Top

ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗೆ ಕರೆ ನೀಡಿದ ಮಮತಾ ಬ್ಯಾನರ್ಜಿ

ಕಳೆದ ರಾತ್ರಿ ತೀವ್ರವಾಗಿ ಗಾಯವಾಗಿರುವುದು ಸತ್ಯ. ಕಾಲು, ತಲೆ ಹಾಗೂ ಎದೆಯಲ್ಲಿ ತುಂಬಾ ನೋವಿನ ಅನುಭವವಾಗಿದೆ.

ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗೆ ಕರೆ ನೀಡಿದ ಮಮತಾ ಬ್ಯಾನರ್ಜಿ
X

ಕೋಲ್ಕತ್ತ: ಕಾಲಿಗೆ ಗಾಯ ಮಾಡಿಕೊಂಡು ಕೋಲ್ಕತ್ತದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗರಲ್ಲಿ ಬುಧವಾರ ಮನವಿ ಮಾಡಿಕೊಂಡಿದ್ದಾರೆ.

ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ ಅವರು, ಕೆಲವೇ ದಿನಗಳಲ್ಲಿ ಚುನಾವಣೆ ಅಖಾಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ ಜೊತೆಗೆ ಅಗತ್ಯವಿದ್ದರೆ ವೀಲ್‌ಚೇರ್ ಮೂಲಕ ಪ್ರಚಾರ ಮಾಡುವುದಾಗಿ ತಿಳಿಸಿದ್ದು, ಸದ್ಯ ತಮ್ಮ ಬೆಂಬಲಿಗರಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಕರೆ ನೀಡಿರುವ ಅವರು, ಜನಸಾಮಾನ್ಯರಿಗೆ ತೊಂದರೆ ಆಗುವಂತೆ ವರ್ತಿಸಬೇಡಿ ಎಂದು ವಿನಂತಿಸಿದರು.

ಶಾಂತಿ ಹಾಗೂ ಸಂಯಮವನ್ನು ಪಾಲಿಸುವಂತೆ ನಾನು ನನ್ನ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಜನ ಸಾಮಾನ್ಯರಿಗೆ ಮನವಿ ಮಾಡುತ್ತೇನೆ. ಕಳೆದ ರಾತ್ರಿ ತೀವ್ರವಾಗಿ ಗಾಯವಾಗಿರುವುದು ಸತ್ಯ. ಕಾಲು, ತಲೆ ಹಾಗೂ ಎದೆಯಲ್ಲಿ ತುಂಬಾ ನೋವಿನ ಅನುಭವವಾಗಿದೆ. ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ಹೇಳಿದರು.

Next Story

RELATED STORIES