Top

ಸರಳ ವ್ಯಾಯಾಮ ಮಾಡಿ ದೇಹದ ಆರೋಗ್ಯ ಕಾಪಾಡಿ

ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ದೇಹ ದಂಡಿಸದಿದ್ದರೆ ಭವಿಷ್ಯದಲ್ಲಿ ಹಲವಾರು ಅಪಾಯಗಳನ್ನು ಬರಬಹುದು.

ಸರಳ ವ್ಯಾಯಾಮ ಮಾಡಿ ದೇಹದ ಆರೋಗ್ಯ ಕಾಪಾಡಿ
X

ಆರೋಗ್ಯವಂತರಾಗಿರಬೇಕು ಎಂದುಕೊಂಡು ಎಲ್ಲರೂ ತಮ್ಮ ದೈನಂದಿನ ವ್ಯಾಯಾಮಕ್ಕೆ ಸ್ವಲ್ಪ ಸಮಯವನ್ನು ಮೀಸಲಿಟ್ಟಿರುತ್ತಾರೆ. ನಿತ್ಯತದ ಸರಳ ವ್ಯಾಯಾಮ ಹಾಗೂ ದೇಹದಂಡನೆಯಿಂದ ನಮ್ಮ ಆರೋಗ್ಯ ಸ್ಥಿರತೆ, ತೂಕ ನಿರ್ವಹಣೆ, ರಕ್ತದೊತ್ತಡ ಹಾಗೂ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.

ಇಂದು ದಿನವಿಡೀ ಕೆಲಸ ಹಾಗೂ ಒತ್ತಡಗಳ ನಡುವೆ ವ್ಯಾಯಾಮಕ್ಕೆ ಟೈಂ ಇಲ್ಲ ಎಂದು ಅಸಡ್ಡೆ ತೊರುವವರೇ ಜಾಸ್ತಿ. ಇದೊಂದು ಸಮಸ್ಯೆಯಾಗಿ ಬಾಧಿಸುತ್ತಿದೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಫಿಟ್ನೆಸ್‌ ತಜ್ಞರು ಕೆಲವೊಂದು ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಅದುವೇ ಸರಳ ವ್ಯಾಯಾಮ.

ನಮ್ಮ ದೇಹಕ್ಕೆ ಹೇಗೆ ಲಘು ಉಪಾಹಾರವನ್ನು ನೀಡುತ್ತೇವೆಯೋ ಅದೇ ರೀತಿ ದೈನಂದಿನ ಕೆಲಸದ ಒತ್ತಡಗಳ ನಡುವೆ ಕೆಲವೊಂದು ರೀತಿಯಲ್ಲಿ ಲಘು ವ್ಯಾಯಾಮ ಮಾಡಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ದೇಹ ದಂಡಿಸದಿದ್ದರೆ ಭವಿಷ್ಯದಲ್ಲಿ ಹಲವಾರು ಅಪಾಯಗಳನ್ನು ಬರಬಹುದು.

ಸ್ವಲ್ಪ ಸಮಯ ಮೀಸಲಿಡಿ; ವ್ಯಾಯಮ ಮಾಡಲು ಸಮಯದ ಕೊರತೆ ಇದ್ದರೆ ನಾವು ಮಾಡುವ ಕೆಲಸದ ಮಧ್ಯೆಯೇ ಕೆಲವೊಂದು ವ್ಯಾಯಾಮಗಳನ್ನು ಮಾಡಬಹುದು.

ವಿರಾಮ ಅಗತ್ಯವಿದೆ; ಒತ್ತಡ ಜೀವನದ ಮಧ್ಯೆ ಬ್ರೇಕ್‌ ತೆಗೆದುಕೊಳ್ಳಿ. ಹೆಚ್ಚು ಆಹಾರ ಸೇವನೆ ಎಷ್ಟು ಅಪಾಯಕಾರಿಯೋ ಆಹಾರ ಸೇವಿಸದೇ ಕೆಲಸ ಮಾಡುವುದು ಅದಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದನ್ನು ಮರೆಯದಿರಿ.

ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿ; ಸಾಮಾನ್ಯವಾಗಿ ಈ ಪೀಳಿಗೆಯವರು ಮನೆಗೆಲಸ ಮಾಡೋದು ಬಹಳ ಕಡಿಮೆ. ಆಗ್ಗಾಗೇ ಮನೆಯ ಕೆಲಸದಲ್ಲಿ ತೊಡಗಿಸಿಕೊಂಡರೇ ನಿಮಗೆ ಅರಿವಿಲ್ಲದೇ ನೀವು ಚಟುವಟಿಕೆಯಿಂದ ಇರುತ್ತೀರಿ. ಇಲ್ಲಿ ನಿಮ್ಮ ಮನೆ ಕೆಲಸ ನೀವು ಮಾಡುವುದಾರಿಂದ ದೇಹಕ್ಕೆ ವ್ಯಾಯಾಮ ಜೊತೆಗೆ ಮನೆಯ ವಾತಾವರಣ ಕೂಡ ಚನ್ನಾಗಿರುತ್ತದೆ.

ನಡಿಗೆ ಸಾಲದು: ಎಲ್ಲರೂ ನಡೆಯಲೇಬೇಕು ಆದರೆ ನಾವು ನಮಗೆ ಅರಿವಲ್ಲದೇ ಎಷ್ಟೋ ದೂರ ವಾಕ್​ ಮಾಡುತ್ತೇವೆ ಇದು ಒಳ್ಳೆಯದೇ ಆದರೆ ನಮಗೆ ಅರಿವಿದ್ದು ಮಾಡುವ ವ್ಯಾಯಾಮ ನಮಗೆ ನವಚೈತನ್ಯ ನೀಡುತ್ತದೆ. ಹೀಗಾಗಿ ನಡಿಗೆ ಜೊತೆಗೆ ಸರಳ ವ್ಯಾಯಾಮ ಮಾಡಬಹುದು. ಈ ಹವ್ಯಾಸ ಮಾಡಿಕೊಂಡರೇ ನಿಮ್ಮ ಜೀವನದಲ್ಲಿ ನಗೆಟಿವ್​ ಯೋಚನೆ ಮಾಯವಾಗಿ ಪಾಸಿಟಿವ್​ ಆಲೋಚನೆ ವೃದ್ದಿಯಾಗುತ್ತದೆ. ಆಗ ನೀವು ಮಾಡುವ ಎಲ್ಲ ಕೆಲಸಗಳು ಯಶಸ್ವಿಯಾಗುತ್ತೇವೆ.

Next Story

RELATED STORIES