹಾಗಾಗಿ ಇನ್ನು ಮುಂದೆ ಕೋಲ್ಡ್ ವಾಟರ್ ಕುಡಿಯುವಾಗ ಸ್ವಲ್ಪ ಯೋಚನೆ ಮಾಡಿ ಕುಡಿಯಿರಿ ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು.