Top

ಇಂದು 3 ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಬಂದು ತಲುಪಲಿದೆ

ಮೂರೂ ರಫೇಲ್‌ಗಳು ಇಂದು ಸಂಜೆ 7ಕ್ಕೆ ಗುಜರಾತ್‌ಗೆ ಬಂದಿಳಿಯುವ ಸಾಧ್ಯತೆ ಇದೆ.

ಇಂದು 3 ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಬಂದು ತಲುಪಲಿದೆ
X

ನವದೆಹಲಿ: ಇಂದು ಭಾರತಕ್ಕೆ ಮೂರು ರಫೇಲ್‌ ಜೆಟ್​ ಯುದ್ಧ ವಿಮಾನಗಳು ತಲುಪಲಿವೆ. ಫ್ರಾನ್ಸ್‌ನಿಂದ ನೇರವಾಗಿ ಭಾರತಕ್ಕೆ ಹಾರಾಟ ನಡೆಸಲಿರುವ ರಫೇಲ್‌ಗಳು ಮಾರ್ಗ ಮಧ್ಯದಲ್ಲೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ವಾಯುಪಡೆ ಸಹಕಾರದಿಂದ ಇಂಧನ ಪೂರೈಸಿಕೊಳ್ಳಲಿವೆ. ಮೂರೂ ರಫೇಲ್‌ಗಳು ಇಂದು ಸಂಜೆ 7ಕ್ಕೆ ಗುಜರಾತ್‌ಗೆ ಬಂದಿಳಿಯುವ ಸಾಧ್ಯತೆ ಇದೆ.

ಈ ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ಅಂಬಾಲ ವಾಯುನೆಲೆಯಲ್ಲಿರುವ 'ಗೋಲ್ಡನ್ ಆ್ಯರೋಸ್‌ ಸ್ಕ್ವಾಡ್ರನ್' ಸೇರ್ಪಡೆಯ ಮೂಲಕ ಒಟ್ಟು ರಫೇಲ್‌ ಬಲ 14ಕ್ಕೆ ಹೆಚ್ಚಲಿದೆ. ಯುಎಇ ವಾಯುಪಡೆಯ 'ಏರ್‌ಬಸ್ 330 ಮಲ್ಟಿ ರೋಲ್ ಟ್ರಾನ್ಸ್‌ಪೋರ್ಟ್' ಟ್ಯಾಂಕರ್‌ಗಳು ಮಾರ್ಗ ಮಧ್ಯದಲ್ಲೇ 'ಗಲ್ಫ್‌ ಆಫ್ ಒಮಾನ್' ಪ್ರದೇಶದಲ್ಲಿ ರಫೇಲ್‌ ಜೆಟ್‌ಗಳಿಗೆ ಇಂಧನ ಪೂರೈಸಲಿವೆ.

ಏಪ್ರಿಲ್‌ ಅಂತ್ಯದೊಳಗೆ ಭಾರತಕ್ಕೆ ಐದು ಹೆಚ್ಚುವರಿ ರಫೇಲ್‌ ಜೆಟ್‌ಗಳನ್ನು ಹಸ್ತಾಂತರಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ನಿಗದಿಯಂತೆ ನಾವು ಜೆಟ್‌ಗಳ ಪೂರೈಕೆ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ಫ್ರಾನ್ಸ್‌ನ ರಾಯಭಾರಿ ಎಮಾನ್ಯುಯೆಲ್‌ ಲೆನೈನ್‌ ಹೇಳಿದ್ದಾರೆ.

Next Story

RELATED STORIES